fbpx
ಸಮಾಚಾರ

ಬಿಸಿಯೂಟ ಯೋಜನೆ ಸ್ಥಗಿತ: ಶಾಲಾ ಮಕ್ಕಳಿಗೆ ಗುಡ್‌ ನ್ಯೂಸ್ ನೀಡಿದ ಶಿಕ್ಷಣ ಇಲಾಖೆ

ಕೊರೋನಾ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಕಳೆದ ಐದು ತಿಂಗಳುಗಳಿಂದ ಮಧ್ಯಾಹ್ನದ ಬಿಸಿಯೂಟ ನೀಡದೇ ಇರುವುದಕ್ಕೆ ಬದಲಾಗಿ ಧಾನ್ಯಗಳನ್ನು ವಿತರಣೆ ಮಾಡಲು ಸರ್ಕಾರ ನಿರ್ಧರಿಸಿದೆ. ಮಕ್ಕಳಿಗೆ ನಿಗದಿತ ಪ್ರಮಾಣದ ಅಕ್ಕಿ, ಗೋಧಿ, ಮತ್ತು ತೊಗರಿ ಬೇಳೆಗಳನ್ನು ವಿತರಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ

ಕೋವಿಡ್ 19 ಕಾರಣದಿಂದ ಶಾಲೆ ಆರಂಭವಾಗದ ಹಿನ್ನಲೆ‌ ಸಾರ್ವತ್ರಿಕ ರಜೆ ದಿನ ಹೊರತುಪಡಿಸಿ ಶಾಲೆಗಳಲ್ಲಿ 1ರಿಂದ 10 ನೇ ತರಗತಿ ಮಕ್ಕಳಿಕೆ ಊಟದ ಬದಲು ಆಹಾರ ಧಾನ್ಯ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ. ಸಾರ್ವತ್ರಿಕ ರಜೆ ದಿನ ಹೊರತುಪಡಿಸಿ 108 ದಿನಗಳಿಗೆ ಅಂದ್ರೆ, ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ತಿಂಗಳಿಗೆ ಅಹಾರ ಧಾನ್ಯ ವಿತರಣೆ ಮಾಡುವಂತೆ ಹೇಳಿದ್ದಾರೆ.

ಎಷ್ಟು ಆಹಾರ ಧಾನ್ಯ ವಿತರಣೆ
1 ರಿಂದ 5 ನೇ ತರಗತಿ ಮಕ್ಕಳಿಗೆ 4 ಕೆ.ಜಿ 500 ಗ್ರಾಂ ಅಕ್ಕಿ, 800 ಗ್ರಾಂ ಗೋಧಿ ಮತ್ತು 3 ಕೆ.ಜಿ 74 ಗ್ರಾಂ ಗೋಧಿ
6 ರಿಂದ 8 ನೇ ತರಗತಿ ವಿದ್ಯಾರ್ಥಿಗಳಿಗೆ 6 ಕೆ.ಜಿ 750 ಗ್ರಾಂ ಅಕ್ಕಿ, 1 ಕೆ.ಜಿ 200 ಗ್ರಾಂ ಗೋಧಿ ಮತ್ತು 4 ಕೆ.ಜಿ 611 ಗ್ರಾಂ ತೊಗರಿ ಬೇಳೆ
9 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ 7 ಕೆ.ಜಿ 910 ಗ್ರಾಂ ಅಕ್ಕಿ, 4 ಕೆ.ಜಿ 611 ಗ್ರಾಂ ತೊಗರಿಬೇಳೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top