fbpx
ಸಮಾಚಾರ

ಅಮ್ಮ ಆಗ್ತಿದ್ದಾರೆ ‘ಮಂಗಳ ಗೌರಿ ಮದುವೆ’ ಸೀರಿಯಲ್ ಖ್ಯಾತಿಯ ನಟಿ

ಜನಪ್ರಿಯ ‘ಮಂಗಳ ಗೌರಿ ಮದುವೆ’ ಧಾರಾವಾಹಿಯಲ್ಲಿ ಸೌಂದರ್ಯಾ ಎಂಬ ಪಾತ್ರದ ಮೂಲಕ ಜನಮನ ಗೆದ್ದಿರುವ ನಟಿ ರಾಧಿಕಾ ಶ್ರವಂತ್‌ ಅವರು ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅಭಿಮಾನಿಗಳಿಗೆ ಈ ಸಿಹಿ ಸುದ್ದಿ ನೀಡಿರುವ ಅವರು ತಾವು ತಾಯಿ ಆಗುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ.

ಇಬ್ಬರು ಇನ್‌ಸ್ಟಾಗ್ರಾಂನಲ್ಲಿ ಕುಟುಂಬಕ್ಕೆ ಅತಿಥಿಯನ್ನು ಬರ ಮಾಡಿಕೊಳ್ಳುವ ವಿಚಾರವನ್ನು ಬಹಿರಂಗ ಮಾಡಿದ್ದಾರೆ. ‘Something fantastic is making us glad. We are Pregnant’ ಎಂದು ಬರೆದುಕೊಂಡಿದ್ದಾರೆ. ಸುಂದರವಾದ ಫೋಟೋಶೂಟ್ ಮೂಲಕ ರಾಧಿಕಾ-ಶ್ರವಂತ್ ಜೋಡಿ ಸಂತಸ ಹಂಚಿಕೊಂಡಿದ್ದಾರೆ.

ನಟಿ ರಾಧಿಕಾ 2020 ಫೆಬ್ರವರಿಯಲ್ಲಿ ನಟ ಮತ್ತು ನಿರ್ದೇಶಕ ಶ್ರವಂತ್ ಜೊತೆ ಹಸೆಮಣೆ ಏರಿದ್ದರು. ಹಲವು ದಿನಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ, ಮನೆಯವರ ಒಪ್ಪಿಗೆ ಮೇರೆಗೆ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top