fbpx
ಸಮಾಚಾರ

ಬಾಲಿವುಡ್ ನಟಿ ಆಲಿಯಾ ಭಟ್ ಆಸ್ಪತ್ರೆಗೆ ದಾಖಲು

ಬಾಲಿವುಡ್ ನ ಖ್ಯಾತ ನಟಿ ಅಲಿಯಾ ಭಟ್ ಸದ್ಯ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಗಂಗೂಬಾಯಿ ಕಥಿಯಾವಾಡಿ’ ಸಿನಿಮಾ ಚಿತ್ರೀಕರಣದಲ್ಲಿ ನಿರತಾಗಿದ್ದಾರೆ. ಈ ವೇಳೆ ಅಸ್ವಸ್ಥರಾಗಿರುವ ಅಲಿಯಾ ಭಟ್ ಅವರನ್ನು ತಕ್ಷಣ ಮುಂಬೈ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಚಿಕಿತ್ಸೆಯಲ್ಲಿರುವ ಆಲಿಯಾರನ್ನು ಮೀಡಿಯಾ ಹಾಗೂ ಅಭಿಮಾನಿಗಳಿಂದ ದೂರವಿಡಲು ಹೈ ಸೆಕ್ಯೂರಿಟಿ ನೀಡಲಾಗಿದೆ. ತಕ್ಷಣ ಆಸ್ಪತ್ರೆಗೆ ದಾಖಲಾಗಿದ್ದ ನಟಿ, ಕೊಂಚ ವಿಶ್ರಾಂತಿ ಪಡೆದು ಚಿತ್ರೀಕರಣಕ್ಕೆ ಹಾಜರಾಗಲಿದ್ದಾರೆ ಎನ್ನಲಾಗಿದೆ.

ಅಂದಹಾಗೆ ಅಲಿಯಾ ತಕ್ಷಣ ಆಸ್ಪತ್ರೆ ಸೇರಲು ಕಾರಣ ಅತಿಯಾದ ಅಸಿಡಿಟಿ ಎಂದು ಹೇಳಲಾಗುತ್ತಿದೆ. ಹೌದು, ನಟಿ ಅಲಿಯಾ ಅತಿಯಾದ ಅಸಿಡಿಟಿಯಿಂದ ಬಳಲುತ್ತಿದ್ದಾರಂತೆ. ಚಿತ್ರೀಕರಣ ವೇಳೆ ತಲೆಸುತ್ತು ಬಂದು ವಾಂತಿಯಾದ ಕಾರಣ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಹೊಸ ವರ್ಷದ ಆಚರಣೆಗೆಂದು ಕುಟುಂಬದೊಂದಿಗೆ ರಣತಂಬೋರ್​ ಹೋಗಿದ್ದ ಆಲಿಯಾ, ಅಲ್ಲಿಂದ ಬಂದ ಕೂಡಲೇ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದರು. ಇದರಿಂದಾಗಿ ಚಿತ್ರೀಕರಣದ ಸೆಟ್​ನಲ್ಲಿ ತುಂಬಾ ಸುಸ್ತಾಗಿ ಅಸ್ವಸ್ಥರಾಗಿದ್ದರು ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top