fbpx
ಸಮಾಚಾರ

ಕಂಗನಾ ವಿರುದ್ಧ ದೇಶದ್ರೋಹ ಪ್ರಕರಣ: ನಟಿ ವಿರುದ್ಧ ಪೊಲೀಸರಿಂದ ಸಮನ್ಸ್

ಮುಂಬೈ ಪೊಲೀಸರು ಮತ್ತೊಮ್ಮೆ ಬಾಲಿವುಡ್ ನಟಿ ಕಂಗನಾ ರಾಣಾವತ್ ಹಾಗೂ ಅವರ ಸಹೋದರಿ ರಂಗೋಲಿ ರಾಣಾವತ್​​ಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಹೊರಡಿಸಿದ್ದಾರೆ.

ಇದೇ ತಿಂಗಳ 10 ನೇ ತಾರೀಕಿನಂದು ವಿಚಾರಣೆಗೆ ಹಾಜರಾಗುವಂತೆ ಮುಂಬೈ ಪೊಲೀಸರು ರಾಣಾವತ್ ಸಹೋದರಿಯರಿಗೆ ಸಮನ್ಸ್​ನಲ್ಲಿ ತಿಳಿಸಿದ್ದಾರೆ. ಈ ಇಬ್ಬರೂ ಸಮುದಾಯಗಳ ನಡುವೆ ಒಡಕು ಮೂಡಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಮುಂಬೈನ ಬಾಂದ್ರಾ ಕೋರ್ಟ್ ಆದೇಶದಂತೆ ಕಂಗನಾ ಮತ್ತು ಅವರ ಸಹೋದರಿ ರಂಗೋಲಿ ವಿರುದ್ಧ ಎಫ್‌ಐಆರ್‌ ಸಂಬಂಧ ಈ ಸಮನ್ಸ್ ಜಾರಿಯಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ಸಮುದಾಯಗಳ ನಡುವೆ ಒಡಕು ಮೂಡಿಸಲು ಪ್ರಯತ್ನಿಸಿದ್ದಾರೆ ಎಂಬ ಆರೋಪದ ಮೇಲೆ ಕೇಸ್ ದಾಖಲಾಗಿದೆ.

ಟ್ವೀಟ್ ಹಾಗೂ ಸಂದರ್ಶನಗಳ ಮೂಲಕ ಧಾರ್ಮಿಕ ಅಸಮಾನತೆಯನ್ನು ಸೃಷ್ಟಿಸುವ ಯತ್ನದ ಆರೋಪದ ಮೇಲೆ ಬಾಲಿವುಡ್ ನಟಿಕಂಗನಾ ರನೌತ್ ವಿರುದ್ಧ ಮುಂಬೈನ ಬಾಂದ್ರಾ ನ್ಯಾಯಾಲಯ ಕಳೆದ ತಿಂಗಳು ಎಫ್‌ಐಆರ್ (ಮೊದಲ ಮಾಹಿತಿ ವರದಿ) ದಾಖಲಿಗೆ ಆದೇಶಿಸಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top