fbpx
ಸಮಾಚಾರ

ಕಾಫಿ ಡೇ ಮಾಲೀಕ ದಿವಂಗತ ಸಿದ್ದಾರ್ಥ್ ಪತ್ನಿಗೆ ಜಾಮೀನು ಮಂಜೂರು

ಚೆಕ್ ಬೌನ್ಸ್ ಪ್ರಕರಣದಲ್ಲಿ ಬಂಧನದ ಭೀತಿ ಎದುರಿಸುತ್ತಿದ್ದ ಕಾಫಿ ಡೇ ಸಿದ್ದಾರ್ಥ್ ಹೆಗ್ಡೆ ಪತ್ನಿ ಮಾಳವಿಕಾ ಅವರಿಗೆ ಸದ್ಯ ರಿಲೀಫ್ ಸಿಕ್ಕಿದೆ. ಇಂದು ಕೋರ್ಟ್ ಗೆ ಹಾಜರಾದ ಮಾಳವಿಕ‌ ಅವರಿಗೆ ಜಾಮೀನು ನೀಡಲಾಗಿದೆ.

ಕಾಫಿ ಬೆಳೆಗಾರರಿಗೆ ನೀಡಿದ್ದ ಕೋಟ್ಯಂತರ ರೂ. ಚೆಕ್ ಬೌನ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಫೆ ಕಾಫಿ ಡೇ ಸಂಸ್ಥಾಪಕ ದಿ. ಸಿದ್ಧಾರ್ಥ್​ ಹೆಗ್ಡೆ ಅವರ ಹೆಂಡತಿ ಮಾಳವಿಕಾಗೆ ಮೂಡಿಗೆರೆ ಜೆಎಂಎಫ್​ಸಿ ಕೋರ್ಟ್​ ಜಾಮೀನುರಹಿತ ಬಂಧನದ ವಾರೆಂಟ್ ಜಾರಿಗೊಳಿಸಿತ್ತು.

ಆದರೆ ಕೋರ್ಟ್ ಗೆ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಮಾಳವಿಕಾಗೆ ಬಂಧನ ವಾರಂಟ್ ಹೊರಡಿಸಿದ್ದರು. ಇದೀಗ ಮಾಳವಿಕಾ ಅವರು ಮೂಡಿಗೆರೆ ಜೆಎಂಎಫ್ಸಿ ಕೋರ್ಟ್ ಗೆ ಹಾಜರಾಗಿದ್ದು, ಮಾಳವಿಕಾ ಸೇರಿದಂತೆ ಐವರಿಗೆ ಜಾಮೀನು ಮಂಜೂರು ಮಾಡಲಾಗಿದೆ.

ಎಂಟು ಜನರ ಪೈಕಿ ಮಾಳವಿಕ ಸಿದ್ದಾರ್ಥ ಹೆಗ್ಡೆ ಸೇರಿದಂತೆ ಐವರಿಗೆ ಜಾಮೀನು ಮಂಜೂರಾಗಿದೆ. ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಗ್ರಾಮದ ಕಾಫಿ ಬೆಳೆಗಾರ ನಂದೀಶ್ ಕೆ. ಎಂಬುವವರು ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top