fbpx
ಸಮಾಚಾರ

ಕುಸುಮಾಗೆ ಮತ ನೀಡಿ ಬೆಂಬಲಿಸುವಂತೆ ಡಿಕೆ ರವಿ ತಾಯಿ-ತಂದೆ ಮನವಿ: ಸೊಸೆ ಪರ ಮತಯಾಚನೆ ಮಾಡಿದ ಅತ್ತೆ ಗೌರಮ್ಮ

ಅರ್‌.ಆರ್‌.ನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಪರವಾಗಿ ಅವರ ಅತ್ತೆ, ದಿವಂಗತ ಡಿ.ಕೆ. ರವಿ ಅವರ ತಾಯಿ ಗೌರಮ್ಮ ಸೋಮವಾರ ಮತಯಾಚಿಸಿದ್ದಾರೆ. ಈ ಕುರಿತು ಒಂದೂವರೆ ನಿಮಿಷಗಳ ವಿಡಿಯೊದಲ್ಲಿ ಸೊಸೆಯನ್ನು ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ.

“ನಾಲ್ಕು ದಿನಗಳಾಗಲಿ, ನಾಲ್ಕು ವರ್ಷಗಳಾಗಲಿ ನನ್ನ ಜೊತೆಯಲ್ಲಿ ನನ್ನ ಮಗಳ ತರ, ನನ್ನ ಸೊಸೆ ತರ ಎರಡು ದಿನ ಬಾಳಿದ್ದೇವೆ. ನಾನು ಹಿಂದೆ ಮಾತನಾಡಿದ್ದೂ ನಿಜ, ಆದರೆ ಕಳೆದ ಒಂದು ವಾರದಿಂದ ಈಚೆಗೆ ಅವಳು ಕಣ್ಣಲ್ಲಿ ನೀರು ಹಾಕೋದನ್ನು ನೋಡಿ ಸಂಟಕ ಆಯ್ತು. ಆ ಸಂಕಟದಿಂದಲೇ ನಾನು ಇವತ್ತು ನಿಮ್ಮೆದುರು ಮಾತನಾಡುತ್ತಿದ್ದೇನೆ” ಎಂದು ಗೌರಮ್ಮ ಹೇಳಿದ್ದಾರೆ.

“ಆಕೆ ಕಣ್ಣೀರಾಕುವುದನ್ನು ನೋಡಿ ವಾರದಿಂದ ಈಚೆಗೆ ನನಗೆ ಸಂಕಟವಾಗಿದೆ. ಅದಕ್ಕಾಗಿ ಹೀಗೆ ಮಾತನಾಡುತ್ತಿದ್ದೇನೆ. ಎಲ್ಲರೂ ಅಕ್ಕ ತಂಗಿಯರಂತೆ, ಅಣ್ಣ, ತಮ್ಮಂದಿರಂತೆ ಆಕೆಯನ್ನು ಮುಂದೆ ತಂದರೆ, ಅವಳ ಜತೆ ನಾನು ಇದ್ದು, ಆಗಬೇಕಾಗಿರುವ ಕೆಲಸಗಳ ಬಗ್ಗೆ ಹೇಳಿಕೊಡಲು ಸಿದ್ಧಳಿದ್ದೇನೆ. ಎಲ್ಲರೂ ನನ್ನ ಸೊಸೆ, ಮಗಳಿಗೆ ಮರೆಯದೆ ಮತ ನೀಡಬೇಕು. ಡಿ.ಕೆ ರವಿಯಂತೆಯೇ ಆಕೆ ನಿಂತು ಕೆಲಸ ಮಾಡುತ್ತಾಳೆಂದು ಆರ್‌.ಆರ್‌.ನಗರದ ಜನತೆಯಲ್ಲಿ ಮನವಿ ಮಾಡುತ್ತೇನೆ” ಎಂದು ಸೊಸೆ ಕುಸುಮಾ ಪರವಾಗಿ ಮತಯಾಚಿಸಿದ್ದಾರೆ.

ಅಂದಹಾಗೆ ಈ ಹಿಂದೆ ಉಪ ಚುನಾವಣೆಯಲ್ಲಿ ಡಿ.ಕೆ.ರವಿ ಫೋಟೊ ಬಳಸಿದರೆ ಬೆಂಕಿ ಹಚ್ಚುತ್ತೇನೆ ಎಂದು ಗೌರಮ್ಮ, ಸೊಸೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಕುಸುಮಾ ಕಾಂಗ್ರೆಸ್‌ನಿಂದ ಅಭ್ಯರ್ಥಿ ಎಂದು ತಿಳಿದ ತಕ್ಷಣ ಕುಸುಮಾ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ್ದ ರವಿ ತಾಯಿ, ಸೊಸೆ ತಮ್ಮನ್ನು ಭೇಟಿ ಮಾಡದೇ ನಿರ್ಲಕ್ಷ್ಯ ಮಾಡಿದ್ದು, ಅವಳಿಗೆ ತಮ್ಮ ಮಗನ ಹೆಸರು ಹೇಳಲು ಅರ್ಹತೆಯಿಲ್ಲ. ಈ ಚುನಾವಣೆಯಲ್ಲಿ ತಮ್ಮ ಮಗನ ಹೆಸರು ಬಳಕೆ ಮಾಡಿದರೆ ತಾವು ಸುಮ್ಮನಿರುವುದಿಲ್ಲ ಎಂದು ಹೇಳಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top