fbpx
ಸಮಾಚಾರ

ಮಯೂರಿ ಮದುವೆಯಲ್ಲಿ ಧಾರೆ ಎರೆದು ಕನ್ಯಾದಾನ ಮಾಡಿದ್ದು ಜೆ.ಕೆ. ಪೋಷಕರು; ಕಾರಣವೇನು? ರಿವೀಲ್ ಮಾಡಿದ ನಟಿ

ಸ್ಯಾಂಡಲ್‌ವುಡ್ ನಟಿ ಮಯೂರಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಂದರ್ಭ ಚಾಟ್ ಕಾರ್ನರ್‌ನಲ್ಲಿ ಭಾಗವಹಿಸಿದ ನಟಿ ತಮ್ಮ ಮದುವೆಯ ಬಗ್ಗೆ ವಿಶೇಷ ಸುದ್ದಿಯೊಂದನ್ನು ರಿವೀಲ್ ಮಾಡಿದ್ದಾರೆ. ಮಯೂರಿ ಮದುವೆಯಲ್ಲಿ ಅವರನ್ನು ಧಾರೆ ಎರೆದುಕೊಟ್ಟಿದ್ದು ಅವರ ಅಕ್ಕನೋ, ಸಂಬಂಧಿಯೋ ಅಲ್ಲ. ಬದಲಾಗಿ ಅಶ್ವಿನಿ ನಕ್ಷತ್ರ ಧಾರವಾಹಿಯಲ್ಲಿ ಮಯೂರಿ ಅವರ ಸಹನಟ ಜೆಕೆ ಅವರ ಪೋಷಕರು.

 

 

ಮಯೂರಿ ಅವರಿಗೆ ತಂದೆ ಇಲ್ಲ. ಇಷ್ಟಕಾಮ್ಯ ಸಿನಿಮಾ ಸಮಯದಲ್ಲಿ ಅವರ ತಂದೆ ತೀರಿಕೊಂಡಿದ್ದರು. ಹೀಗಾಗಿ ಮದುವೆ ಸಮಯದಲ್ಲಿ ಕನ್ಯಾದಾನ ಯಾರು ಮಾಡುವುದು ಎಂದು ಚಿಂತಿಸುತ್ತಿದ್ದರು. ಲಾಕ್​ಡೌನ್ ಆದ ಕಾರಣ ಮಯೂರಿ ಅವರ ಸಂಬಂಧಿಕರು ಹುಬ್ಬಳ್ಳಿಯಿಂದ ಬರಲು ಸಾಧ್ಯವಾಗಿರಲಿಲ್ಲ. ಮಯೂರಿ ಅವರ ಸಂಬಂಧಿಕರೆಲ್ಲ ಹುಬ್ಬಳ್ಳಿಯಲ್ಲಿದ್ದರು. ಕೊರೋನಾವಾದ್ದರಿಂದ ಯಾರೊಬ್ಬರೂ ಮದುವೆಗೂ ಬರುವ ಧೈರ್ಯ ತೋರಿಸಲಿಲ್ಲ. ಇನ್ನು ಕಾರಣಾಂತರಗಳಿಂದ ಅವರ ಅಕ್ಕನೂ ತಂಗಿಯನ್ನು ಧಾರೆ ಎರೆಯುವ ಸ್ಥಿತಿಯಲ್ಲಿರಲಿಲ್ಲ.

ಕನ್ಯಾದಾನ ಮಾಡುವುದು ಯಾರು ಎಂದು ಮಯೂರಿ ಮತ್ತು ಅವರ ತಾಯಿ ಚಿಂತಿಸುತ್ತಿದ್ದರಂತೆ. ಇದೆ ವಿಚಾರವನ್ನು ನಟ ಜೆ.ಕೆ ಬಳಿ ಹೇಳಿಕೊಂಡಿದ್ದಾರೆ. ಮಯೂರಿ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದ ಜೆಕೆ ಪಕ್ಕದಲ್ಲಿಯೆ ಇದ್ದ ಅಮ್ಮನಿಗೆ ಫೋನ್ ಕೊಟ್ಟಿದ್ದಾರೆ. ಆಗ ಜೆಕೆ ಪೋಷಕರು ನಾವಿರುವಾಗ ಯಾಕೆ ಯೋಚಿಸುತ್ತೀರಿ. ನಾವೆ ಧಾರೆ ಎರೆದು ಕೊಡ್ತೀವಿ ಅಂತ ಹೇಳಿದ್ದಾರೆ. ಮಾತಿನಂತೆ ಜೆಕೆ ಅಪ್ಪ-ಅಮ್ಮ ಕನ್ಯಾದಾನ ಮಾಡಿಕೊಟ್ಟಿದ್ದಾರೆ..

 

ಮಯೂರಿಯನ್ನು ತಮ್ಮ ಸ್ವಂತ ಮಗಳಂತೆ ಧಾರೆ ಎರೆದು ಕೊಟ್ಟಿದ್ದರು. ಈ ಸಂದರ್ಭ ‘ನಾವಿರುವಾಗ ನೀನು ಯಾಕೆ ಯೋಚನೆ ಮಾಡ್ತೀಯಾ? ನಾವೇ ಧಾರೆ ಎರೆದು ಕೊಡ್ತೀವಿ, ಚಿಂತೆ ಮಾಡ್ಬೇಡ’ ಎಂದು ಜೆ.ಕೆ. ಅವರ ಅಮ್ಮ ಹೇಳಿದರಂತೆ. ಅದರಂತೆ ಮದುವೆಯ ದಿನ ಮಧ್ಯರಾತ್ರಿ 1 ಗಂಟೆಗೆ ದೇವಸ್ಥಾನದಲ್ಲಿ ಜೆ.ಕೆ. ಹಾಗೂ ಅವರ ತಂದೆ ತಾಯಿ ಆಗಮಿಸಿ ಎಲ್ಲಾ ಶಾಸ್ತ್ರಗಳನ್ನು ಮುಂದೆ ನಿಂತು ನೆರವೇರಿಸಿ, ಕನ್ಯಾದಾನ ಮಾಡಿ ಕೊಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top