fbpx
ಸಮಾಚಾರ

ಕಮಲಾ ಹಾರಿಸ್ ಬಗ್ಗೆ 11 ವರ್ಷದ ಹಿಂದೆಯೇ ಭವಿಷ್ಯ ಹೇಳಿದ್ದ ನಟಿ ಮಲ್ಲಿಕಾ ಶೆರಾವತ್

ಅಮೆರಿಕದ ಮೊತ್ತಮೊದಲ ಮಹಿಳಾ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಆಯ್ಕೆಯಾಗಿದ್ದಾರೆ. ಮೊದಲ ಮಹಿಳಾ ಉಪಾಧ್ಯಕ್ಷೆ ಮಾತ್ರವಲ್ಲದೆ, ಮೊದಲ ಆಫ್ರಿಕನ್-ಇಂಡಿಯನ್-ಅಮೆರಿಕನ್ ಮಹಿಳೆ ಎಂದೂ ಸಹ ಕಮಲಾ ಹ್ಯಾರಿಸ್ ಗುರುತಿಸಿಕೊಂಡಿದ್ದಾರೆ.

ಈ ಮದ್ಯೆ ಕಮಲಾ ಬಗ್ಗೆ ನಟಿ ಮಲ್ಲಿಕಾ ಶೆರಾವತ್ ನುಡಿಡಿದ್ದ ಭವಿಷ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದೇನೆಂದರೆ ಕಮಲಾ ಹ್ಯಾರಿಸ್ ಇಷ್ಟು ದೊಡ್ಡ ಹುದ್ದೆಯನ್ನು ಅಲಂಕರಿಸುತ್ತಾರೆ ಎಂದು 11 ವರ್ಷಗಳ ಹಿಂದೆಯೇ ನಟಿ ಮಲ್ಲಿಕಾ ಶೆರಾವತ್ ಭವಿಷ್ಯ ನುಡಿದಿದ್ದರು.

 

 

2009ರಲ್ಲಿ ಕಮಲಾ ಹಾಗೂ ಮಲ್ಲಿಕಾ ಭೇಟಿಯಾಗಿದ್ದರು. ಆಗ, ಪಾಲಿಟಿಕ್ಸ್​ ಆಫ್​ ಲವ್​​​ ಎಂಬ ಸಿನಿಮಾದಲ್ಲಿ ಮಲ್ಲಿಕಾ, ಕಮಲಾ ಹ್ಯಾರಿಸ್​ರನ್ನ ಆಧರಿಸಿದ ಡೆಮಾಕ್ರೆಟಿಕ್ ಪಕ್ಷದ ಕಾರ್ಯಕರ್ತೆ ಪಾತ್ರದಲ್ಲಿ ನಟಿಸುತ್ತಿದ್ದರು. ಸಿನಿಮಾದಲ್ಲಿನ ತನ್ನ ಪಾತ್ರದ ಕುರಿತಾಗಿ ತಯಾರಿ ಮಾಡಿಕೊಳ್ಳಲು 2009ರಲ್ಲಿ ಮಲ್ಲಿಕಾ ಶೆರಾವತ್​ ಸ್ಯಾನ್​ಫ್ರಾನ್ಸಿಸ್ಕೋಗೆ ಹೋಗಿದ್ದರು. ಈ ವೇಳೆ ಕಮಲಾ ಹ್ಯಾರಿಸ್​ರನ್ನ ಭೇಟಿಯಾಗಿದ್ದರು.

ಆ ವೇಳೆ ಕಮಲಾ ಹ್ಯಾರಿಸ್ ಜೊತೆಯಾಗಿ ಚಿತ್ರವನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದ ಮಲ್ಲಿಕಾ ಶೆರಾವತ್, ‘ಅದ್ಭುತವಾದ ಮಹಿಳೆ ಕಮಲಾ ಹ್ಯಾರಿಸ್, ಇವರು ಮುಂದೊಂದು ದಿನ ಅಮೆರಿಕದ ಅಧ್ಯಕ್ಷರಾಗಲಿದ್ದಾರೆ ಎಂದು ಹೇಳಲಾಗಿತ್ತಿದೆ’ ಎಂದು ಕಮಲಾ ಹ್ಯಾರಿಸ್ ಕುರಿತು ಹೇಳಿದ್ದರು. 11 ವರ್ಷಗಳ ಹಿಂದೆ ಹೇಳಿದ್ದ ಮಾತು ಈಗ ಬಹುತೇಕ ನಿಜವೇ ಆಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top