fbpx
ಸಮಾಚಾರ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಅಜಯ್ ರಾವ್ ಮತ್ತು ನಟಿ ಪದ್ಮಿನಿ

ಮುಕ್ತ ಧಾರಾವಾಹಿಯ ನಂಜುಂಡಿ ಪಾತ್ರದ ಮೂಲಕ ಖ್ಯಾತಿ ಗಳಿಸಿದ್ದ ಅಜಯ್ ರಾಜ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಜಯ್ ರಾಜ್ ಬಹುಕಾಲದ ಗೆಳತಿ ಪದ್ಮಿನಿ ದೇವನಹಳ್ಳಿ ಜೊತೆ ವಿವಾಹವಾಗಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಮಹಾದೇವಿ ಧಾರಾವಾಹಿಯ ಜಾಜಿ ಪಾತ್ರದಲ್ಲಿ ಪದ್ಮಿನಿ ನಟಿಸಿದ್ದರು.

 

 

ಕಳೆದ ವರ್ಷವೇ ಈ ಜೋಡಿಯ ನಿಶ್ಚಿತಾರ್ಥ ನಡೆದಿತ್ತು. ಕನ್ನಡ ಚಿತ್ರರಂಗದ ಕೆಲ ನಟ-ನಟಿಯರು ಈ ನಿಶ್ಚಿತಾರ್ಥದಲ್ಲಿ ಭಾಗಿಯಾಗಿದ್ದರು. ಅಜಯ್ ರಾಜ್ ಮತ್ತು ಪದ್ಮಿನಿ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ತೀರ ಸರಳವಾಗಿ ನಡೆದ ಮದುವೆ ಸಮಾರಂಭದಲ್ಲಿ ಕುಟುಂಬದವರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದರು.

ಅಜಯ್ ರಾಜ್ ಕನ್ನಡದ ಅನೇಕ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಕೆಲ ತಿಂಗಳುಗಳ ಹಿಂದೆ ಅವರ ನಟನೆಯ ‘ಮುಂದಿನ ನಿಲ್ದಾಣ’ ಸಿನಿಮಾ ರಿಲೀಸ್ ಆಗಿತ್ತು. ‘ಮುಂದುವರೆದ ಅಧ್ಯಾಯ’ ಸಿನಿಮಾದಲ್ಲಿ ಅಜಯ್ ರಾಜ್ ಅವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top