fbpx
ಸಮಾಚಾರ

ಮೂರನೇ ಮಗುವಿಗೆ ತಂದೆಯಾದ ಕ್ರಿಕೆಟಿಗ ಎಬಿ ಡಿವಿಲಿಯರ್ಸ್

ಕ್ರಿಕೆಟ್ ಲೋಕದ ಸೂಪರ್ ಮ್ಯಾನ್ ಎಂದೇ ಖ್ಯಾತಿಯಾಗಿರುವ ಎಬಿ ಡಿವಿಲಿಯರ್ಸ್ ಮೂರನೇ ಮಗುವಿಗೆ ತಂದೆಯಾಗಿದ್ದಾರೆ. ಈ ಸಂತಸವವನ್ನು ಎಬಿ ಡಿವಿಲಿಯರ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನವೆಂಬರ್ 11ನೇ ತಾರೀಕಿಗೆ ಹೆಣ್ಣು ಮಗು ಜನಿಸಿರುವ ವಿಚಾರವನ್ನು ಎಬಿ ಡಿವಿಲಿಯರ್ಸ್ ತಿಳಿಸಿದ್ದಾರೆ.

 

On 11-11-2020, we welcomed a beautiful baby girl into the world🎀

Yente de Villiers, you are the perfect addition to…

AB de Villiers ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ನವೆಂಬರ್ 19, 2020

 

ಪತ್ನಿ ಹಾಗೂ ಮಗುವಿನ ಜೊತೆಗೆ ಇರುವ ಫೋಟೋವನ್ನು ಎಬಿ ಡಿವಿಲಿಯರ್ಸ್ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ” 11-11-2020ರಂದು ಈ ಜಗತ್ತಿಗೆ ಹೆಣ್ಣು ಮಗುವನ್ನು ಸ್ವಾಗತಿಸಿದ್ದೇವೆ. ಎಂಟೆ ಡಿ ವಿಲಿಯರ್ಸ್, ನೀನು ನಮ್ಮ ಕುಟುಂಬಕ್ಕೆ ಪ್ರೀತಿಯಿಂದ ಸೇರ್ಪಡೆಯಾಗಿದ್ದೀಯ. ನಿನ್ನನ್ನು ಪಡೆದ ನಾವು ನಿಜಕ್ಕೂ ನಾವು ಅದೃಷ್ಠಶಾಲಿಗಳು” ಎಂದು ಡಿವಿಲಿಯರ್ಸ್ ಈ ಸುದ್ದಿಯನ್ನು ಬಹಿರಂಗಗೊಳಿಸಿದ್ದಾರೆ.

ಎಬಿ ಡಿವಿಲಿಯರ್ಸ್ ದಂಪತಿ ಮತ್ತೊಂದು ಮಗುವಿಗೆ ಪೋಷಕರಾಗುತ್ತಿರುವ ಸುದ್ದಿಯನ್ನು ಈ ಹಿಂದೆಯೇ ಹಂಚಿಕೊಂಡಿದ್ದರು. ಎಬಿ ಡಿವಿಲಿಯರ್ಸ್ ಪತ್ನಿ ಡಾನಿಯೆಲ್ ಸ್ವಾರ್ಟ್ ಸಾಮಾಜಿಕ ಜಾಲತಾಣದಲ್ಲಿ ಮೊದಲಿಗೆ ಈ ವಿಚಾರವನ್ನು ತಿಳಿಸಿದ್ದರು. ಎಬಿ ಡಿವಿಲಿಯರ್ಸ್ ದಂಪತಿ ಈಗಾಗಲೇ ಇಬ್ಬರು ಗಂಡು ಮಕ್ಕಳನ್ನು ಹೊಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top