fbpx
ಸಮಾಚಾರ

ಪ್ರತ್ಯೇಕ ಧ್ವಜ ಬಗ್ಗೆ ಜಿ.ಸಿ ಚಂದ್ರಶೇಖರ್ ನೇರ ಸಂವಾದ: ನೀವೂ ಭಾಗವಹಿಸಬಹುದು

ಕಳೆದ ಎರಡು ವರ್ಷಗಳಿಂದ ಬೂದಿ ಮುಚ್ಚಿದ ಕೆಂಡದಂತೆ ಇದ್ದ ಪ್ರತ್ಯೇಕ ನಾಡಧ್ವಜ ಕೂಗು ಈಗ ಮತ್ತೆ ಕಾವು ಪಡೆದುಕೊಂಡಿದೆ. ನವೆಂಬರ್‌ 01ರಂದು ಕನ್ನಡ ರಾಜ್ಯೋತ್ಸವದಂದು ಕನ್ನಡ ಬಾವುಟ ಹಾರಿಸದೆ ಕೇವಲ ರಾಷ್ಟ್ರಧ್ವಜ ಹಾರಿಸಿ ನಾಡಧ್ವಜಕ್ಕೆ ಅವಮಾನ ಮಾಡಿದ ಘಟನೆ ವರದಿಯಾಗುತ್ತಿದ್ದಂತೆ ಕನ್ನಡಾಭಿಮಾನಿಗಳಿಂದ ರಾಜ್ಯ ಸರ್ಕಾರದ ನಡೆಗೆ ವಿರೋಧ ವ್ಯಕ್ತವಾಗಿದೆ.

ಸರ್ಕಾರವನ್ನು ಹಲವಾರು ಕನ್ನಡಪರ ಹೋರಾಟಗಾರರು, ಕನ್ನಡ ಸಂಘಟನೆಗಳು ಖಂಡಿಸಿದ್ದು, ನಾಡಧ್ವಜಕ್ಕೆ ಗೌರವ ತೋರುವ ಸಲುವಾಗಿ ನಮ್ಮ ಧ್ವಜ ನಮ್ಮ ಹೆಮ್ಮೆ ಎಂಬ ಹ್ಯಾಷ್‌ಟ್ಯಾಗನ್ನು ಟ್ವಿಟರಿನಲ್ಲಿ ಟ್ರೆಂಡ್‌ ಮಾಡಿದ್ದಾರೆ.

ಈಗ ಇದೆ ವಿಚಾರವಾಗಿ ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ ಅವರು ಸಾರ್ವಜನಿಕರ ಅಭಿಪ್ರಾಯಗಳನ್ನು ಸಂಗ್ರಹಿಸಲು ನೇರ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. 5-11-2020 ಗುರುವಾರ ಸಂಜೆ 5 ಗಂಟೆಗೆ ಈ ನೇರ ಸಂವಾದ ಕಾರ್ಯಕ್ರಮ ನಡೆಯಲಿದೆ.

ಜಿಸಿ ಚಂದ್ರಶೇಖರ್ ಅವರ ಅಧಿಕೃತ ಫೇಸ್ಬುಕ್ ಮತ್ತು ಟ್ವಿಟ್ಟರ್ ಖಾತೆಯಲ್ಲಿ ಲೈವ್ ನಡೆಯಲಿದ್ದು ನೀವು ಕೂಡ ಈ ಲೈವ್ ಸಂವಾದದಲ್ಲಿ ಭಾಗವಹಿಸಿ ಕರ್ನಾಟಕದ ಬಾವುಟದ ವಿಚಾರವಾಗಿ ನಿಮ್ಮ ಪ್ರಶ್ನೆಗಳನ್ನು ಮತ್ತು ಅಭಿಪ್ರಾಯಗಳನ್ನು ಸಂಸದರ ಮುಂದೆ ಹಂಚಿಕೊಳ್ಳಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top