ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಐತಿಹಾಸಿಕ ಗೆಲುವು ಪಡೆದ ಜೋಶ್ ನ ನಡುವೆ ಫೆಬ್ರವರಿ ತಿಂಗಳಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದಲ್ಲಿ ನಡೆಯಲಿರುವ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ ಭಾರತ ತಂಡದ ಆಟಗಾರರ ಪಟ್ಟಿಯನ್ನು ಬಿಸಿಸಿಐ ಮಂಗಳವಾರ ಸಂಜೆ ಬಿಡುಗಡೆ ಮಾಡಿದೆ.
ಪಿತೃತ್ವ ರಜೆಯಲ್ಲಿರುವ ನಾಯಕ ವಿರಾಟ್ ಕೊಹ್ಲಿ, ವೇಗದ ಬೌಲರ್ ಇಶಾಂತ್ ಶರ್ಮಾ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಂಡಕ್ಕೆ ಮರಳಿದ್ದಾರೆ. ತಮಿಳುನಾಡಿನ ವೇಗಿ ಟಿ. ನಟರಾಜನ್ ಅವರನ್ನು ತಂಡದಿಂದ ಕೈಬಿಡಲಾಗಿದ್ದು ಕರ್ನಾಟಕದ ಮಾಯಾಂಕ್ ಅಗರ್ವಾಲ್ ಮತ್ತು ಕೆಎಲ್ ರಾಹುಲ್ ಅವರಿಗೆ ಸ್ಥಾನ ನೀಡಲಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ಪೃಥ್ವಿ ಶಾ ಅವರಿಗೆ ಗೇಟ್ ಪಾಸ್ ನೀಡಲಾಗಿದ್ದು, ಹಾಗೆಯೇ ಆಸೀಸ್ ವಿರುದ್ದ ತಂಡದಲ್ಲಿ ಸ್ಥಾನದಲ್ಲಿ ಪಡೆದಿದ್ದ ನವದೀಪ್ ಸೈನಿ ಹಾಗೂ ನಟರಾಜನ್ ಅವರನ್ನು ಸಹ ಕೈ ಬಿಡಲಾಗಿದೆ. ಇನ್ನು ಗಾಯಗೊಂಡಿರುವ ಮೊಹಮ್ಮದ್ ಶಮಿ ಹಾಗೂ ರವೀಂದ್ರ ಜಡೇಜಾ ಚೇತರಿಸಿಕೊಳ್ಳಲು ಸಮಯವಕಾಶ ಬೇಕಿದ್ದು, ಹೀಗಾಗಿ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ.
TEAM – Virat Kohli (Capt), Rohit Sharma, Mayank Agarwal, Shubman Gill, Cheteshwar Pujara, Ajinkya (VC), KL Rahul, Hardik, Rishabh Pant (wk), Wriddhiman Saha (wk), R Ashwin, Kuldeep Yadav, Axar Patel, Washington Sundar, Ishant Sharma, Jasprit Bumrah, Md. Siraj, Shardul Thakur
— BCCI (@BCCI) January 19, 2021
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ:
ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ(ಉಪ ನಾಯಕ), ರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್, ಶುಬ್ಮನ್ ಗಿಲ್, ಚೇತೇಶ್ವರ್ ಪೂಜಾರ, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರಿಷಬ್ ಪಂತ್, ವೃದ್ಧಿಮಾನ್ ಸಾಹ, ಆರ್ ಅಶ್ವಿನ್, ಕುಲ್ದೀಪ್ ಯಾದವ್, ಅಕ್ಸರ್ ಪಟೇಲ್, ವಾಶಿಂಗ್ಟನ್ ಸುಂದರ್, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್
ಟೀಂ ಇಂಡಿಯಾ ಜೊತೆಗೆ ಐವರು ನೆಟ್ ಬೌಲರ್ಸ್ ಹಾಗೂ ಔವರು ಆಟಗಾರರನ್ನು ಸ್ಟಾಂಡ್ ಬೈ ಆಗಿ ಆಯ್ಕೆ ಮಾಡಿದೆ.
The Committee also picked five net bowlers and five players as standbys.
Net Bowlers: Ankit Rajpoot, Avesh Khan, Sandeep Warrier, Krishnappa Gowtham, Saurabh Kumar
Standby players: K S Bharat, Abhimanyu Easwaran, Shahbaz Nadeem, Rahul Chahar, Priyank Panchal#INDvENG
— BCCI (@BCCI) January 19, 2021
ನೆಟ್ ಬೌಲರ್ಸ್:
ಅಂಕಿತ್ ರಜಪೂತ್, ಅವೇಶ್ ಖಾನ್, ಸಂದೀಪ್ ವಾರಿಯರ್ಸ್, ಕೃಷ್ಣಪ್ಪ ಗೌತಮ್, ಸೌರಭ್ ಕುಮಾರ್
ಸ್ಟಾಂಡ್ ಬೈ ಪ್ಲೇಯರ್ಸ್:
ಕೆಎಸ್ ಭರತ್ ಅಭಿಮನ್ಯು ಈಶ್ವರನ್, ಶಹಭಾಝ್ ನದೀಮ್, ರಾಹುಲ್ ಚಹಾರ್, ಪ್ರಿಯಾಂಕ್ ಪಾಂಚಾಲ್
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
