fbpx
ಸಮಾಚಾರ

ಬಿಗ್ ಬಾಸ್ ಖ್ಯಾತಿಯ ಅಕ್ಷತಾ ಪಾಂಡವಪುರ ಮಗು ಫೋಟೋ ವೈರಲ್; ಹೇಗಿದ್ದಾಳೆ ಲಕ್ಷ್ಮಿ?

ಬಿಗ್‌ ಬಾಸ್‌ ಸೀಸನ್ 6ರ ಸ್ಪರ್ಧಿಯಾಗಿದ್ದ ನಟಿ ಅಕ್ಷತಾ ಪಾಂಡವಪುರ ಅವರ ಬದುಕಿನಲ್ಲೀಗ ಹೊಸ ಅಧ್ಯಾಯ ಶುರು ಆಗಿದೆ. ಚೊಚ್ಚಲ ಮಗುವಿಗೆ ತಾಯಿಯಾಗಿರುವ ಅಕ್ಷತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸಂತಸದ ವಿಚಾರವನ್ನು ಸ್ವತಃ ಅಕ್ಷತಾ ಅವರೇ ಹಂಚಿಕೊಂಡಿದ್ದಾರೆ.

 

 

ಈ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ವಿಷಯ ತಿಳಿಸಿರುವ ಅಕ್ಷತಾ ಪಾಂಡವಪುರ ಅವರು “ಧನ್ಯವಾದಗಳು ದೇವರೆ, ಮಗಳು” ಎಂದು ಬರೆದುಕೊಂಡಿದ್ದಾರೆ. ಇದರ ಜೊತೆಗೆ ತಾವು ತುಂಬು ಗರ್ಭಿಣಿ ಆಗಿದ್ದಾಗಿನ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ತಮ್ಮ ಫೋಟೋ ಮೇಲೆ ದೊಡ್ಡದಾಗಿ ‘ಲಕ್ಷ್ಮಿ’ ಎಂದು ಬರೆದುಕೊಂಡಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ತಾಯಿ ಮತ್ತು ಮಗಳ ಫೋಟೋ ಹರಿದಾಡುತ್ತಿದೆ.

 

 

ಮಗು ನೋಡಲು ತುಂಬಾನೇ ಮುದ್ದಾಗಿದ್ದು ಅಕ್ಷತಾ ಮುದಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಕ್ಷತಾ ಆಕ್ಟೀವ್ ಇರುವ ಕಾರಣ ಶೀಘ್ರವೇ ಮಗಳೊಟ್ಟಿಗೆ ಫೋಟೋ ಶೇರ್ ಮಾಡುತ್ತಾರೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಸದ್ಯಕ್ಕೆ ಮಗಳನ್ನು ಲಕ್ಷ್ಮಿ ಎಂದು ಕರೆದಿರುವ ಅಕ್ಷತಾ ಯಾವ ಹೆಸರು ಇಡುತ್ತಾರೆ ಎಂದು ನೆಟ್ಟಿಗರು ಗೆಸ್ ಮಾಡುತ್ತಿದ್ದಾರೆ.

ರಂಗಭೂಮಿ ಕಲಾವಿದೆಯಾಗಿ ಗುರುತಿಸಿಕೊಂಡಿರುವ ಅಕ್ಷತಾ ಪಾಂಡವಪುರ ಅವರ ಪತಿ ಪ್ರಸನ್ನ ಸಾಗರ್. ಮೂಲತಃ ಸಾಗರದವರಾದ ಇವರು ರಂಗಭೂಮಿ ನಿರ್ದೇಶಕರು ಹೌದು. ಅಕ್ಷತಾ ಹಾಗೂ ಪ್ರಸನ್ನ ಅವರದು ಪ್ರೇಮ ವಿವಾಹವಾಗಿದ್ದು, ಎಂಟು ವರ್ಷಗಳ ಹಿಂದೆ ಇವರಿಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top