fbpx
ಸಮಾಚಾರ

ಜಾರಕಿಹೊಳಿ ರಾಸಲೀಲೆ ಸಿ.ಡಿ ಇಟ್ಟುಕೊಂಡು ತಮ್ಮ ಸಿನಿಮಾ ಪ್ರೊಮೋಷನ್ ಮಾಡಿಕೊಂಡ ಒಳ್ಳೆ ಹುಡ್ಗ ಪ್ರಥಮ್

ಅದೇನೇ ಸಾಮಾಜಿಕ ಪಲ್ಲಟಗಳು ಸಂಭವಿಸಿದರೂ ಅದಕ್ಕೆ ತಮ್ಮದೇ ವಯಕ್ತಿಕ ವಿಚಾರಗಳನ್ನು ಸೇರಿಸಿ, ತಮ್ಮ ದೃಷ್ಟಿಕೋನದಲ್ಲಿ ಕೂಡಲೇ ರಿಯಾಕ್ಟ್ ಮಾಡುವವರು ನಟ ಕಮ್ ನಿರ್ದೇಶಕ ಪ್ರಥಮ್. ಈಗ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿರುವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಪ್ರಕರಣದ ಬಗ್ಗೆ ಪ್ರಥಮ್ ಅವರು ತಮ್ಮದೇ ರೀತಿ ರಿಯಾಕ್ಟ್ ಮಾಡಿ ತಮ್ಮ ಸಿನಿಮಾದ ಪ್ರೊಮೋಷನ್ ಮಾಡಿಕೊಂಡಿದ್ದಾರೆ.

 

 

“ಯಾರೆಲ್ಲಾ CDನೋಡಿದ್ರೋ ನಿಜ ಹೇಳಿ!ಯಾವsceneಇಷ್ಟ ಆಯ್ತು😅? Punch dailogue superಅಲ್ವಾ?ಮಜಾ ಇದೆ ಅಲ್ವಾ? ನಾನ್ ಮಾತಾಡ್ತಿರೋದು #ಕರ್ನಾಟಕದಅಳಿಯ teaserಬಗ್ಗೆ😅! ನೀವೆಲ್ಲಾ ಏನಂಕೊಂಡ್ರಿ 😱? ನಿಜವಾಗಿಯೂ #ಕರ್ನಾಟಕದ_ಅಳಿಯ ಬಗ್ಗೆನೇ ಮಾತಾಡ್ತಾ ಇರೋದು!ಬೇರೆCDಬಗ್ಗೆ ನನಗೊತ್ತಿಲ್ಲ!ಬೇಕಾಗಿಯೂ ಇಲ್ಲ!”

“ನಮ್ ಜನನೇ ಇಷ್ಟು! ಸನ್ನಿ ಲಿಯೋನ್ ಬಂದ್ಲು ಅಂತ silk Smitha ನ ಮರೆತುಬಿಟ್ರು!!! Video CD ಸಿಕ್ತು ಅಂತ ನಮ್ #ಕರ್ನಾಟಕದಅಳಿಯ ಸಕ್ಕತಾಗಿರೋ teaser ನ ಮರೆತೇ ಬಿಟ್ರು! #droneprathap ಬಂದ ಅಂತ #ಕುರಿಪ್ರತಾಪ್ ನ ಮರೀಬೇಡ್ರೋ 😅😂 #ಕರ್ನಾಟಕದ_ಅಳಿಯ teaser ನೋಡ್ರೋ…share ಮಾಡ್ರೋ” ಎಂದು ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ..

 

 

ಇದರ ಜೊತೆಗೆ ಮತ್ತೊಂದು ಟ್ವೀಟ್ ಅನ್ನು ಕೂಡ ಪ್ರಥಮ್ ಅವರು ಮಾಡಿದ್ದು ಅಧಿವೇಶನದಲ್ಲಿ ಸಿಡಿ ಬಗ್ಗೆ ಹೆಚ್ಚಾಗು ಚರ್ಚಿಸಬಾರದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. “ಅಧಿವೇಶನಕ್ಕೆ ಅದರದ್ದೇ ಆದ ಗೌರವವಿದೆ.ಕೆಲಸಕ್ಕೆಬಾರದ CD,cameraಯಾರಿಟ್ಟಿದ್ದು? focusಹೋಗಿದೆ,colour correctionಮಾಡ್ಸಿಲ್ಲ.CDಬದಲುpendrive useಮಾಡ್ಬೇಕಿತ್ತು ಅನ್ನೋ ಚರ್ಚೆ ಬೇಡ!ನಾಳಿನ ಅಧಿವೇಶನದಲ್ಲಿ ಅಗತ್ಯವಸ್ತು ಬೆಲೆಏರಿಕೆ,ಅಭಿವೃದ್ಧಿ ಕಾರ್ಯದ ಚರ್ಚೆಯಾಗಲಿ!ಸಾಕಾಗೋಗಿದೆ ಎಂದು ಬೇಸರದಿಂದ ಟ್ವೀಟ್ ಮಾಡಿದ್ದಾರೆ ಪ್ರಥಮ್. ತಮ್ಮ ಟ್ವೀಟ್‌ನಲ್ಲಿ ಬಿಎಸ್‌ವೈ, ಸಿದ್ದರಾಮಯ್ಯ ಸೇರಿ ಪ್ರಮುಖರನ್ನು ಟ್ಯಾಗ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top