fbpx
ಸಮಾಚಾರ

ಸೂಪರ್‌ ಹಿಟ್ ಮಲಯಾಳಂ ಸಿನಿಮಾದ ರಿಮೇಕ್‌ನಲ್ಲಿ ‘ಕಿಚ್ಚ ಸುದೀಪ್‌-ಪವನ್ ಕಲ್ಯಾಣ್’ ನಟನೆ?

ಮಲಯಾಳಂನಲ್ಲಿ ಹೆಚ್ಚು ಪ್ರಶಂಸೆ ಪಡೆದಿರುವ ‘ಅಯ್ಯಪ್ಪನುಂ ಕೊಶಿಯಮ್’ ಸಿನಿಮಾ ತೆಲುಗಿಗೆ ರೀಮೇಕ್ ಆಗುತ್ತಿದ್ದು, ಈ ಚಿತ್ರದಲ್ಲಿ ಪವನ್ ಕಲ್ಯಾಣ್ ಅಭಿನಯಿಸುತ್ತಿದ್ದಾರೆ. ಇನ್ನೂ ಈ ಚಿತ್ರಕ್ಕೆ ಹೆಸರಿಟ್ಟಿಲ್ಲ, ಆಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಸಾಗರ್ ಕೆ ಚಂದ್ರ ನಿರ್ದೇಶಿಸುತ್ತಿದ್ದಾರೆ. ಸಿತಾರಾ ಎಂಟರ್‍ಟೈನ್ಮೆಂಟ್ ಬ್ಯಾನರ್ ಅಡಿ ಎಸ್.ನಾಗವಂಶಿ ಸಿನಿಮಾ ನಿರ್ಮಿಸುತ್ತಿದ್ದಾರೆ.

 

 

ಬಿಜು ಮೆನನ್‌- ಪೃಥ್ವಿರಾಜ್ ಸುಕುಮಾರನ್ ಕಾಂಬಿನೇಷನ್‌ನಲ್ಲಿ ಮೂಡಿಬಂದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಾಸು ಮಾಡಿತ್ತು. ಇದೀಗ ಈ ಸಿನಿಮಾದಲ್ಲಿ ಬಿಜು ಮಾಡಿದ್ದ ಪೊಲೀಸ್ ಅಧಿಕಾರಿ ಪಾತ್ರವನ್ನು ತೆಲುಗಿನಲ್ಲಿ ಪವನ್ ಮಾಡುವ ಸಾಧ್ಯತೆಗಳಿದ್ದು, ಪೃಥ್ವಿರಾಜ್‌ ಮಾಡಿದ್ದ ಕೋಶಿ ಪಾತ್ರಕ್ಕೆ ಸುದೀಪ್‌ ಅವರಿಗೆ ಆಫರ್ ನೀಡಲಾಗಿದೆ ಎಂಬ ಮಾಹಿತಿ ಕೇಳಿಬಂದಿದೆ.

ಪೊಲೀಸ್‌ ಅಧಿಕಾರಿ ಮತ್ತು ಮಾಜಿ ಸೈನಿಕನೊಬ್ಬನ ಮಧ್ಯೆ ನಡೆಯುವ ಅಹಮ್ಮಿನ ಕಥೆ ಇಲ್ಲಿದೆ. ಆ ಇಬ್ಬರು ಹೇಗೆ ಅಹಂ ಬೆಳೆಸಿಕೊಂಡು ಸಾಗುತ್ತಾರೆ, ಅವರಿಬ್ಬರ ಅಹಂನಿಂದ ಅಂತಿಮವಾಗಿ ಏನಾಗುತ್ತಿದೆ ಎಂಬುದೇ ಕಥೆ.

ಪವನ್‌ ಕಲ್ಯಾಣ್‌ ಹಾಗೂ ಸುದೀಪ್‌ ಪರಸ್ಪರ ಎದುರಾಗಿ ನಿಂತರೆ ಚಿತ್ರದ ತೂಕ ಹೆಚ್ಚುತ್ತದೆ ಎಂಬುದು ನಿರ್ದೇಶಕರ ಲೆಕ್ಕಾಚಾರ. ಆದರೆ, ಸುದೀಪ್‌ ಈ ಚಿತ್ರದಲ್ಲಿ ನಟಿಸುವ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಮತ್ತೊಂದು ಕಡೆ ಇದೇ ಚಿತ್ರದಲ್ಲಿ ಕನ್ನಡ ನಟಿ ಪ್ರಣೀತಾ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿಯೂ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top