fbpx
ಸಮಾಚಾರ

ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಪೋಸ್ಟ್: ನಟನ ವಿರುದ್ಧ ಬಿಜೆಪಿ ಬೆಂಬಲಿಗರ ವಾರ್

ಪೆಟ್ರೋಲ್ ಬೆಲೆಯೇರಿಕೆ ವಿರುದ್ದ ಪೋಸ್ಟ್‌ ಹಾಕಿದ ಕನ್ನಡ ಕಿರುತೆರೆ ನಟನಿಗೆ ನಿಂದನೆ ಎದುರಾಗಿದೆ. ಫೇಸ್ ಬುಕ್ ನಲ್ಲಿ ವಿಜಯ್ ಶೋಭಾರಾಜ್ ಪಾವೂರು ವಿರುದ್ದ ಬಿಜೆಪಿ ಅಭಿಮಾನಿಗಳು ವಾರ್ ಶುರುಮಾಡಿದ್ದಾರೆ.

 

 

ವಿಜಯ್ ಶೋಭಾರಾಜ್ ಪಾವೂರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ‘ನಮೋ ನಮಗೆ ಮೋಸ, ಪೆಟ್ರೋಲ್ ಧಗ ಧಗ, ಡೀಸೆಲ್ ಭಗ ಭಗ’ ಎಂದು ಬರೆದುಕೊಂಡಿದ್ದರು. ಇದನ್ನು ವಿರೋಧಿಸಿರುವ ನಮೋ ಅಭಿಮಾನಿಗಳು ಮೋದಿ ಬಗ್ಗೆ ಮಾತಾನಾಡಿದರೆ ನಾವು ಸುಮ್ಮನಿರುವುದಿಲ್ಲ. ನಿಮ್ಮ ನೂತನ ತುಳು ಸಿನಿಮಾವನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ಕೊಟ್ಟಿದ್ದರು.

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪೋಸ್ಟ್ ಗೆ ತೀವ್ರ ಪ್ರತಿರೋಧ ಬರುತ್ತಿದ್ದಂತೆ ಶೋಭರಾಜ್ ಪೋಸ್ಟ್ ಡಿಲೀಟ್ ಮಾಡಿ ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದಾರೆ. ಶೋಭರಾಜ್ ಹಲವು ತುಳು ಸಿನಿಮಾಗಳಲ್ಲಿ ಹಾಸ್ಯ ನಟನಾಗಿ, ನಿರ್ದೇಶಕರಾಗಿ ಮಿಂಚಿದ್ದರು. ಪ್ರಸ್ತುತ ಕನ್ನಡ ಖಾಸಗಿ ಚಾನಲ್ ಒಂದರಲ್ಲಿ ಬರುವ ಸೀರಿಯಲ್‍ನಲ್ಲೂ ಶೋಭರಾಜ್ ಕಾಣಿಸಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top