fbpx
ಸಮಾಚಾರ

ಚಿರು- ಮೇಘನಾ ಮಗು ತೊಟ್ಟಿಲು ಸಾಮಾನ್ಯದ್ದಲ್ಲ: ಏನಿದರ ವಿಶೇಷತೆ?

ಮೇಘನಾ ರಾಜ್ ಪುತ್ರನಿಗೆ ಅದ್ದೂರಿ ತೊಟ್ಟಿಲು ಶಾಸ್ತ್ರವನ್ನು ಇಂದು ನೆರವೇರಿಸಲಾಯಿತು. ಜೆ.ಪಿ. ನಗರದ ಮೇಘನಾ ರಾಜ್​ರ ಮನೆಯಲ್ಲಿ ನಡೆದ ತೊಟ್ಟಿಲು ಶಾಸ್ತ್ರದಲ್ಲಿ ಕೇವಲ ಕುಟುಂಬಸ್ಥರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಸರಳವಾಗಿ ಆಯೋಜಿಸಲಾಯಿತು.

ಜೂನಿಯರ್ ಚೀರುವಿನ ತೊಟ್ಟಿಲು ಕೇವಲ ಬಣ್ಣಗಳಿಂದ ತುಂಬಿದ ತೊಟ್ಟಿಲು ಸಾಮಾನ್ಯ ತೊಟ್ಟಿಲಲ್ಲ. ತೊಟ್ಟಿಲು ಹೊಂದಿರುವ ವಿಶೇಷತೆಗಳನ್ನು ಮೇಘನಾ ತಂದೆ ಸುಂದರ್‌ ರಾಜ್ ಮಾಧ್ಯಮಗಳಿಗೆ ವಿವರಿಸಿದ್ದಾರೆ.

 

 

“ಮೇಘನಾ ಮಗುಗಾಗಿ ಗದಗದಿಂದ ವಿಶೇಷ ಉಡುಗೊರೆ ಬಂದಿದೆ. ಗತ್ತಲ್​ ವನಿತಾ ಎನ್ನುವವರು ಮೇಘನಾ ಗರ್ಭಾವತಿಯಾಗಿರುವಾಗಲೇ ನಾವೇ ತೊಟ್ಟಿಲು ತಯಾರಿಸಿಕೊಡುತ್ತೇವೆ ಎಂದಿದ್ದರು. ಅದೇ ತೊಟ್ಟಿಲಿನಲ್ಲಿಯೇ ಇಂದಿನ ಶಾಸ್ತ್ರ ನಡೆಯಲಿದೆ. ಈ ತೊಟ್ಟಿಲಿನ ವಿಶೇಷ ಅಂದ್ರೆ ಇದು ಸಂಪೂರ್ಣ ಹ್ಯಾಂಡ್​​ಮೇಡ್” ಎಂದು ಮೇಘನಾ ರಾಜ್​ ತಂದೆ ನಟ ಸುಂದರ್​ ರಾಜ್​ ತಿಳಿಸಿದ್ದಾರೆ.

“ಮೇಘನಾಳ ಮಗನ ತೊಟ್ಟಿಲಿನ ಪ್ರತಿಯೊಂದು ಭಾಗವನ್ನು, ಬಣ್ಣ ಚಿತ್ತಾರ ಎಲ್ಲವನ್ನೂ ಕೈಯಿಂದ ಮಾಡಲಾಗಿದೆ. ಈ ವಿಶೇಷ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದ ವನಿತಾ ಅವರಿಗೆ ನಾವು ವಿಶೇಷ ಧನ್ಯವಾದ ತಿಳಿಸುತ್ತೇವೆ” ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top