fbpx
ಸಮಾಚಾರ

ಡ್ರ್ಯಾಗನ್ ಹಣ್ಣಿಗೆ ಮರುನಾಮಕರಣ ಮಾಡಿದ ಬಿಜೆಪಿ ಸರ್ಕಾರ: ಹೊಸ ಹೆಸರೇನು ಗೊತ್ತೇ

ದೇಶದಲ್ಲಿ ಕೆಲವು ವರ್ಷಗಳಿಂದೀಚೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ “ಡ್ರ್ಯಾಗನ್ ಫ್ರೂಟ್‌”ಗೆ ಗುಜರಾತ್ ಸರ್ಕಾರ ಮರು ನಾಮಕರಣ ಮಾಡಿದೆ. ಸರ್ಕಾರ ಇಟ್ಟಿರುವ ಆ ಹೊಸ ಹೆಸರು ಹಲವು ಕಾರಣದಿಂದ ಗಮನ ಸೆಳೆಯುತ್ತಿದೆ. ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಟ್ರಾಲ್ ಗೆ ಒಳಗಾಗುತ್ತಿದೆ.

ಹೌದು, ಗುಜರಾತ್‌ ಸರ್ಕಾರವು ಡ್ರ್ಯಾಗನ್‌ ಫ್ರೂಟ್‌‌ಗೆ ‘ಕಮಲಂ’ ಎಂಬ ಹೆಸರು ನೀಡಿದೆ. ಹಣ್ಣಿನ ಹೊರಭಾಗವು ಕಮಲದ ಆಕಾರಕ್ಕೆ ಹೋಲಿಕೆಯಾಗುವುದರಿಂದ ರಾಜ್ಯ ಸರ್ಕಾರವು ಹೆಸರು ಬದಲಿಸಲು ನಿರ್ಧರಿಸಿದೆ ಎಂದು ಗುಜರಾತ್‌ ಮುಖ್ಯಮಂತ್ರಿ ವಿಜಯ್ ರುಪಾಣಿ ಹೇಳಿದ್ದಾರೆ.

ಹೊಸ ಹೆಸರು ಯಾಕೆ?
ಡ್ರ್ಯಾಗನ್ ಅನ್ನೋ​ ಪದ ಆಕರ್ಷಕವಾಗಿಲ್ಲ. ಅಲ್ಲದೆ ಚೀನಾಗೆ ಡ್ರ್ಯಾಗನ್ ರಾಷ್ಟ್ರ ಎಂದು ಕರೆಯೋದ್ರಿಂದ ಜನರು ಆ ಪದವನ್ನ ಚೀನಾದೊಂದಿಗೆ ಲಿಂಕ್ ಮಾಡಿಕೊಳ್ಳುತ್ತಾರೆ. ಹೀಗಾಗಿ ಆ ಹೆಸರು ಬೇಡವೆಂದು ಗುಜರಾತ್​ ನಿರ್ಧರಿಸಿದೆ. ಈ ಹಣ್ಣಿನ ಹೊರಭಾಗ ಕಮಲದ ಹೂವಿನಂತೆ ಕಾಣುವುದರಿಂದ ಕಮಲಂ ಎಂದು ಹೆಸರಿಡಲು ತೀರ್ಮಾನಿಸಲಾಗಿದೆಯಂತೆ.

ಅಂದಹಾಗೆ ವಿಟಮಿನ್‌ ಸಿ ಸೇರಿದಂತೆ ಹಲವು ವಿಟಮಿನ್‌ಗಳು ಹಾಗೂ ಖನಿಜಾಂಶಗಳನ್ನು ಅಧಿಕ ಮಟ್ಟದಲ್ಲಿ ಹೊಂದಿರುವ ಡ್ರ್ಯಾಗನ್‌ ಹಣ್ಣನ್ನು ಭುಜ್‌, ಗಾಂಧಿಧಾಮ ಹಾಗೂ ಮಾಡವಿ ಪ್ರದೇಶಗಳಲ್ಲಿ ಯತೇಚ್ಛವಾಗಿ ಬೆಳೆಯಲಾಗುತ್ತಿದೆ. ರೋಗ ನಿರೋಧ ಶಕ್ತಿ ವೃದ್ಧಿಸಿಕೊಳ್ಳುವಲ್ಲಿಯೂ ಈ ಹಣ್ಣು ಸಹಕಾರಿ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top