fbpx
ಸಮಾಚಾರ

17ರ ಹುಡುಗಿಯನ್ನು ವಿವಾಹವಾದ 78ರ ತಾತ- ಮದುವೆಯಾದ 22 ದಿನಕ್ಕೇ ವಿಚ್ಛೇದನ; ಕಾರಣ!?

78 ವರ್ಷದ ಅಜ್ಜ 17ರ ಹುಡುಗಿಯನ್ನು ವಿವಾಹವಾಗುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಆದರೆ ವಿವಾಹವಾದ ಕೇವಲ 22 ದಿನಗಳಲ್ಲಿ ವಿಚ್ಛೇದನ ಪಡೆದಿದ್ದಾರೆ. ಅದೂ ಸಹ 78 ವರ್ಷದ ಅಜ್ಜನೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದು ವಿಶೇಷ.

ಇಂಡೋನೇಷ್ಯಾದಲ್ಲಿ ಈ ಘಟನೆ ನಡೆದಿದ್ದು, ದಂಪತಿಯನ್ನು 78 ವರ್ಷದ ಅಬಾ ಸರ್ನಾ ಹಾಗೂ ಪತ್ನಿ ನೋನಿ ನವಿತಾ ಎಂದು ಗುರುತಿಸಲಾಗಿದೆ. ಕಳೆದ ತಿಂಗಳು ಈ ಜೋಡಿ ವಿವಾಹವಾಗಿದ್ದು, ಕಳೆದ ವಾರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವೃದ್ಧ ಹಾಗೂ ಹುಡುಗಿಯ ಮಧ್ಯೆ ವಯಸ್ಸಿನ ವ್ಯತ್ಯಾಸ ಹೆಚ್ಚಿದ್ದರಿಂದ ಈ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು..

ಅರ್ಬಾ ಪತ್ನಿ ನೋನಿಗೆ ಕಳುಹಿಸಿದ್ದ ವಿಚ್ಛೇದನ ಪತ್ರ ಕಂಡು ನವಿತಾ ಕುಟುಂಬದವರು ಆಘಾತಕ್ಕೊಳಗಾಗಿದ್ದರು. ಯಾಕೆಂದರೆ, ಇವರಿಬ್ಬರ ಸಂಬಂಧದಲ್ಲಿ ಯಾವುದೇ ತೊಂದರೆ ಇರಲಿಲ್ಲ. ಹೀಗಾಗಿ, ಈ ವಿಚ್ಛೇದನ ಇವರಿಗೂ ಅಚ್ಚರಿ ತಂದಿತ್ತು.

“ಇವರಿಬ್ಬರ ಸಂಬಂಧದಲ್ಲಿ ಯಾವುದೇ ತೊಂದರೆ ಇರಲಿಲ್ಲ. ಇದ್ದಕ್ಕಿದ್ದಂತೆಯೇ ಇದು ನಡೆದು ಹೋಗಿತ್ತು. ಹೀಗಾಗಿ, ನಾನು ಆಘಾತಕ್ಕೊಳಗಾಗಿದ್ದೆ. ನಮ್ಮ ಕುಟುಂಬಕ್ಕೂ ಅಬಾ ಅವರಿಗೂ ಯಾವುದೇ ಸಮಸ್ಯೆ ಇಲ್ಲ. ಆದರೆ, ಅಬಾ ಮತ್ತು ಅವರ ಕುಟುಂಬದಿಂದ ಸಮಸ್ಯೆ ಎದುರಾಗಿತ್ತು. ಯಾಕೆಂದರೆ, ಅವರು ಈ ವಿವಾಹಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು’ ಎಂದು ನೋನಿ ನವಿತಾ ಸಹೋದರಿ ಇಯಾನ್ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top