fbpx
ಸಮಾಚಾರ

ಹಿಂದೂ ಭಾವನೆಗಳಿಗೆ ಧಕ್ಕೆ ಆರೋಪ; ಅಮಿತಾಭ್ ಬಚ್ಚನ್​ ವಿರುದ್ಧ ಎಫ್​​ಐಆರ್​ ದಾಖಲು

ಜನಪ್ರಿಯ ರಿಯಾಲಿಟಿ ಶೋ “ಕೌನ್ ಬನೇಗಾ ಕರೋಡ್ ಪತಿ”ನಿರೂಪಕ ಅಮಿತಾಬ್ ಬಚ್ಚನ್ ಮತ್ತು ಸೋನಿ ಟಿವಿ ಕಾರ್ಯಕ್ರಮದ ತಯಾರಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಶುಕ್ರವಾರದ “ಕರ್ಮವೀರ್” ವಿಶೇಷ ಸಂಚಿಕೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಸಂಬಂಧಿಸಿ ಲಖನೌನಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಎಪಿಸೋಡ್​​ನಲ್ಲಿ ಸಾಮಾಜಿಕ ಹೋರಾಟಗಾರ ಬೆಜ್ವಾಡಾ ವಿಲ್ಸನ್ ಹಾಗೂ ನಟ ಅನೂಪ್​ ಸೋನಿ ಅತಿಥಿಗಳಾಗಿ ಆಗಮಿಸಿದ್ದರು. ಈ ವೇಳೆ ಮನುಸ್ಮೃತಿ ಕುರಿತಾಗಿ ಪ್ರಶ್ನೆಯೊಂದನ್ನ ಕೇಳಲಾಯ್ತು.

ಪ್ರಶ್ನೆ ಹೀಗಿದೆ:

1927ರ ಡಿಸೆಂಬರ್ 25ರಂದು ಡಾ.ಬಿ.ಆರ್.ಅಂಬೇಡ್ಕರ್​ ಹಾಗೂ ಅವರ ಅನುಯಾಯಿಗಳು ಯಾವ ಗ್ರಂಥದ ಪ್ರತಿಗಳನ್ನು ಸುಟ್ಟು ಹಾಕಿದರು?

ಆಯ್ಕೆಗಳು ಹೀಗಿವೆ:
ಎ. ವಿಷ್ಣುಪುರಾಣ
ಬಿ.ಭಗವದ್ಗೀತೆ
ಸಿ.ಋಗ್ವೇದಡಿ.ಮನುಸ್ಮೃತಿ

ಸರಿ ಉತ್ತರ ಮನುಸ್ಮೃತಿ ಆಗಿತ್ತು. ಉತ್ತರ ಘೋಷಿಸಿದ ಬಳಿಕ ಅಮಿತಾಭ್​ ಬಚ್ಚನ್ ಆ ಘಟನೆಯ ಬಗ್ಗೆ ಮಾತನಾಡುತ್ತಾ, ಡಾ.ಬಿ.ಆರ್.ಅಂಬೇಡ್ಕರ್​ ಅವರು ಪ್ರಾಚೀನ ಹಿಂದೂ ಧರ್ಮ ಗ್ರಂಥದ ಪ್ರತಿಗಳನ್ನು ಖಂಡಿಸಿ ಸುಟ್ಟುಹಾಕಿದರು ಎಂದು ವಿವರಣೆ ನೀಡಿದ್ದಾರೆ. ಡಾ. ಬಿ.ಆರ್ ಅಂಬೇಡ್ಕರ್, ಜಾತಿ ತಾರತಮ್ಯ ಹಾಗೂ ಅಸ್ಪೃಶ್ಯತೆಯನ್ನ ಸಮರ್ಥಿಸಕೊಳ್ಳುವ ಪ್ರಾಚೀನ ಹಿಂದೂ ಕೃತಿ ಮನುಸ್ಮೃತಿಯನ್ನ ವಿರೋಧಿಸಿದ್ದರು ಹಾಗೂ ಅದರ ಪ್ರತಿಗಳನ್ನ ಸುಟ್ಟುಹಾಕಿದ್ದರು ಎಂದು ಅಮಿತಾಬ್ ಹೇಳಿದರು.

ಇದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ಹಾಗೂ ವಿರೋಧಕ್ಕೆ ಕಾರಣವಾಗಿದೆ. ನೆಟ್ಟಿಗರು ಟ್ವಿಟ್ಟರ್​ನಲ್ಲಿ ಕಾರ್ಯಕ್ರಮದ​ ವಿರುದ್ಧ ಕಿಡಿಕಾರಿದ್ದಾರೆ. ಸಿನಿಮಾ ನಿರ್ಮಾಪಕ ವಿವೇಕ್​ ಅಗ್ನಿಹೋತ್ರಿ ಟ್ವಿಟರ್​​ನಲ್ಲಿ ಹೀಗೆ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top