fbpx
ಸಮಾಚಾರ

ಖ್ಯಾತ ಸಿನಿಮಾ ನಿರ್ಮಾಪಕ ದೊರೆಸ್ವಾಮಿ ರಾಜು ನಿಧನ

ಟಾಲಿವುಡ್​ನ ವಿಡಂಸಿ (ವಿಜಯ ಮಾರುತಿ ಕ್ರಿಯೇಟೀವ್ಸ್​) ಬ್ಯಾನರ್​ ಹೆಸರಿನಲ್ಲಿ ತೆಲುಗಿನಲ್ಲಿ ಯಶಸ್ವಿಯಾಗಿ ಹಿಟ್​ ಸಿನಿಮಾಗಳನ್ನು ನಿರ್ಮಿಸಿದ್ದ ಖ್ಯಾತ ನಿರ್ಮಾಪಕ ವಿ ದೊರಸ್ವಾಮಿ ರಾಜು ಇನ್ನಿಲ್ಲ. ನೆನ್ನೆ ಹೃದಯಾಘಾತದಿಂದ ದೊರಸ್ವಾಮಿ ರಾಜು ಸಾವನ್ನಪ್ಪಿದ್ದಾರೆ.

ಇವರ ಸಾವಿಗೆ ತೆಲುಗು ಸಿನಿಮಾರಂಗದ ಖ್ಯಾತ ನಟರು, ನಿರ್ಮಾಪಕರು ಹಾಗೂ ನಿರ್ದೇಶಕರು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸಿದ್ದಾರೆ. ನಿರ್ಮಾಪಕ ನಾಗವಂಶಿ, ನಿರ್ದೇಶಕ ಕೆ. ರಾಘವೇಂದ್ರ ರಾವ್‌, ದಿಲ್‌ರಾಜು, ಎಸ್‌.ಎಸ್‌.ರಾಜಮೌಳಿ, ನಟರಾದ ಜೂನಿಯರ್ ಎನ್‌ಟಿಆರ್‌, ನಾನಿ ಮೊದಲಾದವರು ಇವರ ಸಾವಿಗೆ ಸಂತಾಪ ಸೂಚಿಸಿ ಸಾಮಾಜಿಕ ಜಾಲತಾಣದಲ್ಲಿ ದುಃಖ ವ್ಯಕ್ತಪಡಿಸಿದ್ದಾರೆ.

ವಿಜಯ ಮಾರುತಿ ಕ್ರಿಯೇಟಿವ್ಸ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕರಾಗಿ ಸಾಕಷ್ಟು ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಅಲ್ಲದೆ ವಿಎಂಸಿ ಫಿಲ್ಮ್ಸ್ ಡಿಸ್ಟ್ರಿಬ್ಯೂಷನ್ ಸಂಸ್ಥೆಯ ಸ್ಥಾಪಕರೂ ಆಗಿದ್ದ ದೊರಸ್ವಾಮಿ ರಾಜು 700 ಕ್ಕೂ ಹೆಚ್ಚು ಚಲನಚಿತ್ರಗಳ ವಿತರಣೆ ಮಾಡಿದ್ದರು.

ನಟರಾದ ಅಕ್ಕಿನೇನಿ ನಾಗೇಶ್ವರ ರಾವ್, ನಾಗಾರ್ಜುನ ಅಕ್ಕಿನೇನಿ, ಮತ್ತು ಜೂನಿಯರ್ ಎನ್.ಟಿ.ಆರ್. ಅವರೊಂದಿಗೆ ಬ್ಲಾಕ್ ಬಸ್ಟರ್ ಚಲನಚಿತ್ರಗಳನ್ನು ನಿರ್ಮಿಸಿದ್ದರು, ನಿರ್ಮಾಪಕರಾಗಿ, ಅವರು ಸೀತಾರಾಮಯ್ಯ ಗೌರಿ ಮನವರಲು, ಅನ್ನಮಯ್ಯ, ಸಿಂಹಾದ್ರಿ, ಅಧ್ಯಕ್ಷ ಗರಿ ಪೆಲ್ಲಂ ಮುಂತಾದ ಚಲನಚಿತ್ರಗಳಿಗೆ ಬಂಡವಾಳ ತೊಡಗಿಸಿದ್ದರು, ವಿತರಕರಾಗಿ ಗುರುಶಿಷ್ಯಲು, ಜಾನಕಿ ರಾಮುಡು, ಪ್ರೇಮಾಭಿಷೇಕಂನಂತಹಾ ಸೂಪರ್ ಹಿಟ್ ಚಿತ್ರಗಳ ವಿತರಣೆ ಮಾಡಿದ್ದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top