fbpx
ಸಮಾಚಾರ

ನಾಳೆ ಮೇಘನಾ ರಾಜ್ ಮನೆಯಲ್ಲಿ ನಡೆಯಲಿದೆ ಶುಭ ಕಾರ್ಯ

ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡು ನೋವಿನಲ್ಲಿದ್ದ ಕುಟುಂಬಕ್ಕೆ ಇತ್ತೀಚಿಗೆ ಜನಿಸಿದ ಚಿರು ಮಗು ಕೊಂಚ ಸಂತಸ ಮೂಡಿಸಿದೆ. ಮೇಘನಾ ರಾಜ್ ಕಳೆದ ತಿಂಗಳ ಅಕ್ಟೋಬರ್ 22ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ 20 ದಿನಗಳ ಬಳಿಕ ಮೇಘನಾ ಮನೆಯಲ್ಲಿ ತೊಟ್ಟಿಲ ಶಾಸ್ತ್ರದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಹೌದು, ನಾಳೆ ನವೆಂಬರ್ 12ರಂದು ಬೆಂಗಳೂರಿನ ಜೆಪಿ ನಗರದ ನಿವಾಸದಲ್ಲಿ ಮೇಘನಾ ರಾಜ್ ಮುದ್ದಾದ ಮಗುವಿಗೆ ತೊಟ್ಟಿಲ ಶಾಸ್ತ್ರ ಸಮಾರಂಭ ನಡೆಯಲಿದೆ. ಈ ಬಗ್ಗೆ ಮೇಘನಾ ತಂದೆ ಸುಂದರ್ ರಾಜ್ ಮಾಹಿತಿ ನೀಡಿದ್ದಾರೆ.

‘ನಮ್ಮ ಪುಟ್ಟ ಸಂಸಾರಕ್ಕೆ ಮಗನಂತೆ ಬಂದ ಅಳಿಯ ಚಿರಂಜೀವಿ ಸರ್ಜಾ. ಚಿರು ಮರಣದ ನಂತರ ಸದಾ ದುಃಖದಲಿದ್ದ ನಮ್ಮ ಕುಟುಂಬಕ್ಕೆ ಸಂತಸ ನೀಡಲು ಚಿರು ಮತ್ತೆ ನಮ್ಮ ಮೊಮ್ಮಗನ ರೂಪದಲ್ಲಿ ಬಂದು ಸಂತಸ ತಂದಿದ್ದಾನೆ. ಇದೇ ನವೆಂಬರ್ 12 ರ ಗುರುವಾರ ಮಧ್ಯಾಹ್ನ 12ಕ್ಕೆ ನಮ್ಮ ಮನೆಯಲ್ಲಿ ನಮ್ಮ ಮೊಮ್ಮಗನಿಗೆ ತೊಟ್ಟಿಲಿಗೆ ಹಾಕುವ ಶಾಸ್ತ್ರ ನಡೆಸಲಿದ್ದೇವೆ’ ಎಂದು ಹೇಳಿದ್ದಾರೆ.

ತೀರ ಖಾಸಗಿಯಾಗಿ ನಡೆಯುವ ತೊಟ್ಟಿಲ ಶಾಸ್ತ್ರದ ಸಂಭ್ರಮದಲ್ಲಿ ಮೇಘನಾ ರಾಜ್ ಕುಟುಂಬ ಮತ್ತು ಸರ್ಜಾ ಕುಟುಂಬದವರು ಹಾಗೂ ಸ್ನೇಹಿತರು ಮಾತ್ರ ಭಾಗಿಯಾಗಲಿದ್ದಾರೆ. ಅಣ್ಣನ ಮಗುವಿಗಾಗಿ ಧ್ರುವ 10 ಲಕ್ಷದ ವೆಚ್ಚದಲ್ಲಿ ಮಗು ಹುಟ್ಟುವ ಮೊದಲೇ ಬೆಳ್ಳಿ ತೊಟ್ಟಿಲು ಮಾಡಿಸಿದ್ದಾರೆ.

ಚಿರು ಅಗಲಿದ್ದಾರೆ ಅನ್ನೋ ದುಖಃ ಇದ್ದರೂ ಎರಡೂ ಕುಟುಂಬದವರು ಈ ಮಗುವನ್ನು ಬರ ಮಾಡಿಕೊಳ್ಳುವಲ್ಲಿ ಯಾವುದೇ ಕಡಿಮೆ ಮಾಡಲಿಲ್ಲ. ಮೇಘನಾ ಅವರಿಗೆ ಚಿರು ಆಸೆ ಪಟ್ಟಿದ್ದಂತೆಯೇ ಸೀಮಂತ ಶಾಸ್ತ್ರ ಮಾಡಲಾಯಿತು. ಈಗ ಮಗುವಿಗೆ ಏನೆಂದು ಹೆಸರು ಇಡಬೇಕು ಎಂದು ಎರಡೂ ಕುಟುಂಬಗಳು ನಿರ್ಧರಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top