fbpx
ಸಮಾಚಾರ

“ಐ ಆ್ಯಮ್ ವೆರಿ ವೆರಿ ಕಾಸ್ಟ್ಲೀ” ಎಂದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇಂದು ಬೆಳ್ಳಂ ಬೆಳಗ್ಗೆ ತಮ್ಮ ಹೊಸ ಚಿತ್ರಕ್ಕೆ ಮುಹೂರ್ತ ನೆರವೇರಿಸಿದ್ದಾರೆ. ಪೊಗರು ಚಿತ್ರದ ನಂತರ ಧ್ರುವ ಸರ್ಜಾ ಇಂದು ಬೆಂಗಳೂರಿನ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ಚಿತ್ರತಂಡದ ಜೊತೆ ತಮ್ಮ ಹೊಸ ಚಿತ್ರದ ಮುಹೂರ್ತ ಮಾಡಿದ್ದಾರೆ. ‘ದುಬಾರಿ’ ಎಂಬ ಟೈಟಲ್​ನಲ್ಲಿ ಹೊಸ ಸಿನಿಮಾ ಸೆಟ್ಟೇರಲಿದ್ದು, ನಂದ‌ಕಿಶೋರ್ ನಿರ್ದೇಶನ ಮಾಡಲಿದ್ದಾರೆ.

 

 

ಮುಹೂರ್ತದ ಪೂಜೆಯಲ್ಲಿ ಧ್ರುವ ಸರ್ಜಾ, ನಿರ್ದೇಶಕ ನಂದ ಕಿಶೋರ್, ಹಿರಿಯ ನಟ ದೊಡ್ಡಣ್ಣ, ನಟಿ ತಾರಾ, ಬಹದ್ದೂರ್​ ಚೇತನ್ ಕುಮಾರ್, ನಟ-ನಿರ್ದೇಶಕ ಪ್ರಥಮ್ ಹಾಗೂ ಱಪರ್​ ಚಂದನ್​ ಶೆಟ್ಟಿ ಭಾಗಿಯಾಗಿದ್ದರು. . ಪೊಗರು ಚಿತ್ರದ ನಂತರ ಹೊಸ ಸಿನಿಮಾದ ಪೂಜೆಯನ್ನು ಸರಳವಾಗಿ ಚಿತ್ರತಂಡದ ಜೊತೆ ಮಾಡಿದ್ದಾರೆ.

 

 

ಮುಹೂರ್ತದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಧ್ರುವ, “ಇದು ನನ್ನ 5ನೇ ಸಿನಿಮಾವಾಗಿದೆ. ಸಿನಿಮಾ ಹೆಸರು ದುಬಾರಿ ಎಂದಾಗಿದ್ದು, ಇದರಲ್ಲಿ ಪೊಗರು ಸಿನಿಮಾದ ಟೆಕ್ನಿಷಿಯನ್ಸ್ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಒಟ್ಟು ಸೇರಿ ಒಂದು ಹೊಸ ಸಿನಿಮಾ ಮಾಡ್ತಿದ್ದೀವಿ.. 10 ದಿನದಲ್ಲಿ ಫೋಟೋ ಶೂಟ್ ಇದ್ದು, ಗೆಟಪ್ ಚೇಂಜ್ ಇರುತ್ತೆ. ಡಿಸೆಂಬರ್ ಫಸ್ಟ್ ನಿಂದ ಶೂಟಿಂಗ್ ಆರಂಭವಾಗಲಿದೆ” ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top