fbpx
ಸಮಾಚಾರ

ಇದೇ ಮೊದಲ ಬಾರಿಗೆ ಏರ್ ಶೋನಲ್ಲಿ ಕನ್ನಡದ ಕಡೆಗಣನೆ: ಕನ್ನಡ ವಿರೋಧಿ ಸರ್ಕಾರದ ವಿರುದ್ಧ ಸಂಸದ ಜಿಸಿ ಚಂದ್ರಶೇಖರ್ ಕಿಡಿ

ಯಲಹಂಕದಲ್ಲಿ ನಡೆಯುತ್ತಿರುವ ವಿಶ್ವದ ಮೊದಲ ಹೈಬ್ರಿಡ್‌ ವೈಮಾನಿಕ ಪ್ರದರ್ಶನದಲ್ಲಿ ಕನ್ನಡ ಸಂಪೂರ್ಣ ಕಣ್ಮರೆಯಾಗಿದೆ. ಕೇವಲ ಇಂಗ್ಲಿಷ್‌ ಹಾಗೂ ಹಿಂದಿ ಅಕ್ಷರಗಳು ಮಾತ್ರ ರಾರಾಜಿಸುತ್ತಿವೆ. ವೇದಿಕೆ ಕಾರ್ಯಕ್ರಮ, ಪ್ರದರ್ಶನ ಮಳಿಗೆಗಳು, ವರ್ಚುವಲ್‌ ಕಾರ್ಯಕ್ರಮ, ಕೊನೆಗೆ ಮಾರ್ಗಸೂಚಿ ಫಲಕಗಳಲ್ಲೂ ಇಂಗ್ಲಿಷ್‌ ಹಾಗೂ ಹಿಂದಿ ಮಾತ್ರ ಇವೆ.

 

 

13ನೇ ಬಾರಿಗೆ ನಡೆಯುತ್ತಿರುವ ಏರೋ ಇಂಡಿಯಾ ಪ್ರದರ್ಶನದಲ್ಲಿ ಇದೇ ಪ್ರಥಮ ಬಾರಿಗೆ ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಈ ಹಿಂದಿನ ಏರೋ ಇಂಡಿಯಾ ಪ್ರದರ್ಶನಗಳಲ್ಲಿ ಕನ್ನಡ, ಇಂಗ್ಲಿಷ್‌ ಹಾಗೂ ಹಿಂದಿಯ ನಾಮಫಲಕಗಳು ಇರುತ್ತಿದ್ದವು. ಆದರೆ, ಈ ಬಾರಿ ಪ್ರದರ್ಶನದಲ್ಲಿ ಸಂಪೂರ್ಣವಾಗಿ ಕನ್ನಡ ಮಾಯವಾಗಿದೆ. ಇದು ಕನ್ನಡಿಗರನ್ನು ಕೆರಳಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಕನ್ನಡ ಕಡೆಗಣನೆಗೆ ಸಂಸದ ಜಿಸಿ ಚಂದ್ರಶೇಖರ್ ಅವರು ಕಿಡಿಕಾರಿದ್ದಾರೆ. ” ವಿಶ್ವದ ಮೊದಲ ಹೈಬ್ರೀಡ್ ಏರ್ ಶೋಗೆ ಸಾಕ್ಷಿ ಆದ ಬೆಂಗಳೂರು ಏರೋ ಇಂಡಿಯಾ-2021ದಲ್ಲಿ ಕನ್ನಡವೇ ಮಾಯ! ಈ ಹಿಂದಿ ಹೇರಿಕೆಯನ್ನು ನಿಲ್ಲಿಸಿ” ಎಂದು ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ. ಇನ್ನು ಟ್ವೀಟ್ ನಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಟ್ಯಾಗ್ ಮಾಡಿದ್ದಾರೆ. ಜೊತೆಯಲ್ಲಿ ಏರ್ ಶೋನ ಬ್ಯಾನರ್ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top