fbpx
ಸಮಾಚಾರ

‘ಬರೀ ಹೊಡೆದಾಟ, ಲಾಂಗುಗಳ ಪ್ರದರ್ಶನ’: ಕನ್ನಡ ಸಿನಿಮಾದ ಟೀಸರ್ ನೋಡಿ ಸಚಿವ ಸುರೇಶ್ ಕುಮಾರ್ ಬೇಸರ

ಕನ್ನಡ ಸಿನಿಮಾದ ಟೀಸರ್‌ವೊಂದನ್ನು ನೋಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. ”ಬರೀ ಹೊಡೆದಾಟ, ಲಾಂಗುಗಳ ಪ್ರದರ್ಶನ, ಯುವಕರನ್ನು ಹಿಂಸೆಗೆ ಪ್ರಚೋದಿಸುವ ಸಂಭಾಷಣೆ…. ” ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. ಯಾವುದು ಆ ಸಿನಿಮಾ, ಏನು ವಿಚಾರಾ ಅಂತೀರಾ? ಪೂರ್ತಿ ಓದಿ

 

 

ಅದು ಸಿನಿಮಾದ ಟೀಸರ್ ಎನ್ನುವುದರ ಬಗ್ಗೆ ಮಾಹಿತಿ ನೀಡದ ಸುರೇಶ್ ಕುಮಾರ್, ಸಲೂನ್ ಶಾಪ್‌ನಲ್ಲಿ ನಡೆದ ಘಟನೆಯನ್ನು ಸಾಮಾಜಿಕ ಜಾಲಜಾಣದಲ್ಲಿ ವಿವರವಾಗಿ ಬರೆದುಕೊಂಡಿದ್ದಾರೆ.

ಸುರೇಶ ಕುಮಾರ್ ಅವರ ಒಕ್ಕಣೆ ಈ ರೀತಿಯಾಗಿದೆ:
“ನಿನ್ನೆ ಸಂಜೆ ನನ್ನ ಗಡ್ಡ ಮತ್ತು ತಲೆಗೂದಲು ಟ್ರಿಮ್ ಮಾಡಿಸಲು ಮಾಮೂಲಿನಂತೆ ಹೇರ್ ಡ್ರೆಸ್ಸಿಂಗ್ ಸೆಲೂನ್ ಗೆ ಹೋಗಿದ್ದೆ. ಸಲೂನ್ ಗಳಲ್ಲಿ ಟ್ರಿಮ್ ಮಾಡಿಸಿಕೊಳ್ಳುವ ಆ ಸಮಯ ಬಹಳ ಆರಾಮಾಗಿ ಇರುವಂತಹ ಅವಧಿ. ಇದನ್ನು ಬಹಳಷ್ಟು ಜನ “ಪಟ್ಟಾಭಿಷೇಕ” ಎಂದೂ ಹೇಳುವುದುಂಟು.”

“ನಾನು ನಿನ್ನೆ ಟ್ರಿಮ್ ಮಾಡಿಸಿಕೊಳ್ಳುತ್ತಿದ್ದಾಗ ಓರ್ವ ಯುವಕ ನನ್ನನ್ನು ಮಾತನಾಡಿಸಲು ಬಹಳಷ್ಟು ಪ್ರಯತ್ನಿಸುತ್ತಿದ್ದದ್ದನ್ನು ಗಮನಿಸಿದೆ. ಕೊನೆಗೂ ಆ ವ್ಯಕ್ತಿ ನನ್ನನ್ನು ಮಾತನಾಡಿಸಿ ಆ ನನ್ನ ನೆಮ್ಮದಿಗೆ ಕಲ್ಲೆಸೆದುಬಿಟ್ಟರು. ಆ ಯುವಕನ ಬೇಡಿಕೆಯೆಂದರೆ ತಾನು ನಟಿಸಿರುವ ಚಲನಚಿತ್ರವನ್ನು ನಾನು ನೋಡಬೇಕೆಂದು. ಅವರು ಹೇಳಿದ ದಿನಾಂಕದಂದು ನನಗೆ ಪುರುಸೋತ್ತು ಇಲ್ಲದ್ದರಿಂದ ಕೊನೆಯ ಪಕ್ಷ ತಾನು ನಟಿಸಿರುವ ಚಿತ್ರದ ಟೀಸರ್ ಆದರೂ ವೀಕ್ಷಿಸಲು ದುಂಬಾಲು ಬಿದ್ದರು.”

ಇನ್ನೇನು ಮಾಡುವುದು. ಒಪ್ಪಿ ನೋಡಿದೆ. ಆ ಚಿತ್ರದ ಟೀಸರ್ ನೋಡಿ ಸೆಲೂನಿನಲ್ಲಿ ನಾನು ಅನುಭವಿಸಲು ಹೋಗಿದ್ದ ನನ್ನ ನೆಮ್ಮದಿ ಎಲ್ಲಾ ಹಾರಿಹೋಯಿತು. ಬರೀ ಹೊಡೆದಾಟ, ಲಾಂಗುಗಳ ಪ್ರದರ್ಶನ, ಯುವಕರನ್ನು ಹಿಂಸೆಗೆ ಪ್ರಚೋದಿಸುವ ಸಂಭಾಷಣೆ…. ಇತ್ಯಾದಿಗಳಿಂದ ಈ ಟೀಸರ್ ತುಂಬಿತ್ತು. ಆ ಟೀಸರ್ ನೋಡಿದ್ದು ಮುಕ್ತಾಯವಾದ ಮೇಲೆ ಆ ವ್ಯಕ್ತಿಗೆ ಬೇಸರ ಆಗಬಾರದೆಂದು ನಾನೇನೂ ಮಾತನಾಡದೆ ಅವನ ಭುಜ ತಟ್ಟಿ ಹೊರ ನಡೆದೆ.”

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top