fbpx
ಸಮಾಚಾರ

ಬರೋಬ್ಬರಿ 32 ವರ್ಷಗಳ ನಂತರ ಗಬ್ಬಾ ಟೆಸ್ಟ್ ಸೋತ ಆಸ್ಟ್ರೇಲಿಯಾ: ಕಾಂಗರೂಗಳಿಗೆ ಮಣ್ಣು ಮುಕ್ಕಿಸಿದ ಟೀಮ್ ಇಂಡಿಯಾ

ಬ್ರಿಸ್ಬೇನ್‍ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 3 ವಿಕೆಟ್ ಗಳಿಂದ ಮಣಿಸಿ ಭಾರತ ತಂಡವು ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ. ರಿಷಬ್ ಪಂತ್, ಚೇತೇಶ್ವರ್ ಪೂಜಾರ, ಶುಬ್‍ಮಾನ್ ಗಿಲ್ ಮತ್ತು ವಾಷಿಂಗ್ಟನ್ ಸುಂದರ್ ಅವರ ಅಮೋಘ ಆಟದಿಂದ ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್ನಲ್ಲಿ ನೀಡಿದ್ದ 336 ರನ್ ಗುರಿಯನ್ನು 7 ವಿಕೆಟ್ ಕಳೆದುಕೊಂಡು ಭಾರತ ಗೆಲುವಿನ ನಗೆ ಬೀರಿತು.

ಆತಿಥೇಯ ಆಸ್ಟ್ರೇಲಿಯಾ 32 ವರ್ಷಗಳ ಬಳಿಕ ಬ್ರಿಸ್ಬೇನ್‌ನಲ್ಲಿ ಮೊದಲ ಕಹಿ ಉಂಡಿದೆ. 1988ರಲ್ಲಿ ವೆಸ್ಟ್‌ ಇಂಡೀಸ್‌ ತಂಡ ಬ್ರಿಸ್ಬೇನ್‌ನಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡವನ್ನು 9 ವಿಕೆಟ್‌ಗಳಿಂದ ಪರಾಭವಗೊಳಿಸಿತ್ತು. 1988ರ ಬಳಿಕ ಆಸ್ಟ್ರೇಲಿಯಾ 31 ಪಂದ್ಯಗಳನ್ನು ಆಡಿತ್ತು. ಇದರಲ್ಲಿ 24 ಪಂದ್ಯಗಳನ್ನು ಗೆದ್ದು, 7 ಪಂದ್ಯಗಳನ್ನು ಡ್ರಾಗೊಳಿಸಿತ್ತು.

ಸಂಕ್ಷಿಪ್ತ ಸ್ಕೋರ್‌
ಆಸ್ಟ್ರೇಲಿಯಾ

ಮೊದಲ ಇನಿಂಗ್ಸ್‌ 115.5 ಓವರ್‌ಗಳಲ್ಲಿ 369 (ಡೇವಿಡ್‌ ವಾರ್ನರ್‌ 1, ಮಾರ್ಕಸ್‌ ಹ್ಯಾರಿಸ್‌ 5, ಮಾರ್ನಸ್‌ ಲಾಬುಶೇನ್ 108, ಸ್ಟೀವ್ ಸ್ಮಿತ್‌ 36, ಮ್ಯಾಥ್ಯೂ ವೇಡ್ 45, ಕ್ಯಾಮರೂನ್ ಗ್ರೀನ್ 47, ಟಿಮ್‌ ಪೇಯ್ನ್ 50; ಟಿ ನಟರಾಜನ್ 78ಕ್ಕೆ 3, ವಾಷಿಂಗ್ಟನ್ ಸುಂದರ್‌ 89ಕ್ಕೆ 3)

ಎರಡನೇ ಇನಿಂಗ್ಸ್‌ 75.5 ಓವರ್‌ಗಳಿಗೆ 294/10,(ಡೇವಿಡ್‌ ವಾರ್ನರ್ 48, ಮಾರ್ಕಸ್‌ ಹ್ಯಾರಿಸ್ 38, ಸ್ಟೀವನ್‌ ಸ್ಮಿತ್‌ 55, ಮಾರ್ನಸ್‌ ಲಾಬುಶೇನ್‌ 25, ಕ್ಯಾಮೆರಾನ್‌ ಗ್ರೀನ್‌ 37, ಟಿಮ್‌ ಪೇಯ್ನ್‌ 27, ಪ್ಯಾಟ್‌ ಕಮಿನ್ಸ್ 28)

ಭಾರತ
ಪ್ರಥಮ ಇನಿಂಗ್ಸ್‌ 111.4 ಓವರ್‌ಗಳಲ್ಲಿ 336 ಆಲ್‌ಔಟ್ (ರೋಹಿತ್‌ ಶರ್ಮಾ 44, ಚೇತೇಶ್ವರ್ ಪೂಜಾರ 25, ಅಜಿಂಕ್ಯ ರಹಾನೆ 37, ಮಯಾಂಕ್ ಅಗರ್ವಾಲ್ 38, ರಿಷಭ್ ಪಂತ್ 23, ವಾಷಿಂಗ್ಟನ್‌ ಸುಂದರ್‌ 62, ಶಾರ್ದುಲ್ ಠಾಕೂರ್‌ 67; ಜಾಶ್ ಹೇಝಲ್‌ವುಡ್ 57ಕ್ಕೆ 5).

ದ್ವಿತೀಯ ಇನಿಂಗ್ಸ್ 97 ಓವರ್‌ಗಳಿಗೆ 329/7 ( ಶುಭಮನ್‌ ಗಿಲ್‌ 91, ರಿಷಭ್‌ ಪಂತ್‌ 89*, ಚೇತೇಶ್ವರ್‌ ಪೂಜಾರ 56, ಅಜಿಂಕ್ಯ ರಹಾನೆ 24, ವಾಷಿಂಗ್ಟನ್‌ ಸುಂದರ್‌ 22; ಪ್ಯಾಟ್‌ ಕಮಿನ್ಸ್ 55ಕ್ಕೆ 4, ನೇಥನ್‌ ಲಯಾನ್‌ 85 ಕ್ಕೆ 2, ಜಾಶ್‌ ಹೇಝಲ್‌ವುಡ್‌ 74ಕ್ಕೆ 2)

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top