fbpx
ಸಮಾಚಾರ

ಆಘಾತಕಾರಿ ಸತ್ಯ ಬಾಯ್ಬಿಟ್ಟ ಒಲಿಂಪಿಯನ್ ಅಂಜು ಬಾಬಿ ಜಾರ್ಜ್!

ಭಾರತದ ದಿಗ್ಗಜ ಕ್ರೀಡಾಪಟು, ಮಾಜಿ ಅಥ್ಲೀಟ್‌ ಅಂಜು ಬಾಬಿ ಜಾರ್ಜ್ ತಮಗಿರುವುದು ಒಂದೇ ಕಿಡ್ನಿ ಎನ್ನುವ ಆಶ್ಚರ್ಯಕರ ವಿಚಾರವನ್ನು ಸೋಮವಾರ ಬಹಿರಂಗ ಪಡಿಸಿದ್ದಾರೆ.

ಟ್ವಿಟರ್‌ ಮೂಲಕ ಜಾರ್ಜ್ ಈ ಸತ್ಯ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ‘ನೀವು ನಂಬಿ ಅಥವಾ ಬಿಡಿ. ನಾನು ಅದೃಷ್ಟಶಾಲಿಗಳಲ್ಲೊಬ್ಬಳು. ಕೇವಲ ಒಂದೇ ಕಿಡ್ನಿಯೊಂದಿಗೆ ವಿಶ್ವದ ಟಾಪ್‌ಗೆ ತಲುಪಿದ ಕೆಲವೇ ಕೆಲವು ಮಂದಿಯಲ್ಲಿ ನಾನೂ ಒಬ್ಬಳು. ನನಗೆ ಬಹಳ ಮಿತಿಗಳಿತ್ತು. ಆದರೂ ನಾನು ಸಾಧಿಸಿದೆ. ಇದನ್ನು ನಾವು ಕೋಚ್‌ನ ಮ್ಯಾಜಿಕ್ ಅನ್ನಬಹುದು. ಅಥವಾ ಅವರ ಪ್ರತಿಭೆ ಅನ್ನಬಹುದು,’ ಎಂದು ಬರೆದಿದ್ದಾರೆ.

 

 

2005 ರಲ್ಲಿ ಮೊನಾಕೋದಲ್ಲಿ ನಡೆದ ಐಎಎಎಫ್ ವಿಶ್ವ ಅಥ್ಲೆಟಿಕ್ಸ್ ನ ಫೈನಲ್ಸ್ ನಲ್ಲಿ ಚಿನ್ನದ ಪದಕ ಪಡೆದಿರುವ ಅಂಜು ಬಾಬ್ಬಿ, ಕಿಡ್ನಿಯ ವಿಷಯದಲ್ಲಿ ಸವಾಲು ಹೊಂದಿರುವುದಷ್ಟೇ ಅಲ್ಲದೇ ಸಣ್ಣ ಪ್ರಮಾಣದ ನೋವು ನಿವಾರಕ ತೆಗೆದುಕೊಂಡರೂ ಅಲರ್ಜಿ ಸಮಸ್ಯೆ ಎದುರಾಗಲಿದೆ, ಕಾಲಿಗೆ ಸಂಬಂಧಿಸಿದ ಸಮಸ್ಯೆ ಇದೆ, ಇನ್ನೂ ಅನೇಕ ಮಿತಿ- ಸವಾಲುಗಳ ನಡುವೆಯೂ ತಾವು ಕ್ರೀಡಾ ಕ್ಷೇತ್ರದಲ್ಲಿ ಅಂದುಕೊಂಡಿದ್ದನ್ನು ಸಾಧಿಸಿದ್ದಾಗಿ ಅಂಜು ಬಾಬ್ಬಿ ಟ್ವೀಟ್ ಮಾಡಿ ಮೊದಲ ಬಾರಿಗೆ ಇವುಗಳನ್ನು ಬಹಿರಂಗಪಡಿಸಿದ್ದಾರೆ.

ಅಂಜು ಬಾಬ್ಬಿಗೆ ಪತಿ ರಾಬರ್ಟ್ ಬಾಬ್ಬಿ ಜಾರ್ಜ್ ಅವರೇ ಕೋಚ್ ಆಗಿದ್ದಾರೆ. ಅಂಜು ಬಾಬ್ಬಿಯ ಟ್ವೀಟ್ ಕೇಂದ್ರ ಕ್ರೀಡಾ ಸಚಿವ ಕಿರೆಣ್ ರಿಜಿಜು ಅವರ ಗಮನಸೆಳೆದಿದ್ದು, “ಅಂಜು ಬಾಬ್ಬಿ ತಮ್ಮ ಪರಿಶ್ರಮ, ಕಷ್ಟಗಳ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಿದ್ದಾರೆ. ವಿಶ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಪದಕ ಗೆದ್ದ ಏಕೈಕ ಭಾರತೀಯರು ನೀವಾಗಿದ್ದು, ನಿಮ್ಮ ಬಗ್ಗೆ ಹೆಮ್ಮೆಯಾಗುತ್ತದೆ” ಎಂದು ಹೇಳಿದ್ದಾರೆ.

ಅಂದಹಾಗೆ ಅಂಜು ಕ್ರೀಡಾಜೀವನ ಅರಳಿದ್ದು ಪತಿ ರಾಬರ್ಟ್‌ ಬಾಬ್ಬಿ ಜಾರ್ಜ್‌ ಅವರ ತರಬೇತಿಯ ಮೂಲಕ. ಆ್ಯತ್ಲೆಟಿಕ್ಸ್‌ ವಿಶ್ವಕೂಟದಲ್ಲಿ (2003, ಪ್ಯಾರಿಸ್‌) ಪದಕ ಗೆದ್ದ ಭಾರತದ ಏಕೈಕ ಆ್ಯತ್ಲೀಟ್‌ ಎಂಬ ಹೆಗ್ಗಳಿಕೆಯನ್ನು ಅಂಜು ಹೊಂದಿದ್ದಾರೆ. ಮಾತ್ರವಲ್ಲ, ಐಎಎಎಫ್ ವಿಶ್ವ ಆ್ಯತ್ಲೆಟಿಕ್ಸ್‌ ಫೈನಲ್‌ನಲ್ಲಿ (2005, ಮೊನಾಕೊ) ಚಿನ್ನ ಪಡೆದ ದೇಶದ ಏಕೈಕ ಸಾಧಕಿಯೂ ಹೌದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top