fbpx
ಸಮಾಚಾರ

ಸಾಂಸಾರಿಕ ಜೀವನಕ್ಕೆ ಕಾಲಿಟ್ಟ ನಟ ರಾಜ್ ದೀಪಕ್ ಶೆಟ್ಟಿ: ಹಿಂದೂ-ಕ್ರೈಸ್ತ ಸಂಪ್ರದಾಯದಂತೆ ಮದುವೆ

ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ಖ್ಯಾತ ನಟ ರಾಜ್ ದೀಪಕ್ ಶೆಟ್ಟಿ ಅವರು ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ ಸೋನಿಯಾ ರಾಡ್ರಿಗಸ್​ ಅವರನ್ನು ವರಿಸಿದ್ದಾರೆ.

ದೇವಾಯಲದಲ್ಲಿ ಹಿಂದೂ ಸಂಪ್ರದಾಯದಂತೆ ಹಾಗೂ ಚರ್ಚ್​ನಲ್ಲಿ ಕ್ರೈಸ್ತ್ರ ಸಂಪ್ರದಾಯದಂತೆ ಎರಡು ರೀತಿಯಲ್ಲೂ ಮದುವೆಯಾಗಿದ್ದಾರೆ ಈ ಜೋಡಿ. ರಾಜ್ ದೀಪಕ್ ಶೆಟ್ಟಿ ಹಾಗೂ ಸೋನಿಯಾ ಬಹಳ ಸಮಯದಿಂದ ಪ್ರೀತಿಸುತ್ತಿದ್ದು, ಕಳೆದ ಜೂನ್​ ತಿಂಗಳಿನಲ್ಲೇ ಇವರ ನಿಶ್ಚಿತಾರ್ಥವಾಗಿತ್ತು. ಕೋವಿಡ್​ನಿಂದಾಗಿ ಮೇ ತಿಂಗಳಿನಲ್ಲಿ ನಡೆಯಬೇಕಿದ್ದ ಇವರ ಮದುವೆ ಮುಂದಕ್ಕೆ ಹೋಗಿತ್ತು.

ಆತಂಕದಿಂದಾಗಿ ಸರಳವಾಗಿ ನಡೆದ ವಿವಾಹ ಸಮಾರಂಭದಲ್ಲಿ ರಾಜ್‌ ದೀಪಕ್‌ ಶೆಟ್ಟಿ ಮತ್ತು ಸೋನಿಯಾ ರಾಡ್ರಿಗಸ್‌ ಕುಟುಂಬದ ವರ್ಗ ಮತ್ತು ಆಪ್ತರಷ್ಟೇ ಭಾಗಿಯಾಗಿದ್ದು, ನೂತನ ವಧುವರರಿಗೆ ಶುಭ ಕೋರಿದರು. ಮಂಗಳೂರಿನ ಪಣಂಬೂರಿನ ನಂದನೇಶ್ವರ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹ ನಡೆಯಿತು. ಜೊತೆಗೆ ಚರ್ಚ್​ನಲ್ಲೂ ಕ್ರೈಸ್ತ್ರ ಸಂಪ್ರದಾಯದಂತೆಯೂ ಮದುವೆಯಾಗಿದ್ದಾರೆ ಈ ಜೋಡಿ.

ಸದ್ಯ ಕನ್ನಡದಲ್ಲಿ ರಾಜ್‌ ದೀಪಕ್‌ ಶೆಟ್ಟಿ ಅಭಿನಯದ “ರಣಂ’, “ಕೋಟಿಗೊಬ್ಬ-3′, “ರವಿಚಂದ್ರ’, “ಗಡಿಯಾರ’ ಚಿತ್ರಗಳು ಬಿಡುಗಡೆಗೆ ತಯಾರಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top