fbpx
ಸಮಾಚಾರ

‘ಲವ್ ಮಾಕ್ಟೇಲ್-2’ ಚಿತ್ರದಿಂದ ಹೊರನಡೆದ ರಘು ದೀಕ್ಷಿತ್: ಕಾರಣ ಏನು?

ಬಹುನಿರೀಕ್ಷಿತ “ಲವ್ ಮೋಕ್‌ಟೇಲ್ 2” ಗಾಗಿ ನಟ-ನಿರ್ದೇಶಕ- ನಿರ್ಮಾಪಕ ಕೃಷ್ಣ ಟೀಂ ಸೇರಿದ್ದ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಈಗ ತಂಡದಿಂದ ಹೊರಬಂದಿದ್ದಾರೆ. ಲವ್ ಮೋಕ್‌ಟೇಲ್ ಚಿತ್ರಕ್ಕೆ ರಘು ದೀಕ್ಷಿತ್ ಸಂಗೀತ ನಿರ್ದೇಶನ ಮಾಡಿದ್ದರು. ಲವ್ ಮಾಕ್ಟೇಲ್ ಹಾಡುಗಳು ಇಂದಿಗೂ ಗಾಯಪ್ರಿಯರ ಕಿವಿಯಲ್ಲಿ ಗುನುಗುಟ್ಟುತ್ತಿದೆ. ಆದರೆ “ಲವ್ ಮೋಕ್‌ಟೇಲ್ 2” ಚಿತ್ರದಿಂದ ರಘು ಹೊರನಡೆದಿದ್ದಾರೆ.

ವ್ಯವಹಾರದಲ್ಲಿನ ಕೆಲ ಭಿನ್ನಾಭಿಪ್ರಾಯದಿಂದಾಗಿ ರಘು ದೀಕ್ಷಿತ್ ಇದೀಗ ಚಿತ್ರದಿಂದ ದೂರವಾಗಿದ್ದಾರೆ ಎನ್ನಲಾಗಿದೆ. ಹಾಗಾದರೆ ‘ಲವ್‌ ಮಾಕ್‌ಟೇಲ್‌ 2’ ತಂಡದ ಜೊತೆ ರಘು ದೀಕ್ಷಿತ್‌ ಏನಾದರೂ ಕಿರಿಕ್‌ ಮಾಡಿಕೊಂಡ್ರಾ? ಅಂತೀರಾ ಹಾಗೇನೂ ಇಲ್ಲ.

ಮೂಲಗಳ ಪ್ರಕಾರ ಸಂಭಾವನೆ ವಿಚಾರವಾಗಿ ಕೃಷ್ಣ ಮತ್ತು ರಘು ದೀಕ್ಷಿತ್‌ ನಡುವೆ ಹೊಂದಾಣಿಕೆ ಆಗಿಲ್ಲವಂತೆ. ಹಾಗಾಗಿ, ರಘು ದೀಕ್ಷಿತ್‌ ಬದಲಿಗೆ ಬೇರೆ ಸಂಗೀತ ನಿರ್ದೇಶಕರನ್ನು ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯ ಆಗಿದೆ.

“ನಿರ್ದೇಶಕನಾಗಿ ನಾನು ಅವರನ್ನು ನಮ್ಮೊಡನಿರಲು ಬಯಸುತ್ತೇನೆ. ಆದರೆ ನಿರ್ಮಾಪಕನಾಗಿ, ನಾನು ಅವರನ್ನು ಉಳಿಸಿಕೊಳ್ಲಲು ಸಾಧ್ಯವಾಗಿಲ್ಲ” ಕೃಷ್ಣ ಹೇಳಿದ್ದಾರೆ. “ವ್ಯವಹಾರ ನಿಯಮಗಳನ್ನು ರೂಪಿಸಲು ಸಾಧ್ಯವಾಗದ ಕಾರಣ, ನಾನು ಯೋಜನೆಯ ಬದಲಾವಣೆಗೆ ತೀರ್ಮಾನಿಸಿದೆ.” ಅವರು ವಿವರಿಸಿದ್ದಾರೆ.

ರಘು ದೀಕ್ಷಿತ್ ಜಾಗಕ್ಕೆ ನಕುಲ್ ಎಂಟ್ರಿ
ರಘು ದೀಕ್ಷಿತ್ ಜಾಗಕ್ಕೆ ಖ್ಯಾತ ಗಾಯಕ ನಕುಲ್ ಅಭ್ಯಂಕರ್ ಎಂಟ್ರಿ ಕೊಟ್ಟಿದ್ದಾರೆ. ಹೌದು, ಲವ್ ಮಾಕ್ಟೇಲ್ ಭಾಗ- 2ರಲ್ಲಿ ನಕುಲ್ ಸಂಗೀತ ನಿರ್ದೇಶನ ಮಾಡುವ ಸಾಧ್ಯತೆ ಇದೆ. ಪಾರ್ಟ್-1ರಲ್ಲಿ ಸಿನಿಮಾದ ಭಾಗವಾಗಿದ್ದ ನಕುಲ್, ಪಾರ್ಟ್-2ನಲ್ಲಿ ಸಂಗೀತ ಸಂಯೋಜನೆಯ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top