fbpx
ಸಮಾಚಾರ

ಯೂಟ್ಯೂಬರ್‌ ವಿರುದ್ಧ 500 ಕೋಟಿ ಮಾನನಷ್ಟ ಕೇಸ್‌ ಹಾಕಿದ ನಟ ಅಕ್ಷಯ್‌ ಕುಮಾರ್‌

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ತನ್ನ ವಿರುದ್ಧವಾಗಿ ಸುಳ್ಳು ಸುದ್ದಿಯನ್ನು ಪ್ರಚಾರ ಮಾಡಿದ್ದಕ್ಕೆ ಯೂಟ್ಯೂಬರ್‌ ವಿರುದ್ಧ ಕೋಟಿಗಟ್ಟಲೇ ಮಾನನಷ್ಟ ಪ್ರಕರಣವನ್ನು ದಾಖಲಿಸಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ತಮ್ಮ ಹೆಸರನ್ನು ಬೆಳೆಸಿದ ರಶೀದ್ ಸಿದ್ದಿಕಿ ಎಂಬ ಯೂಟ್ಯೂಬರ್ ವಿರುದ್ಧ ಅಕ್ಷಯ್ 500 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಒಂದು ವಿಡಿಯೋದಲ್ಲಿ ಸುಶಾಂತ್ ಅವರು “ಎಂಎಸ್ ಧೋನಿ: ದಿ ಅನ್ಟೋಲ್ಡ್ ಸ್ಟೋರಿ” ನಂತಹ ದೊಡ್ಡ ಚಿತ್ರದಲ್ಲಿ ನಟಿಸಿದ್ದು ಅಕ್ಷಯ್ ಅಸಮಾಧಾನ ಹೊಂದಿದ್ದರು ಎಂದು ಸಿದ್ದಿಕಿ ಹೇಳಿದ್ದಾರೆ. ಅಲ್ಲದೆ ಅಕ್ಷಯ್ ಕುಮಾರ್ ಅವರು ಆದಿತ್ಯ ಠಾಕ್ರೆ ಮತ್ತು ಮುಂಬೈ ಪೊಲೀಸರೊಂದಿಗೆ “ರಹಸ್ಯ ಸಭೆ” ನಡೆಸಿದ್ದಾರೆ ಎಂದು ಆರೋಪಿಸಿದರು.

ಸುಶಾಂತ್‌ ಸಿಂಗ್‌ ಗೆಳತಿ ರಿಯಾ ಚಕ್ರವರ್ತಿ ಜೊತೆ ಅಕ್ಷಯ್‌ ಕುಮಾರ್‌ ಸಂಪರ್ಕ ಹೊಂದಿದ್ದರು. ರಿಯಾ ಕೆನಡಾಗೆ ತೆರಳಲು ಅಕ್ಷಯ್‌ ಕುಮಾರ್‌ ಸಹಾಯ ಮಾಡಿದ್ದರು ಎಂದು ಸಿದ್ದಿಕಿ ವಿಡಿಯೋದಲ್ಲಿ ಆರೋಪಿಸಿದ್ದ.

ಅಂದಹಾಗೆ ಈ ಪ್ರಕರಣದಲ್ಲಿ ನಕಲಿ ಸುದ್ದಿ ಹರಡಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಅವರ ಪುತ್ರ ಸಚಿವ ಆದಿತ್ಯ ಠಾಕ್ರೆ ಅವರ ಹೆಸರನ್ನು ಎಳೆದಿದ್ದಕ್ಕಾಗಿ ರಶೀದ್ ಸಿದ್ದಿಕಿರನ್ನು ಈ ಹಿಂದೆ ಬಂಧಿಸಲಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top