fbpx
ಸಮಾಚಾರ

ತಾವು ನೆಪೋಟಿಸಂ ಕಿಡ್‌ ಅಲ್ಲ ಎಂಬುದಕ್ಕೆ ಸಾಕ್ಷಿ ನೀಡಿದ ಬಾಲಿವುಡ್‌ ನಟ ಅಭಿಷೇಕ್‌ ಬಚ್ಚನ್‌!

ನನ್ನಪ್ಪ ನನಗಾಗಿ ಒಂದು ಸಿನಿಮಾ ಮಾಡಿಲ್ಲ ಎಂದು ಹೇಳುವ ಮೂಲಕ ಬಾಲಿವುಡ್ ಬಿಗ್‍ಬಿ ಅಮಿತಾಭ್ ಬಚ್ಚನ್ ಅವರ ಪುತ್ರ ಅಭಿಷೇಕ್ ಬಚ್ಚನ್ ಅವರು ನೆಪೊಟಿಸಂ ಬಗ್ಗೆ ಮಾತನಾಡಿದ್ದಾರೆ.

ಬಾಲಿವುಡ್‌ನಲ್ಲಿ ನೆಪೋಟಿಸಂ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ಅದರಲ್ಲೂ ಅಭಿಷೇಕ್‌ ಬಚ್ಚನ್‌ಗೆ ಆಗಾಗ ಈ ವಿಚಾರ ಕಿರಿಕಿರಿ ನೀಡುತ್ತಿದೆ. ಸೋಶಿಯಲ್‌ ಮೀಡಿಯಾದಲ್ಲಿ ಅವರನ್ನು ಸಿಕ್ಕಾಪಟ್ಟೆ ಟ್ರೋಲ್‌ ಮಾಡಲಾಗುತ್ತಿದೆ. ಆದರೆ ತಾವು ನೆಪೋಟಿಸಂ ಕಿಡ್‌ ಅಲ್ಲ ಎಂಬುದನ್ನು ಈಗ ಸಾಕ್ಷಿ ಸಮೇತ ವಿವರಿಸಿದ್ದಾರೆ ಅಭಿಷೇಕ್‌.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅಭಿಷೇಕ್‌. “ನಮ್ಮಪ್ಪ ಇದುವರೆಗೂ ಒಂದೇ ಒಂದು ದಿನ ಯಾರಿಗೂ ಫೋನ್‌ ಮಾಡಿ, ನನ್ನ ಮಗನಿಗೆ ಅವಕಾಶ ಕೊಡಿ ಎಂದು ಹೇಳಿಲ್ಲ. ಅಷ್ಟೇ ಅಲ್ಲ, ಅವರ ನಿರ್ಮಾಣದ. ಸಂಸ್ಥೆಯಲ್ಲಿ ನನ್ನದೊಂದು ಸಿನಿಮಾನೂ ಇದುವರೆಗೆ ಮಾಡಿಲ್ಲ. ಇನ್ನು ನಾನೇ ಅವರನ್ನು ಹಾಕಿಕೊಂಡು ‘ಪಾ’ ಎನ್ನುವ ಸಿನಿಮಾ ಮಾಡಿದ್ದೇನೆ. ಹೀಗಿರುವಾಗ ಇಲ್ಲಿ ನೆಪೋಟಿಸಂ ಎಲ್ಲಿಂದ ಬಂತು’ ಎಂದು ಪ್ರಶ್ನಿಸಿದ್ದಾರೆ.

ಅಮಿತಾಭ್‌ ಬಚ್ಚನ್‌ ಅವರಿಂದ ತಮಗೆ ಚಿತ್ರರಂಗಕ್ಕೆ ಬರುವುದಕ್ಕೆ ಸ್ವಲ್ಪ ಸುಲಭವಾದರೂ, ಇಲ್ಲಿ ಸಾಕಷ್ಟು ಹೋರಾಟಗಳನ್ನು ಮಾಡಬೇಕಾಯಿತು ಎಂದು ಹೇಳಿದ್ದಾರೆ. ‘ಇಲ್ಲಿ ಬರುವುದು ಸುಲಭ. ಆದರೆ, ಚಿತ್ರರಂಗದಲ್ಲಿ ಉಳಿಯಬೇಕು ಎಂದರೆ ಸಾಕಷ್ಟು ಕಷ್ಟಪಡಬೇಕು ಮತ್ತು ಹೋರಾಟಗಳನ್ನು ಮಾಡಬೇಕು. ಅದನ್ನು ನಾನು ನಿರಂತರವಾಗಿ ಮಾಡುತ್ತಲೇ ಬಂದಿದ್ದೇನೆ’ ಎಂದು ಅವರು ಹೇಳಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top