fbpx
ಸಮಾಚಾರ

ಆ’ತ್ಮಹ’ತ್ಯೆಗೆ ಪ್ರಚೋದನೆ ಪ್ರಕರಣ: ವಿವಾದಾತ್ಮಕ ಪತ್ರಕರ್ತ ಅರ್ನಬ್ ಗೋಸ್ವಾಮಿ ಅರೆಸ್ಟ್

2018 ರಲ್ಲಿ ನಡೆದ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಮತ್ತು ಅವರ ತಾಯಿ ಕುಮುದ್ ನಾಯಕ್ ಅವರ ಸಾವಿಗೆ ಸಂಬಂಧಿಸಿದಂತೆ, ಅಲಿಬಾಗ್ ಪೊಲೀಸರು ಬುಧವಾರ ಬೆಳಿಗ್ಗೆ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರನ್ನು ವಶಕ್ಕೆ ಪಡೆದಿದ್ದಾರೆ.

ಇಂದು ಬೆಳಗ್ಗೆ ಮುಂಬೈಯಲ್ಲಿರುವ ಅರ್ನಬ್ ಗೋಸ್ವಾಮಿ ನಿವಾಸಕ್ಕೆ ಹಠಾತ್ ದಾಳಿ ನಡೆಸಿದ ಮುಂಬೈ ಪೊಲೀಸರು ಅವರನ್ನು ಬಂಧಿಸಿ ಕರೆದೊಯ್ದಿದ್ದಾರೆ.

ಮೇ 2018 ರಲ್ಲಿ ಅಲಿಬಾಗ್‌ನಲ್ಲಿ 53 ವರ್ಷದ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಮತ್ತು ಅವರ ತಾಯಿ ಕುಮುದ್ ನಾಯಕ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಮಾತ್ರವಲ್ಲದೆ ಡೆತ್ ನೋಟ್ ನಲ್ಲಿ ಅನ್ವಯ್ ಕುಮಾರ್, ತನ್ನ ಸಾವಿಗೆ ಫಿರೋಜ್ ಶೇಕ್ ಮತ್ತು ನಿತೀಶ್ ಸಾರ್ದ ಹಾಗೂ ಅರ್ನಬ್ ಗೋಸ್ವಾಮಿ ಅವರೇ ಕಾರಣ ಎಂದು ತಿಳಿಸಿದ್ದರು. ಈ ಮೂವರು ತನಗೆ 5.40 ಕೋಟಿ ಹಣವನ್ನು ಪಾವತಿಸದೆ, ಹಣಕಾಸಿನ ನಿರ್ಬಂಧ ಹೇರಿದ್ದಾರೆ ಎಂದು ಆರೋಪಿಸಿದ್ದರು.

ಕಳೆದ ಕೆಲ ದಿನಗಳ ಹಿಂದೆ ಟಿವಿ ವಾಹಿನಿಗಳ ಟಿಆರ್‌ಪಿ ರೇಟಿಂಗ್‌ನಲ್ಲಿ ಗೋಲ್‌ಮಾಲ್ ನಡೆಸುತ್ತಿರುವ ವಿಚಾರ ಭಾರೀ ಸದ್ದು ಮಾಡಿತ್ತು. ಇದೇ ಆರೋಪ ರಿಪಬ್ಲಿಕ್ ಟಿವಿ ವಿರುದ್ಧವೂ ಕೇಳಿ ಬಂದಿತ್ತು. ಈ ವೇಳೆ ದಾಖಲೆಗಳನ್ನು ನಿಡಿದ್ದ ಅರ್ನಬ್ ಗೋಸ್ವಾಮಿ ತಮ್ಮ ವಾಹಿನಿ ವಿರುದ್ಧ ಕೇಳಿ ಬಂದಿದ್ದ ಆರೋಪವನ್ನು ನಿರಾಕರಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top