fbpx
ಸಮಾಚಾರ

ಬಾಲಿವುಡ್​ಗೆ ಎಂಟ್ರಿ ಕೊಟ್ಟ ‘ದಿಯಾ’ ಖ್ಯಾತಿಯ ನಟ ಪೃಥ್ವಿ ಅಂಬರ್​

2020ರಲ್ಲಿ ತೆರೆಕಂಡು ಜನಮೆಚ್ಚುಗೆ ಗಳಿಸಿದ ‘ದಿಯಾ’ ಸಿನಿಮಾದಿಂದ ನಟ ಪೃಥ್ವಿ ಅಂಬರ್‌ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಸ್ಯಾಂಡಲ್‌ವುಡ್‌ನಲ್ಲಿ ಹಲವು ಸಿನಿಮಾಗಳನ್ನು ಒಪ್ಪಿಕೊಂಡಿರುವ ಅವರು ಈಗ ಬಾಲಿವುಡ್‌ ಕಡೆಗೆ ಮುಖ ಮಾಡಿದ್ದಾರೆ! ಹೌದು, ಅಂಥದ್ದೊಂದು ಸೂಪರ್‌ ಅವಕಾಶ ಅವರಿಗೆ ಸಿಕ್ಕಿದೆ.

ಹೌದು.. ದಿಯಾ ಸಿನಿಮಾದ ಆದಿ ಪಾತ್ರದ ಮೂಲಕ ಕನ್ನಡ ಪ್ರೇಕ್ಷಕರ ಹೃದಯ ಗೆದ್ದಿರುವ ಪೃಥ್ವಿ ಸದ್ಯ ಸಾಲು ಸಾಲು ಕನ್ನಡದ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ ಇದೀಗ ಇದೇ ಪೃಥ್ವಿ ಬಾಲಿವುಡ್ ಪ್ರವೇಶಕ್ಕೂ ಸಜ್ಜಾಗಿದ್ದಾರೆ. ತಮ್ಮದೇ ದಿಯಾ ಚಿತ್ರದ ಹಿಂದಿ ರಿಮೇಕ್ ನಲ್ಲಿ ಪೃಥ್ವಿ ನಟಿಸಲಿದ್ದು, ಹಿಂದಿ ರಿಮೇಕ್ ನಲ್ಲೂ ಪೃಥ್ವಿ ಆದಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಮೂಲಗಳ ಪ್ರಕಾರ ಈಗಾಗಲೇ ಹಿಂದಿ ಅವತರಣಿಕೆಯ ದಿಯಾ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದ್ದು, ನಟ ಪೃಥ್ವಿ ಸಹ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಸುಳಿವು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿರುವ ಪೃಥ್ವಿ ಲಖನೌನಲ್ಲಿರುವ ಫೋಟೋ ಹಂಚಿಕೊಂಡಿದ್ದಾರೆ. ಇನ್ನು ಹಿಂದಿಯಲ್ಲಿ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ? ಮತ್ತೋರ್ವ ನಾಯಕ ಯಾರು ಎನ್ನುವ ಬಗ್ಗೆ ಮಾಹಿತಿ ಇನ್ನೂ ರಿವೀಲ್ ಆಗಿಲ್ಲ.

‘ದಿಯಾ’ ಸಿನಿಮಾಗೆ ನಿರ್ದೇಶನ ಮಾಡಿದ್ದ ಕೆ.ಎಸ್‌. ಅಶೋಕ್‌ ಅವರು ಈಗ ರಿಮೇಕ್‌ನಲ್ಲಿ ಕ್ರಿಯೇಟಿವ್‌ ಹೆಡ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಶೂಟಿಂಗ್‌ ಕೂಡ ಆರಂಭ ಆಗಿದೆ. ಚಿತ್ರೀಕರಣವನ್ನು ಡೆಹರಾಡೂನ್ ಮತ್ತು ಮಸ್ಸೂರಿಯಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top