fbpx
ಸಮಾಚಾರ

‘ಕೆನ್ನೆಗೆ ಬಾರಿಸಿದ್ದಕ್ಕೆ ಮದುವೆ ಮುರಿದುಕೊಂಡವರು ನೀವು’ ನಟಿ ತಾಪ್ಸಿಗೆ ಪ್ರತಾಪ್ ಸಿಂಹ ಹೀಗಂದಿದ್ಯಾಕೆ..?

ಅಮೆರಿಕದ ಪಾಪ್‌ ಗಾಯಕಿ ರಿಹಾನಾ ಅವರ ಒಂದೇ ಒಂದು ಟ್ವೀಟ್‌ನಿಂದಾಗಿ ರೈತರ ಪ್ರತಿಭಟನೆ ಸ್ವರೂಪ ಬದಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳು ಪರಸ್ಪರ ವಾದ, ವಿವಾದ ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತಂತೆ ಬಾಲಿವುಡ್‌ ನಟಿ ತಾಪ್ಸೀ ಪನ್ನು ಅವರು ಖಾರವಾಗಿ ಟ್ವೀಟ್‌ ಮಾಡಿದ್ದರು. ಅದಕ್ಕೆ ಈಗ ಮೈಸೂರು ಸಂಸದ ಪ್ರತಾಪ್‌ ಸಿಂಹ ಪ್ರತ್ಯುತ್ತರ ನೀಡಿದ್ದಾರೆ.

 

 

”ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿದ ತಾಪ್ಸಿ ಪನ್ನು, ‘ಒಂದು ಟ್ವೀಟ್ ನಿಮ್ಮ ಐಕ್ಯತೆಯನ್ನು ಒಡೆಯುವುದಾದರೆ, ಒಂದು ಜೋಕ್ ನಿಮ್ಮ ನಂಬಿಕೆಯನ್ನು ಅಲುಗಾಡಿಸುವುದಾದರೆ, ಒಂದು ಘಟನೆ ನಿಮ್ಮ ಧಾರ್ಮಿಕ ನಂಬಿಕೆಗೆ ಧಕ್ಕೆ ತರುವುದಾದರೆ, ನೀವು ನಿಮ್ಮ ನಂಬಿಕೆಗಳನ್ನು ಗಟ್ಟಿಮಾಡಿಕೊಳ್ಳಬೇಕಿದೆಯೇ ಹೊರತು ಬೇರೆಯವರಿಗೆ ಆದರ್ಶದ ಪಾಠ ಮಾಡುವ ಶಿಕ್ಷಕರಾಗಬಾರದು” ಎಂದು ನಟಿ ತಾಪ್ಸಿ ಟ್ವೀಟ್ ಮಾಡಿದ್ದರು.

ಪ್ರತಾಪ್ ಸಿಂಹ ಟಾಂಗ್:
ತಾಪ್ಸಿ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಸಿಂಹ, ತಾಪ್ಸೀ ಅವರೇ, ಓರ್ವ ರಶ್ದಿ ಭಾರತೀಯ ಮುಸ್ಲಿಮರನ್ನು ಕೆರಳಿಸಿತು. ಒಂದು ವ್ಯಂಗ್ಯಚಿತ್ರವು ಪ್ರಪಂಚದಾದ್ಯಂತ ಮುಸ್ಲಿಮರನ್ನು ಕೆರಳಿಸಿತು. ಒಂದು ಪುಸ್ತಕ (ಖಿhe ಜಚಿ ಗಿiಟಿಛಿi ಅoಜe) ವಿಶ್ವದೆಲ್ಲೆಡೆ ಕ್ರಿಶ್ಚಿಯನರಲ್ಲಿ ಸಂಚಲನ ಮೂಡಿಸಿತ್ತು. ಅಂತೆಯೇ ಕೇವಲ ಒಂದು ಬಾರಿ ಕೆನ್ನೆಗೆ ಬಾರಿಸಿದ್ದಕ್ಕೆ ನೀವು ಮದುವೆ ಮುರಿದುಕೊಂಡ್ರಿ. ದಯವಿಟ್ಟು ಸ್ಕ್ರಿಪ್ಟೆಡ್ ಸಿನಿಮಾ ಡೈಲಾಗ್‍ಗಳಿಗೆ ನಿಮ್ಮನ್ನು ನೀವು ಸೀಮಿತಗೊಳಿಸಿಕೊಳ್ಳಿ. ಉಳಿದ ವಿಚಾರಗಳು ನಿಮ್ಮ ಜ್ಞಾನದ ಹೊರಗಿದೆ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top