fbpx
ಸಮಾಚಾರ

ಮಿಲನಾ ನಾಗರಾಜ್‌ & ಕೃಷ್ಣ ಮದುವೆ ಸಂಭ್ರಮ: ಶಾಸ್ತ್ರದ ವಿಡಿಯೋ ಹಂಚಿಕೊಂಡ ಮಿಲನಾ ನಾಗರಾಜ್

ಚಂದನವನದ ಚೆಂದದ ಜೋಡಿ ಮಿಲನಾ ನಾಗರಾಜ್‌ ಮತ್ತು ಡಾರ್ಲಿಂಗ್‌ ಕೃಷ್ಣ ಅವರ ಹಲವು ವರ್ಷಗಳ ಪ್ರೀತಿಗೆ ಈಗ ಮದುವೆಯ ಮುದ್ರೆ ಬೀಳುತ್ತಿದೆ. ‘ಲವ್‌ ಮಾಕ್‌ಟೇಲ್‌’ ಸಿನಿಮಾದಿಂದ ಭಾರಿ ಯಶಸ್ಸು ಪಡೆದ ಈ ರಿಯಲ್‌ ಲೈಫ್‌ ಪ್ರೇಮಿಗಳು ಫೆ.14ರಂದು ಎಲ್ಲರ ಸಮ್ಮುಖದಲ್ಲಿ ಹಸೆಮಣೆ ಏರಲಿದ್ದಾರೆ. ಅದಕ್ಕೂ ಮುನ್ನ ಮಿಲನಾ ಮನೆಯಲ್ಲಿ ಮದುವೆ ಶಾಸ್ತ್ರಗಳು ಶುರುವಾಗಿವೆ.

 

 

‘ಮದುವೆ ಶಾಸ್ತ್ರಗಳು ಆರಂಭವಾಗಿವೆ. ನಮ್ಮ ಕುಟುಂಬದಲ್ಲಿ ಮದುವೆ ಕಾರ್ಯಕ್ರಮ ಆರಂಭವಾಗುವ ಮುನ್ನ ಮಾಡುವ ಶಾಸ್ತ್ರವಿದು,’ ಎಂದು ಮಿಲನಾ ಬರೆದು ಕೊಂಡಿದ್ದಾರೆ. ಮೂರು ಬಾಳೆಎಲೆ ಹಾಸಿ ದೇವರಿಗೆ ಪೂಜೆ ಸಾಮಾಗ್ರಿ ಬುತ್ತಿಯನ್ನು ನೀಡಿಲಾಗಿದೆ. ಪೂಜೆಯ ಹೆಸರು ಏನೆಂದು ತಿಳಿದಿಲ್ಲವಾದರೂ ನೋಟಕ್ಕೆ ಇದು ದಾಸಪ್ಪನ ಪೂಜೆ ಅಥವಾ ದೇವರಿಗೆ ಬೆಲ್ಲದನ್ನ ಸಮರ್ಪಣೆ ಮಾಡುತ್ತಿರುವುದು ಎನ್ನಬಹುದು.

ಈ ವಿಡಿಯೋದಲ್ಲಿ ಮಿನಲನಾ ಬಿಳಿ ಬಟ್ಟೆಯಿಂದ ಸುತ್ತಿದ ಬುಟ್ಟಿಯನ್ನು ತಮ್ಮ ತಲೆ ಮೇಲೆ ಇಟ್ಟುಕೊಂಡು ಬಂದು ವಿಶೇಷ ಪೂಜೆ ಸಲ್ಲಿಸುತ್ತಾರೆ. ಪೂಜೆ ಮಾಡುವ ಮೂಲಕ ಮದುವೆಯ ಶಾಸ್ತ್ರವನ್ನು ಆರಂಭಿಸುತ್ತಾರೆ. ಮಿಲನಾ ಅಷ್ಟಕ್ಕೂ ಮಾಡಿದ ಶಾಸ್ತ್ರದ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಂಡಿಲ್ಲ.

ಮಿಲನಾ ಹಾಗೂ ಕೃಷ್ಣನ ಮದುವೆಗೆ ಐದು ದಿನಗಳು ಬಾಕಿಯಿವೆ. ಅದ್ಧೂರಿಯಾಗಿ ಮದುವೆಯಾಗಲು ಕನಸು ಕಂಡಿದ್ದ ಜೋಡಿ ಲಾಕ್​ಡೌನ್ ನಂತರ ಮದುವೆಯಾಗಲು ನಿರ್ಧರಿಸಿದರು. ಅದರಂತೆ ಈಗ ಪ್ರೇಮಿಗಳ ದಿನದಂದು ಅದ್ಧೂರಿಯಾಗಿ ಹಸೆಮಣೆ ಏರಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top