fbpx
ಸಮಾಚಾರ

ಬಿಗ್ ಬಾಸ್ ಸ್ಪರ್ಧಿ; ಸ್ವಯಂ ಘೋಷಿತ ದೇವಮಾನವ ಓಂ ಸ್ವಾಮಿ ನಿಧನ

ಬಿಗ್​ಬಾಸ್​ ಖ್ಯಾತಿಯ ಸ್ವಯಂ ಘೋಷಿತ ದೇವಮಾನವ ವಿನೋದಾನಂದ್​ ಝಾ ಬುಧವಾರದಂದು ಕೊನೆಯುಸಿರೆಳೆದಿದ್ದಾರೆ. ಸ್ವಾಮಿ ಓಂ ಎಂದೇ ಪ್ರಸಿದ್ಧರಾಗಿದ್ದ ಅವರು ಪಾರ್ಶ್ವವಾಯುವಿನಿಂದಾಗಿ ಮೃತರಾಗಿರುವುದಾಗಿ ತಿಳಿಸಲಾಗಿದೆ. ಮೃತರ ಅಂತ್ಯಸಂಸ್ಕಾರವನ್ನು ದೆಹಲಿಯ ನಿಗಮ್ ಬೋಧ್ ಘಾಟ್‌ನಲ್ಲಿ ನಡೆಸಲಾಗುವುದು.

ಉತ್ತರ ಪ್ರದೇಶದ ಘಾಜಿಯಾಬಾದ್ ನ ಸ್ವಗೃಹದಲ್ಲಿ ಓಂ ಸ್ವಾಮಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಓಂ ಸ್ವಾಮಿ ಪಾರ್ಶ್ವವಾಯುವಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ ಎಂದು ಓಂ ಸ್ವಾಮಿ ಅವರ ಸ್ನೇಹಿತ ಮುಖೇಶ್ ಅವರ ಪುತ್ರ ಹೇಳಿದ್ದಾರೆ. ಅವರ ಅಂತಿಮಕ್ರಿಯೆಯನ್ನು ದೆಹಲಿಯ ನಿಗಮ್ ಬೋಧ್ ನಲ್ಲಿ ನಡೆಸಲಾಗುತ್ತದೆ ಎಂದು ಹೇಳಲಾಗಿದೆ.

ಹಿಂದಿಯ ಬಿಗ್​ಬಾಸ್​ 10ರಲ್ಲಿ ಭಾಗವಹಿಸಿದ್ದ ವಿನೋದಾನಂದ್​ ಸಾಕಷ್ಟು ವಿಚಾರಗಳಲ್ಲಿ ಚರ್ಚೆಗೆ ಬಂದಿದ್ದರು. ಬಿಗ್​ಬಾಸ್​ ಮನೆಯ ಸಹಸ್ಪರ್ಧಿಗಳಿಗೆ ಕಿರಿಕಿರಿ ಮಾಡುವುದರ ಜತೆ ಮಹಿಳೆಯರ ಬಗ್ಗೆ ಅವಹೇಳನಕಾರಿ ಕಾಮೆಂಟ್​ ಮಾಡುತ್ತಿದ್ದರು. ಇಬ್ಬರು ಸಹಸ್ಪರ್ಧಿಗಳ ಮೇಲೆ ಮೂತ್ರ ಮಾಡಿದ್ದ ಕಾರಣದಿಂದಾಗಿ ಅವರನ್ನು ಮನೆಯಿಂದ ಹೊರಗೆ ಕಳುಹಿಸಲಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top