fbpx
ಸಮಾಚಾರ

ಪವಿತ್ರ ಶಿವಲಿಂಗಕ್ಕೆ ಕಾಂಡೋಮ್ ತೊಡಿಸಿದ ಚಿತ್ರ: ನಟಿಯ ವಿರುದ್ಧ ಭುಗಿಲೆದ್ದ ಆಕ್ರೋಶ

ಬಂಗಾಳಿ ನಟಿ ಸಾಯೋನಿ ಘೋಷ್​ ಹಿಂದೂಗಳ ಭಾವನೆಗೆ ಧಕ್ಕೆ ತರುವಂತ ಟ್ವೀಟ್​ ಮಾಡಿದ್ದು, ಅದು ವೈರಲ್​ ಆಗುತ್ತಿದೆ. ನಟಿ ಮಾಡಿರುವ ಹಳೇ ಟ್ವೀಟ್​ ಈಗ ಮತ್ತೆ ವೈರಲ್​ ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 

 

ಹಿಂದೂಗಳು ಪೂಜಿಸುವ ಪವಿತ್ರ ಶಿವಲಿಂಗಕ್ಕೆ ಕಾಂಡೋಮ್​ ಹಾಕಿರುವ ಚಿತ್ರವನ್ನು ಬಳಸಿಕೊಂಡು ನಟಿ ಸಾಯೋನಿ ತಮ್ಮ ಅಧಿಕೃತ ಟ್ವಿಟರ್​ ಖಾತೆಯಿಂದ ಟ್ವೀಟ್​ ಮಾಡಿದ್ದರು. ಟ್ವೀಟ್​ ಕುರಿತು ಆಕೆ “ದೇವರುಗಳು ಹೆಚ್ಚು ಹೇಗೆ ತಾನೇ ಉಪಯುಕ್ತವಾಗಬಹುದು ” ಎಂಬ ಅಡಿಬರಹ ಬರೆದಿದ್ದಳು. ಸಾಯೋನಿ ಈ ಟ್ವೀಟ್​ ಅನ್ನು 2015ರಲ್ಲಿ ಶಿವರಾತ್ರಿ ಹಬ್ಬದಂದು ಮಾಡಿದ್ದು, ಈಗ ಮತ್ತೆ ಇದು ವೈರಲ್​ ಆಗುತ್ತಿದೆ.

 

 

ಸದ್ಯಕ್ಕೆ ನಟಿ ಮತ್ತೆ ಸೋಶಿಯಲ್ ಮೀಡಿಯಾ ಮುಖೇನ ಮುಂದೆ ಬಂದು ಕ್ಷಮೆ ಕೇಳಿದ್ದು ಈ ಟ್ವೀಟ್​​ ತಾನು ಮಾಡಿದ್ದಲ್ಲ, ತನ್ನ ಟ್ವಿಟರ್​ ಖಾತೆ ಹ್ಯಾಕ್​ ಆಗಿತ್ತು. ಯಾರೋ ಕಿಡಿಗೇಡಿಗಳು ಮಾಡಿದ್ದ ಕೃತ್ಯ ಎಂದು ಈ ಹಿಂದೆಯೇ ಸಾಯೋನಿ ಎಂದು ಹೇಳಿದ್ದಾರೆ.

2015ರ ಟ್ವೀಟ್​ ಇದಾಗಿದ್ದು, ಪಿಆರ್ ಬಾಸ್ಕರ್ ರಾಯ್​ ಈ ವಿಷಯವನ್ನು ನನ್ನ ಗಮನಕ್ಕೆ ತಂದಿದ್ದರು. ಟ್ವಿಟರ್​ ಖಾತೆಯನ್ನು ನಾನು ಬಹಳ ಸಮಯ ಬಳಸುತ್ತಿರಲಿಲ್ಲ. 2010ರಲ್ಲಿ ಟ್ವಿಟರ್​ ಖಾತೆ ತೆರೆದೆ. ಆದರೆ ನಂತರ ಆಸಕ್ತಿ ಕಳೆದುಕೊಂಡ ಕಾರಣ ನನ್ನ ಖಾತೆಯನ್ನು ಬಳಸುತ್ತಿರಲಿಲ್ಲ ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top