ಚೆನ್ನೈನ ಎಂ. ಎ ಚಿದಂಬರಂ ಕ್ರೀಡಾಂಗಣ ಸಾಗುತ್ತಿರುವ ಭಾರತ – ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸುತ್ತಿದೆ. ಈ ನಡುವೆ ಭಾರತದ ಡ್ರೆಸ್ಸಿಂಗ್ನಲ್ಲಿ ಮೊಹಮ್ಮದ್ ಸಿರಾಜ್ ಹಾಗೂ ಕುಲ್ದೀಪ್ ಯಾದವ್ ಅವರ ಘಟನೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಷ್ಟೊಕ್ಕು ಈ ವಿಡಿಯೋದಲ್ಲಿ ಏನು ಇದೆ ಅಂತೀರಾ… ಮುಂದೆ ಓದಿ
What was that ???😢
Is this real or friendly ??#INDvsENG #Kuldeep #siraj #ChennaiTest pic.twitter.com/Z8pI4H6kV3— Gaurang Gundaniya (@itsdocGG) February 6, 2021
ಮೊಹಮ್ಮದ್ ಸಿರಾಜ್ ಯುವ ಸ್ಪಿನ್ನರ್ ಕುಲದೀಪ್ ಯಾದವ್ ಕುತ್ತಿಗೆಯನ್ನು ಹಿಡಿದೆಳೆದಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಭಾರತೀಯ ಡ್ರೆಸ್ಸಿಂಗ್ ಕೋಣೆಯಲ್ಲಿನ ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಸ್ಪಿನ್ನರ್ ಸ್ಪಿನ್ನರ್ ಕುಲದೀಪ್ ಯಾದವ್ ಅವರ ಕತ್ತಿನ ಹಿಂಭಾಗವನ್ನು ಕೋಪದಿಂದ ಹಿಡಿದೆಳೆದಿರುವುದು ಕಂಡುಬಂದಿದೆ.
What was that ???😢
Is this real or friendly ??#INDvsENG #Kuldeep #siraj #ChennaiTest pic.twitter.com/Z8pI4H6kV3— Gaurang Gundaniya (@itsdocGG) February 6, 2021
ಸಿರಾಜ್ ಈ ವರ್ತನೆಗೆ ನಿಜವಾದ ಕಾರಣ ಏನೆಂಬೋದು ಇನ್ನೂ ಗೊತ್ತಾಗಿಲ್ಲ. ಒಂದೋ ಏನೋ ಕಾರಣಕ್ಕೆ ಸಿರಾಜ್ ಅವರು ಯಾದವ್ ಮೇಲೆ ಕೋಪಗೊಂಡಿರಬೇಕು. ಇಲ್ಲವೆ, ಸ್ನೇಹಿತರೊಂದಿಗೆ ನಾವು ತಮಾಷೆಯಾಗಿ ಕೆಲವೊಮ್ಮೆ ಹೀಗೆ ಮುನಿಸಿದಂತೆ ನಟಿಸುತ್ತೇವೆ ಅಲ್ಲವೆ? ಹಾಗೆ ತಮಾಷೆಯಾಡಿರಬೇಕು. ಆದರೆ ಸ್ಪಷ್ಟ ಕಾರಣ ಇನ್ನೂ ತಿಳಿದಿಲ್ಲ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
