fbpx
ಸಮಾಚಾರ

ಬಾಲಿವುಡ್ ನಟಿ ಕಂಗನಾ ಜೊತೆ ದರ್ಶನ್: ಫೋಟೋ ಸಿಕ್ಕಾಪಟ್ಟೆ ವೈರಲ್

ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ದರ್ಶನ್ ಅವರ ಹಳೆಯ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಟ ದರ್ಶನ್ ಅವರ ಹಳೆಯ ಫೋಟೋ ನೋಡಿ ಆಶ್ಚರ್ಯಪಟ್ಟಿದ್ದಾರೆ ಡಿ ಬಾಸ್ ಫ್ಯಾನ್ಸ್. ಹೇಗಿದೆ ಆ ಫೋಟೋ ಅನ್ನೋ ಕುತೂಹಲನಾ? ಮುಂದೆ ಓದಿ

 

 

ಹೌದು, ಬಾಲಿವುಡ್ ನ ಖ್ಯಾತ ನಟಿ, ಇತ್ತೀಚಿಗೆ ವಿವಾದಗಳ ಮೂಲಕವೇ ಹೆಚ್ಚು ಸದ್ದು ಮಾಡುತ್ತಿರುವ ಕಂಗನಾ ರಣಾವತ್ ಜೊತೆ ಕಾಣಿಸಿಕೊಂಡಿರುವ ಡಿ ಬಾಸ್ ದರ್ಶನ್ ಅವರ ಅಪರೂಪದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ಇದು ಇಂದು ನಿನ್ನೆಯ ಫೋಟೋವಲ್ಲ. ಸುಮಾರು 7 ವರ್ಷದ ಹಳೆಯ ಫೋಟೋ. ಹೌದು, 2014ರಲ್ಲಿ ಕ್ಲಿಕ್ಕಿಸಿದ ಫೋಟೋವಿದು.

ದರ್ಶನ್ ಮತ್ತು ಕಂಗನಾ ಒಟ್ಟಿಗೆ ಕಾಣಿಸಿಕೊಂಡಿದ್ದು ದುಬೈನಲ್ಲಿ. ರೆಸ್ಟೊರೆಂಟ್ ಒಂದರ ಉದ್ಘಾಟನಾ ಸಮಾರಂಭ ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಹೌದು, ದುಬೈನ ಪ್ರಸಿದ್ಧ ರೆಸ್ಟೊರೆಂಟ್ ಒಂದರ ಉದ್ಘಾಟನಾ ಸಮಾರಂಭದಲ್ಲಿ ದರ್ಶನ್ ಮತ್ತು ಬಾಲಿವುಡ್ ಸ್ಟಾರ್ ಕಂಗನಾ ಇಬ್ಬರು ಕಾಣಿಸಿಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top