fbpx
ಸಮಾಚಾರ

“ದಕ್ಷಿಣ ಭಾರತದವರಿಗೆ ನನ್ನ ಮುಖಕ್ಕಿಂತ ಹೊಕ್ಕಳ ಮೇಲೆ ಹೆಚ್ಚು ಆಸಕ್ತಿ” ವಿವಾದಾತ್ಮಕ ಹೇಳಿಕೆಯಿಂದ ಕೆಂಗಣ್ಣಿಗೆ ಗುರಿಯಾದ ನಟಿ ಪೂಜಾ ಹೆಗ್ಡೆ

ದಕ್ಷಿಣ ಭಾರತ ಚಿತ್ರರಂಗದಲ್ಲಿ ಸದ್ಯ ಉತ್ತುಂಗದಲ್ಲಿರುವ ನಟಿ ಪೂಜಾ ಹೆಗ್ಡೆ ಅವರು ಚಿತ್ರರಂಗದ ವಿರುದ್ಧವೇ ಹರಿಹಾಯ್ದಿದ್ದು ಇದು ನೆಟಿಗರ ಕಣ್ಣು ಕೆಂಪಾಗಿಸಿದೆ. ಇತ್ತೀಚಿಗೆ ಭಾಗಿಯಾಗಿದ್ದ ಸಂದರ್ಶನದಲ್ಲಿ ದಕ್ಷಿಣ ಭಾರತದ ಸಿನಿ ಪ್ರೇಮಿಗಳು ಹುಡುಗೀಯರ ಸೊಂಟಕ್ಕೆ ಹಾಗೂ ಕಾಲುಗಳಿಗೆ ನೀಡುವ ಪ್ರಾಮುಖ್ಯತೆ ಬಗ್ಗೆ ಮಾತನಾಡಿ ಕಾಂಟ್ರವರ್ಸಿ ಕ್ರಿಯೇಟ್ ಮಾಡಿಕೊಂಡಿದ್ದಾರೆ.

“ದಕ್ಷಿಣ ಭಾರತೀಯರಿಗೆ ಹೊಕ್ಕಳು ಹಾಗೂ ಸೊಂಟದ ಬಗ್ಗೆ ವಿಶೇಷ ಆಸಕ್ತಿ ಅಂದು ಅನಿಸುತ್ತೆ. ಸಿನಿಮಾಗಳಲ್ಲಿ ಸೊಂಟ, ಹೊಕ್ಕಳು ತೋರಿಸಿದರೆ ಸಾಕು. ನನ್ನ ಹೊಟ್ಟೆ ಹಾಗೂ ಹೊಕ್ಕಳ ಮೇಲೆ ಹೆಚ್ಚು ಆಸಕ್ತಿ ಇದೆ. ಅಲ್ಲು ಅರ್ಜುನ್​ ನಟನೆಯ ಅಲಾ ವೈಂಕುಂಟಂಪುರಂಲು ಸಿನಿಮಾದಲ್ಲಿ ನನ್ನ ಕಾಲು ಹಾಗೂ ಹೊಟ್ಟೆಯ ಭಾಗವನ್ನೇ ಹೆಚ್ಚಾಗಿ ತೋರಿಸಿದ್ದಾರೆ” ಎಂದು ಅನುಪಮ್ ಚೋಪ್ರಾ ಜೊತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ ನಟಿ ಪೂಜಾ ಹೆಗ್ಡೆ.

 

 

ಈ ಹೇಳಿಕೆ ಚಿತ್ರ ಪ್ರೇಮಿಗಳು ಕೆರಳುವಂತೆ ಮಾಡಿದ್ದು ಚಿತ್ರರಂಗದಲ್ಲಿ ಬೆಳೆಯುವಾಗ ನಿರ್ಮಾಪಕರು ಹೇಳಿದ್ದಂತೆ ಕೇಳುತ್ತಾರೆ. ನಂತರ ನೇಮು, ಫೇಮು ಬಂದ ನಂತರ ಚಿತ್ರರಂಗವನ್ನೇ ತೆಗಳುತ್ತಾರೆ ಎಂದು ಹರಿಹಾಯ್ದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top