fbpx
ಸಮಾಚಾರ

“ಇಂದಿರಾ ಗಾಂಧಿ ರೀತಿಯಲ್ಲೇ ಮೋದಿಗೆ ಘೋರ ಸಾವು” ಬ್ರಹ್ಮಾಂಡ ಗುರೂಜಿ ಸ್ಪೋಟಕ ಭವಿಷ್ಯ

ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ಎರಡು ಕಂಟಕದಿಂದ ಪಾರಾಗಿದ್ದಾರೆ. ಆದ್ರೆ ಮೂರನೇ ಕಂಟಕ ಘನಘೋರವಾಗಿದ್ದು, ಅದೇನಾದ್ರೂ ಘಟಿಸಿದ್ರೆ ಮಾಜಿ ಪ್ರಧಾನಿ ಇಂದಿರಾಗಾಂಧಿಗಿಂತಲೂ ಘೋರವಾಗಿ ಮೋದಿ ಸಾವನ್ನಪ್ಪಬಹುದು ಎಂಬುದಾಗಿ ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ ಭವಿಷ್ಯ ನುಡಿದಿದ್ದಾರೆ.

ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿದ್ದ ವೇಳೆ ಮಾತನಾಡಿದ ಅವರು ಮುಖ್ಯಮಂತ್ರಿ ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ, ಮುಂಬರುವ ಆಪತ್ತು ವಿಪತ್ತುಗಳ ಬಗ್ಗೆ ಬ್ರಹ್ಮಾಂಡ ಖ್ಯಾತಿಯ ನರೇಂದ್ರ ಬಾಬು ಶರ್ಮಾ ಭವಿಷ್ಯ ನುಡಿದಿದ್ದಾರೆ.

“ಮುಖ್ಯಮಂತ್ರಿ ಹುದ್ದೆ, ಯಡಿಯೂರಪ್ಪನವರಿಗೆ ಈ ವರ್ಷಾಂತ್ಯದ ವರೆಗೆ ಮಾತ್ರ. ವರ್ಷಾಂತ್ಯದಲ್ಲಿ ರಾಜ್ಯದ ಸಿಎಂ ಕೂಡ ಬದಲಾಗುತ್ತಾರೆ. ನಾನು ಹೇಳುವ ಭವಿಷ್ಯ ಸುಳ್ಳಾಗುವುದಿಲ್ಲ” ಎಂದು ಯಡಿಯೂರಪ್ಪನವರ ಕುರಿತಾಗಿ ಭವಿಷ್ಯ ನುಡಿದರು.

ಇಂದಿರಾ ಗಾಂಧಿಯ ರೀತಿಯಲ್ಲೇ ಮೋದಿಗೂ ಅಪಾಯ:
“ಇಂದಿರಾ ಗಾಂಧಿಯ ಹತ್ಯೆಯ ರೀತಿಯಲ್ಲೇ ಮೋದಿಗೂ ಅಪಾಯ ಕಾದಿದೆ. ಮೋದಿ ತಮ್ಮ ಸುತ್ತಮುತ್ತಲಿನವರ ಜೊತೆಗೆ ಎಚ್ಚರಿಕೆಯಿಂದ ಇರುವುದು ಸೂಕ್ತ. ಅವರು ತಮ್ಮ ತಾಯಿ, ಮಡದಿ ಜೊತೆಗಿದ್ದರೆ ಕ್ಷೇಮ. ಮೋದಿಯವರು ಈಗಾಗಲೇ ಎರಡು ಕಂಟಕದಿಂದ ಪಾರಾಗಿದ್ದಾರೆ. ಆದ್ರೆ ಮೂರನೇ ಕಂಟಕ ಘನಘೋರವಾಗಿದ್ದು, ಅದೇನಾದ್ರೂ ಘಟಿಸಿದ್ರೆ ಮಾಜಿ ಪ್ರಧಾನಿ ಇಂದಿರಾಗಾಂಧಿಗಿಂತಲೂ ಘೋರವಾಗಿ ಮೋದಿ ಸಾವನ್ನಪ್ಪಬಹುದು “ಎಂದು ಬ್ರಹ್ಮಾಂಡ ಗುರುಗಳು ಭವಿಷ್ಯ ನುಡಿದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಿದರೂ ಬಿಜೆಪಿಯವರೇ ಅವರನ್ನು ಆ ಸ್ಥಾನದಲ್ಲಿ ಕೂರಲು ಬಿಡುವುದಿಲ್ಲ. ಅದಕ್ಕಾಗಿ ಒಂದು ತಂಡ ಪಕ್ಷದಲ್ಲಿ ಕೆಲಸ ಮಾಡುತ್ತಿದೆ. ಆದ್ದರಿಂದಲೇ ಅವರು ವೈರಾಗ್ಯದ ಕಡೆಗೆ ಆಸಕ್ತಿ ತೋರುತ್ತಿದ್ದಾರೆ. ಗಡ್ಡ ತೆಗೆಯಲು ಅವರ ಬಳಿ ದುಡ್ಡಿಲ್ಲವೇ ? ಏಕೆ ಅವರು ಸರ್ವ ತ್ಯಾಗಿಯಂತೆ ಗೋಚರಿಸುತ್ತಿದ್ದಾರೆಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top