ನಟ ಕಿಚ್ಚ ಸುದೀಪ್ ಅವರು ದುಬೈ ತಲುಪಿದ್ದಾರೆ. ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸುದೀಪ್ ಅವರನ್ನು ದುಬೈ ಸಂಸ್ಕೃತಿಯಂತೆ ಸ್ವಾಗತ ಕೋರಿ ಬರಮಾಡಿಕೊಂಡಿದ್ದಾರೆ. ಸುದೀಪ್ ಅವರು ವಿಮಾನ ಇಳಿದು ಬರುತ್ತಿದ್ದಂತೆ ಹೂವಿನ ಮಾಲೆ ಹಾಕಿ, ಹೂಗುಚ್ಛ ನೀಡಿ ಹಾಗೂ ವಿಶೇಷವಾದ ಉಡುಗೊರೆಯನ್ನು ನೀಡಿ ಸ್ವಾಗತ ಕೋರಲಾಗಿದೆ.
ಈ ವೇಳೆ ಸುದೀಪ್ ಪತ್ನಿ ಪ್ರಿಯಾ ಕೂಡ ಜೊತೆಗಿದ್ದರು. ವಿದೇಶಿ ನೆಲದಲ್ಲಿ ತಮ್ಮ ನೆಚ್ಚಿನ ನಟನಿಗೆ ಈ ಪರಿ ಗೌರವ ಸಿಗುತ್ತಿರುವುದನ್ನು ಕಂಡು ಫ್ಯಾನ್ಸ್ ಸಖತ್ ಖುಷಿ ಆಗಿದ್ದಾರೆ. ಕಿಚ್ಚ ಸುದೀಪ್ ದುಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿರುವ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಂದಹಾಗೆ ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳನ್ನು ಪೂರೈಸುತ್ತಿದ್ದಾರೆ. ಅಲ್ಲದೆ, ‘ಫ್ಯಾಂಟಮ್’ ಎಂದಿದ್ದ ಸಿನಿಮಾ ಹೆಸರು ಈಗ ‘ವಿಕ್ರಾಂತ್ ರೋಣ’ ಎಂದು ಬದಲಾಗಿದೆ. ಈ ಎರಡು ವಿಶೇಷ ಕಾರಣಗಳಿಗಾಗಿ ದುಬೈನ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಜ.31ರಂದು ಸುದೀಪ್ ಅವರ ಕಟೌಟ್ ರಾರಾಜಿಸಲಿದೆ. ‘ವಿಕ್ರಾಂತ್ ರೋಣ’ ಟೈಟಲ್ ಲೋಗೋ ಲಾಂಜ್ ಆಗಲಿದೆ. ಈ ವೈಭೋಗವನ್ನು ಕಣ್ತುಂಬಿಕೊಳ್ಳಲು ಕಿಚ್ಚನ ಅಭಿಮಾನಿಗಳು ಕಾಯುತ್ತಿದ್ದಾರೆ.
ದುಬೈ ಏರ್ಪೋರ್ಟ್ ನಲ್ಲಿ “ಅಭಿನಯ ಚಕ್ರವರ್ತಿ” ಗೆ ಸಿಕ್ತು ಅದ್ದೂರಿ ಸ್ವಾಗತ…😍🔥😎@KicchaSudeep 💥 #VikrantRona
#VikrantRonaOnBurjKhalifa
👉 4 DAYS TO GO 👈@AnupsBhandari @JackManjunath@Kichchacreatiin @NirupBhandari @NeethaOfficial @AJANEESHB pic.twitter.com/v9HbogTJP9— KKSFA OFFICIAL (@KicchafansKKSFA) January 27, 2021
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
