fbpx
ಸಮಾಚಾರ

ಸಾವು ಬದುಕಿನ ಮದ್ಯೆ ಹೋರಾಡುತ್ತಿರುವ ಪುಟ್ಟ ಕಂದಮ್ಮನ ನೋವಿಗೆ ಮಿಡಿದ ಕನ್ನಡದ ಹೃದಯವಂತ ಸಂಸದ

ಕನ್ನಡಿಗರ ಕಷ್ಟ ಕಾರ್ಪಣ್ಯ ಎಂದರೆ ಒಂದೂ ಕ್ಷಣವೂ ಯೋಚಿಸದೆ ನೆರವಿಗೆ ಧಾವಿಸಿ ಕಷ್ಟದಲ್ಲಿರುವವರಿಗೆ ಆಸರೆಯಾಗುವ ಮಾತೃಹೃದಯಿ ಸಂಸದ ಜಿಸಿ ಚಂದ್ರಶೇಖರ್ ಅವರು ಮತ್ತೊಮ್ಮೆ ಸಮಸ್ತ ಕನ್ನಡಿಗರ ಹೃದಯ ಗೆದ್ದಿದ್ದಾರೆ. ‘ಸ್ಪೈನಲ್ ಮಸ್ಕ್ಯೂಲರ್ ಅಟ್ರೋಪಿ’ ಎನ್ನುವ ವಿಚಿತ್ರ ಕಾಯಿಲೆಯಿಂದಾಗಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಪುಟ್ಟ ಕಂದಮ್ಮನಿಗೆ ಚಂದ್ರಶೇಖರ್ ಸಹಾಯಹಸ್ತ ಚಾಚಿದ್ದಾರೆ.

ಕಳೆದ ನಾಲ್ಕೈದು ದಿನಗಳಿಂದ ಹೆಚ್ಚು ಸುದ್ದಿಗೆ ಗ್ರಾಸವಾಗಿರುವುದು ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ 11 ವರ್ಷದ ಪುಟ್ಟ ಮಗುವಿನ ಕರುಣಾಜನಕ ಕಥೆ.. ‘ಜನೀಶ್’ ಹೆಸರಿನ ಈ ಮಗುವಿನ ಕಷ್ಟ ನೋಡಿ ಈಗಾಗಲೇ ಸಾಕಷ್ಟು ರಾಜಕಾರಣಿಗಳು, ಸಿನಿಮಾ ನಟರು ಮತ್ತು ಸಾರ್ವಜನಿಕರು ಕೂಡ ಸ್ವಯಂ ಪ್ರೇರಿತರಾಗಿ ಸಹಾಯ ಮಾಡಲು ಮುಂದಾಗಿದ್ದಾರೆ. ಇದೀಗ ಕನ್ನಡಿಗರ ಹೆಮ್ಮೆಯ ಸಂಸದ ಜಿಸಿ ಚಂದ್ರಶೇಖರ್ ಅವರು ಈ ಸುದ್ದಿ ಕೇಳಿ ಆ ಮಗುವಿನ ನೆರವಿಗೆ ಧಾವಿಸಿದ್ದಾರೆ.

ಸ್ಪೈನಲ್ ಮಸ್ಕ್ಯೂಲರ್ ಆಟ್ರೋಪಿ (Spinal muscular atrophy) ಸಮಸ್ಯೆಯನ್ನು ಬಗೆಹರಿಸಲು ₹16 ಕೋಟಿ ಮೊತ್ತದ ಇಂಜೆಕ್ಷನ್​ ನೀಡಬೇಕಿದ್ದು, 11ತಿಂಗಳ ಜನೀಶ್ ಬದುಕುಳಿಯಲು ಬೇಕಾದ ಇಂಜೆಕ್ಷನ್ ಅಮೇರಿಕಾದಿಂದಲೇ ತರಿಸಬೇಕಾಗಿದೆ. ಇದ್ದ ಹಣವನ್ನೆಲ್ಲ ಕಂದನ ಚಿಕಿತ್ಸೆಗಾಗಿ ಖರ್ಚು ಮಾಡಲಾಗಿದ್ದು, ಹಣವನ್ನು ಎಲ್ಲಿಂದ ತರುವುದೆಂದು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ಅವರ ಕಣ್ಣೀರನ್ನು ಒರೆಸಲು ಸಹೃದಯ ದಾನಿಗಳಿಂದ ಮಾತ್ರ ಸಾಧ್ಯವಿದೆ. ಹೀಗಾಗಿ ಮಗುವಿನ ಚಿಕಿತ್ಸೆಗೆ ನೆರವಾಗುವಂತೆ ಪ್ರಧಾನಿ ಮೋದಿಗೆ ರಾಜ್ಯಸಭಾ ಸದಸ್ಯ ಜಿ. ಸಿ ಚಂದ್ರಶೇಖರ್ ಪತ್ರ ಬರೆದಿದ್ದಾರೆ.

 

 

ಪ್ರಧಾನಿಗೆ ರಾಜ್ಯಸಭಾ ಸದಸ್ಯ ಚಂದ್ರಶೇಖರ್ ಪತ್ರ :
ಜಿನಿಶ್​ಗೆ ವಿಶೇಷವಾದ ಜೆನಿಟಿಕ್ ಖಾಯಿಲೆ‌ ಇದೆ. ಮಗು ಜನೀಶ್ ಚಿಕಿತ್ಸೆಗಾಗಿ 16 ಕೋಟಿ ರೂ. ಅಗತ್ಯವಾಗಿರುವ ಹಿನ್ನೆಲೆಯಿಂದಾಗಿ ಪ್ರಧಾನಿಗೆ ಪತ್ರ ಬರೆದಿರುವ ರಾಜ್ಯಸಭಾ ಸದಸ್ಯ ಚಂದ್ರಶೇಖರ್, ಅಗತ್ಯ ಹಣ ಮಂಜೂರು ಮಾಡಿ ಮಗುವನ್ನ ಉಳಿಸಲು ಮನವಿ ಮಾಡಿದ್ದಾರೆ. ಮಗುವಿಗೆ ಬೇಕಾಗಿರುವ 16 ಕೋಟಿ ಮೌಲ್ಯದ ಔಷಧವನ್ನು ವಿದೇಶದಿಂದಲೇ ಆಮದು ಮಾಡಿಕೊಳ್ಳಬೇಕು. ಹೀಗಾಗಿ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಆರ್ಥಿಕ ಸಹಾಯ ನೀಡುವಂತೆ ಮನವಿ ಮಾಡಿರುವುದಲ್ಲದೆ ಔಷಧ ಮೇಲಿನ ಎಲ್ಲಾ ತೆರಿಗೆಗಳನ್ನ ಮನ್ನ ಮಾಡುವಂತೆ ಮನವಿ ಮಾಡಿದ್ದಾರೆ. ಹಾಗೆಯೇ ಈ ವಿಚಾರದ ಬಗ್ಗೆ ಆರ್ಥಿಕ ಸಚಿವ ನಿರ್ಮಲಾ‌ ಸೀತಾರಾಮನ್​ ಅವರಿಗೂ, ಜಿ ಸಿ ಚಂದ್ರಶೇಖರ್ ಪ್ರತಿ ರವಾನಿಸಿದ್ದಾರೆ.

 

 

ಅಂದಹಾಗೆ ಸಂಜೀವಿನಿ ನಗರದ ನವೀನ್ ಕುಮಾರ್ ಮತ್ತು ಜ್ಯೋತಿ ದಂಪತಿಗಳು 11 ತಿಂಗಳ ಪುಟ್ಟ ಕಂದಮ್ಮನ ಚಿಕಿತ್ಸೆಗಾಗಿ ನೆರವಿನ ಸಹಾಯ ಹಸ್ತ ಚಾಚುತ್ತಿದ್ದಾರೆ. ಈ ಕರುನಾಡಿನ ಪುಣ್ಯವಂತರು, ಹೃದಯವಂತರು, ಆಳುವ ಸರ್ಕಾರ ನೆರವಿಗೆ ಬರಬೇಕಿದೆ. ಈ ದಂಪತಿಯ ಕಣ್ಣೀರಿಗೆ ಆಸರೆಯಾಗಬೇಕಿದೆ.

ಕೆಳಗಿನ ಅಕೌಂಟ್ ನಂಬರ್ ಗೆ ಹಣವನ್ನು ಹಾಕಿ ಮಗುವಿನ ಚಿಕಿತ್ಸೆಗೆ ನೆರವಾಗಿ..

ಪೋನ್ ಪೇ /ಗೂಗಲ್ ಪೇ ನಂಬರ್: 9611789719
Account Holder name: JYOTHI
A/C Number:374201000000285
IFSC: IOBA೦೦೦3742
Branch: Sahakaranagar, Bengaluru

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top