fbpx
ಸಮಾಚಾರ

“ಹ್ಯಾಪಿ ಬರ್ತಡೇ ಹುಚ್ಚು ಮಗು” ಗಾಸಿಪ್ ಗರ್ಲ್‍ಫ್ರೆಂಡ್‍ಗೆ ರಾಹುಲ್ ಶುಭಾಶಯ

ಕ್ರಿಕೆಟಿಗ ಕೆ.ಎಲ್​. ರಾಹುಲ್​ ಹಾಗೂ ಅತಿಯಾ ಶೆಟ್ಟಿ ಡೇಟಿಂಗ್​ ಮಾಡುತ್ತಿರುವ ಬಗ್ಗೆ ಸಾಕಷ್ಟು ಸುದ್ದಿ ಹರಿದಾಡುತ್ತಿದೆ. ಆಗಾಗ ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಮಾಡುವ ಪೋಸ್ಟ್​ಗಳು ಸಹ ಸದ್ದು ಮಾಡುತ್ತಿರುತ್ತವೆ. ಈ ಸಲ ಕೆ.ಎಲ್​. ರಾಹುಲ್ ಅತಿಯಾರನ್ನು ಹುಚ್ಚು ಹುಡುಗಿ ಎಂದಿದ್ದಾರೆ.

ಬಾಲಿವುಡ್‍ನ ಹಿರಿಯ ನಟ ಸುನಿಲ್ ಶೆಟ್ಟಿಯವರ ಪುತ್ರಿ ಮತ್ತು ಭಾರತದ ಉಪನಾಯಕ ಕೆಎಲ್ ರಾಹುಲ್ ಗಾಸಿಪ್ ಗರ್ಲ್‍ಫ್ರೆಂಡ್ ಅತಿಯಾ ಶೆಟ್ಟಿ ಇಂದು ತಮ್ಮ 28ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಗೆಳತಿಯ ಹುಟ್ಟುಹಬ್ಬಕ್ಕೆ ಕೆಎಲ್ ರಾಹುಲ್ ಅವರು ಪ್ರೀತಿಯಿಂದ ವಿಶ್ ಮಾಡಿದ್ದು, ಇದನ್ನು ಅತಿಯಾ ಶೆಟ್ಟಿ ಇನ್‍ಸ್ಟಾ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ.

 

 

View this post on Instagram

 

Happy birthday mad child 🖤

A post shared by KL Rahul👑 (@rahulkl) on

 

ಅತಿಯಾ ಶೆಟ್ಟಿ ಹುಟ್ಟುಹಬ್ಬದ ಪ್ರಯುಕ್ತ ರಾಹುಲ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ತನ್ನ ಹೆಗಲ ಮೇಲೆ ಅತಿಯಾ ತಲೆ ಇಟ್ಟಿರುವ ಫೋಟೋ ಹಂಚಿಕೊಂಡಿದ್ದಾರೆ. ಜೊತೆಗೆ ಹುಟ್ಟುಹಬ್ಬದ ಶುಭಾಶಯಗಳು ಹುಚ್ಚು ಮಗು ಎಂದು ಪ್ರೀತಿಯಿಂದ ಬರೆದುಕೊಂಡಿದ್ದಾರೆ.

ಅಂದಹಾಗೆ ಅತಿಯಾ ಶೆಟ್ಟಿ ಜೊತೆ ರಾಹುಲ್‌ ಕಾಣಿಸಿಕೊಳ್ಳುತ್ತಿರುವುದು ಇದು ಮೊದಲೇನಲ್ಲ. ಲಾಕ್‌ಡೌನ್‌ಗೂ ಹಿಂದಿನ ದಿನಗಳಲ್ಲಿ ಈ ಇಬ್ಬರೂ ಹಲವೆಡೆ ಡಿನ್ನರ್‌ಗಳಲ್ಲಿ ಕಾಣಿಸಿಕೊಂಡು, ಜೊತೆಯಾಗಿ ಪ್ರವಾಸಗಳನ್ನು ಕೈಗೊಳ್ಳುವ ಮೂಲಕ ಫೋಟೊಗಳನ್ನು ಹಂಚಿಕೊಂಡಿದ್ದರು. ಆದರೂ ಇಬ್ಬರೂ ಕೂಡ ಎಲ್ಲಿಯೂ ತಮ್ಮ ರಿಲೇಷನ್‌ಷಿಪ್‌ ಸ್ಟೇಟಸ್‌ ಬಿಟ್ಟುಕೊಟ್ಟಿಲ್ಲ. ಆದರೆ, ಇದೀಗ ಅತಿಯಾ ಹುಟ್ಟು ಹಬ್ಬದ ದಿನದಂದು ರಾಹುಲ್ ಹಂಚಿಕೊಂಡ ಫೋಟೊ ಮತ್ತು ಅದಕ್ಕೆ ಬಂದಿರುವ ಕಾಮೆಂಟ್ಸ್‌ ಗಮನಿಸಿದರೆ ಇಬ್ಬರ ನಡುವಣ ಲವ್ವಿ ಡವ್ವಿ ಸ್ಪಷ್ಟವಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top