fbpx
ಸಮಾಚಾರ

ಮಗಳು ಹುಟ್ಟಿದ ಬೆನ್ನಲ್ಲೇ ತಮ್ಮ ‘ಟ್ವಿಟರ್ ಬಯೋ’ ಬದಲಿಸಿಕೊಂಡ ವಿರಾಟ್ ಕೊಹ್ಲಿ: ಏನೆಂದು ಬದಲಿಸಿಕೊಂಡರು ಗೊತ್ತಾ?

ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ, ನಿರ್ಮಾಪಕಿ ಅನುಷ್ಕಾ ಶರ್ಮಾ ದಂಪತಿ ಜನವರಿ 11ರಂದು ಮೊದಲ ಮಗುವಿಗೆ ಜನ್ಮ ನೀಡಿದ್ದರು. ಹೆಣ್ಣು ಮಗುವಿನ ತಂದೆಯಾಗಿರುವ ವಿಚಾರವನ್ನು ಸ್ವತಃ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದರು.

ಮಗಳು ಹುಟ್ಟಿದ ಬೆನ್ನಲ್ಲೇ ತಮ್ಮ ಟ್ವಿಟರ್ ಬಯೋವನ್ನು ಚೇಂಜ್ ಮಾಡಿಕೊಂಡಿದ್ದು ಎಲ್ಲ ಗಮನ ಸೆಳೆದಿದೆ. ತಮ್ಮ ಬಯೋನಲ್ಲಿ ತಾನೊಬ್ಬ ಪಕ್ಕಾ ಫ್ಯಾಮಿಲಿ ಮ್ಯಾನ್​ ಎಂಬುದನ್ನು ತೋರಿಸಿದ್ದಾರೆ. ಅಷ್ಟಕ್ಕೂ ವಿರಾಟ್ ಕೊಹ್ಲಿ ತಮ್ಮ ಟ್ವಿಟರ್ ಬಯೋವನ್ನು ಏನೆಂದು ಬದಲಾಯಿಸಿದ್ದಾರೆ ಅಂತೀರಾ? ಮುಂದೆ ಓದಿ

 

 

 

ವಿರಾಟ್ ಕೊಹ್ಲಿ ಮಗು ಹುಟ್ಟಿದ ಬೆನ್ನಲ್ಲೇ ತಮ್ಮ ಟ್ವಿಟರ್​ ಬಯೋವನ್ನು A proud husband and father (ನಾನೊಬ್ಬ ಹೆಮ್ಮೆಯ ಪತಿ ಮತ್ತು ಅಪ್ಪ) ಎಂದು ಬದಲಾಯಿಸಿಕೊಂಡಿದ್ದಾರೆ. ಜೊತೆಯಲ್ಲಿ ಕೆಂಪು ಬಣ್ಣದ ಹಾರ್ಟ್​ ಸಿಂಬಲ್ ಕೂಡ​ ಹಾಕಿದ್ದಾರೆ.

ಅಂದಹಾಗೆ ಅನುಷ್ಕಾ ಹೆರಿಗೆ ನಿಮಿತ್ತ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗಾವಸ್ಕರ್​ ಟ್ರೋಫಿ ಟೆಸ್ಟ್​ ಸರಣಿಯನ್ನು ಅರ್ಧಕ್ಕೇ ಮೊಟಕುಗೊಳಿಸಿ ಭಾರತಕ್ಕೆ ಹಿಂದಿರುಗಿದ ವಿರಾಟ್​ ಕೊಹ್ಲಿ, ತಮಗೆ ಮಗಳು ಹುಟ್ಟಿದ ವಿಷಯವನ್ನು ಟ್ವಿಟರ್​ ಮೂಲಕ ಹಂಚಿಕೊಂಡಿದ್ದರು. ನಮ್ಮ ಜೀವನದ ಹೊಸ ಅಧ್ಯಾಯ ಇಂದಿನಿಂದ ಶುರುವಾಯಿತು ಎಂದು ಹೇಳಿಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top