fbpx
ಸಮಾಚಾರ

IPL ಪದಾರ್ಪಣೆ ಆವೃತ್ತಿಯಲ್ಲಿಯೇ 2 ದಾಖಲೆ ನಿರ್ಮಿಸಿದ ದೇವದತ್‌ ಪಡಿಕ್ಕಲ್‌

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ದೇವದತ್‌ ಪಡಿಕ್ಕಲ್‌ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅರ್ಧಶತಕ ಸಿಡಿಸಿ ಎರಡೆರಡು ದಾಖಲೆಗಳನ್ನು ಧೂಳಿಪಟ ಮಾಡಿದ್ದಾರೆ.

ಹೌದು.. ಡಿಸಿ ವಿರುದ್ಧದ ಪಂದ್ಯದಲ್ಲಿ 41 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ದೇವದತ್ ಪಡಿಕ್ಕಲ್ ಶಿಖರ್‌ ಧವನ್‌ ಹಾಗೂ ಶ್ರೇಯಸ್‌ ಅಯ್ಯರ್‌ ದಾಖಲೆಗಳನ್ನು ಹಿಂದಿಕ್ಕಿದರು. ಪದಾರ್ಪಣೆ ಆವೃತ್ತಿಯಲ್ಲಿಯೇ ಅತಿ ಹೆಚ್ಚು ಅರ್ಧಶತಕಗಳನ್ನು ಸಿಡಿಸಿದ ರಾಷ್ಟ್ರೀಯ ತಂಡ ಪ್ರತಿನಿಧಿಸದ ಆಟಗಾರ ಎಂಬ ದಾಖಲೆಯನ್ನು ದೇವದತ್‌ ಪಡಿಕ್ಕಲ್‌ ಮಾಡಿದರು.

ಅವರು ಪ್ರಸಕ್ತ ಆವೃತ್ತಿಯಲ್ಲಿ 14 ಇನಿಂಗ್ಸ್‌ಗಳಿಂದ ಐದು ಅರ್ಧಶತಕಗಳನ್ನು ಗಳಿಸಿದ್ದಾರೆ. ಈ ಹಿಂದೆ 2008ರಲ್ಲಿ ಶಿಖರ್‌ ಧವನ್‌(4 ಅರ್ಧಶತಕಗಳು) ಹಾಗೂ 2014ರಲ್ಲಿ ಶ್ರೇಯಸ್‌ ಅಯ್ಯರ್‌ (4 ಅರ್ಧಶತಕಗಳು) ಮಾಡಿದ್ದರು. ಧವನ್‌ ಮತ್ತು ಅಯ್ಯರ್‌ ಡೆಲ್ಲಿ ಡೇರ್‌ಡೆವಿಲ್ಸ್ ಪರ ಈ ದಾಖಲೆಯನ್ನು ಮಾಡಿದ್ದರು. ಇದೀಗ ಈ ಇಬ್ಬರ ಹೆಸರಿನಲ್ಲಿದ್ದ ಜಂಟಿ ದಾಖಲೆಯನ್ನು ಕನ್ನಡಿಗ ಪುಡಿ ಪುಡಿ ಮಾಡಿದರು.

ಇದಲ್ಲದೆ, ಚೊಚ್ಚಲ ಐಪಿಎಲ್ ಸೀಸನ್ ನಲ್ಲಿ 472ರನ್ ಗಳಿಸಿದ್ದು, ಇದು ಕೂಡಾ ಹೊಸ ದಾಖಲೆಯಾಗಿದೆ. 5ನೇ ಅರ್ಧಶತಕ ಗಳಿಸುವ ಮೂಲಕ ಈಗ ಈ ಸೀಸನ್ ನಲ್ಲಿ ಆರ್ ಸಿಬಿ ಪರ 14 ಇನ್ನಿಂಗ್ಸ್ ಗಳಲ್ಲಿ ಅಧಿಕ ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಇಲ್ಲಿ ತನಕ ಪಡಿಕ್ಕಲ್ 51 ಬೌಂಡರಿ, 8 ಸಿಕ್ಸರ್ ಸಿಡಿಸಿದ್ದು 472ರನ್ ಗಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top