fbpx
ಸಮಾಚಾರ

ಕೃತಿಗೆ ಮಲೇರಿಯಾ: ಗುರುತೇ ಸಿಗದಂತಾದ ನಟಿ ‘ಗೂಗ್ಲಿ’ ನಟಿ

ಕನ್ನಡ ಚಿತ್ರರಂಗ ಮಾತ್ರವಲ್ಲದೆ ನೆರೆಯ ತೆಲುಗು ತಮಿಳು ಒಳಗೊಂಡಂತೆ ಬಾಲಿವುಡ್‌ನಲ್ಲೂ ಮಿಂಚುತ್ತಿರುವ ಸೌಂದರ್ಯ ದೇವತೆ ಕೃತಿ ಕರಬಂಧ ಸದ್ಯ ಅಭಿಮಾನಿಗಳಿಗೆ ಕಹಿ ಸುದ್ದಿಯೊಂದನ್ನು ನೀಡಿದ್ದಾರೆ. ಏನದು ಕಹಿ ಸುದ್ದಿ ಅಂತೀರಾ? ಮುಂದೆ ಓದಿ

ಕೃತಿ ಕರಬಂಧ ಅವರಿಗೆ ಮಲೇರಿಯಾ ಆಗಿದೆ. ಈ ಸುದ್ದಿಯನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್‌ ಸ್ಟೋರಿ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಅದರ ಜೊತೆ ಅವರು ಶೇರ್‌ ಮಾಡಿಕೊಂಡಿರುವ ಫೋಟೋ ನೋಡಿದರೆ ಫೋಟೋ ನೋಡಿ ಅಭಿಮಾನಿಗಳಿಗೆ ಅಚ್ಚರಿ ಆಗಿದೆ. ಅಷ್ಟರಮಟ್ಟಿಗೆ ಅವರು ಬಳಲಿದಂತೆ ಕಾಣುತ್ತಿದ್ದಾರೆ.

‘ಹಾಯ್‌, ಇದು ನನ್ನ ಮಲೇರಿಯಾ ಮುಖ’ ಎಂದು ಹೇಳುತ್ತಲೇ ಆ ಫೋಟೋವನ್ನು ಅವರು ಶೇರ್‌ ಮಾಡಿಕೊಂಡಿದ್ದಾರೆ. ಇಂದು ನಾನು ಸಾಕಷ್ಟು ಚೇತರಿಕೆಯಿಂದಿದ್ದೇನೆ. ನಾಳೆ ಇನ್ನಷ್ಟು ಚೇತರಿಸಿಕೊಳ್ಳಲಿದ್ದೇನೆ. ನನ್ನ ಆರೋಗ್ಯದ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ದಿನೇ-ದಿನೇ ನಾನು ಚೇತರಿಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ ಕೃತಿ ಕರಬಂಧ.

ಆಸ್ಪತ್ರೆಯಲ್ಲಿ ಇರಲು ಬೇಸರವಾಗುತ್ತಿದೆ. ಆದರೆ ಪರವಾಗಿಲ್ಲ, ಈ 2020 ನೇ ವರ್ಷ ಸಾಕಷ್ಟು ತಾಳ್ಮೆ ಕಲಿಸಿದೆ. ಆರೋಗ್ಯ ಪೂರ್ಣ ಚೇತರಿಕೆ ಆಗುವವರೆಗೂ ಇಲ್ಲಿಯೇ ಇರುತ್ತೇನೆ. ಕೆಲಸಕ್ಕೆ ಮರಳಲು ಕಾಯುತ್ತಿದ್ದೇನೆ ಎಂದಿದ್ದಾರೆ ಕೃತಿ ಕರಬಂಧ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top