fbpx
ಸಮಾಚಾರ

ರವಿಚಂದ್ರನ್​ ಸದಾ ಕಪ್ಪು ಬಟ್ಟೆ ಹಾಕೋದು ಯಾಕೆ? ವೇದಿಕೆಯಲ್ಲಿಯೇ ಗುಟ್ಟು ರಟ್ಟು ಮಾಡಿದ ಸುದೀಪ್​!

ಕಿಚ್ಚ ಸುದೀಪ್​ ಅವರು ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ‘ಕೋಟಿಗೊಬ್ಬ 3’ ಚಿತ್ರತಂಡ ದೊಡ್ಡ ಕಾರ್ಯಕ್ರಮ ನಡೆಯಿತು. ಇದರಲ್ಲಿ ಸ್ಯಾಂಡಲ್​ವುಡ್​ನ ಅನೇಕರು ಪಾಲ್ಗೊಂಡಿದ್ದರು. ವೇದಿಕೆ ಮೇಲೆ ‘ಕ್ರೇಜಿ ಸ್ಟಾರ್​’ ರವಿಚಂದ್ರನ್​ ಕೂಡ ಇದ್ದರು. ಈ ಸಂದರ್ಭದಲ್ಲಿ ಅವರ ಬಗ್ಗೆ ಸುದೀಪ್​ ಮಾತನಾಡಿದರು. ರವಿಚಂದ್ರನ್​ ಯಾವಾಗಲೂ ಕಪ್ಪು ಬಟ್ಟೆ ಧರಿಸೋದು ಯಾಕೆ ಎಂಬುದನ್ನು ಸುದೀಪ್ ಬಹಿರಂಗ ಪಡಿಸಿದರು.

ಈ ಸಮಯದಲ್ಲಿ ಮಾತನಾಡಿದ ಕಿಚ್ಚ ಸುದೀಪ್ ಒಂದಷ್ಟು ಕುತೂಹಲಕಾರಿ ಮಾಹಿತಿಗಳನ್ನು ಹಂಚಿಕೊಂಡರು. ಚಿತ್ರರಂಗಕ್ಕೆ ಧನ್ಯವಾದ ತಿಳಿಸುತ್ತಾ ಮಾತು ಪ್ರಾರಂಭಿಸಿದ ಕಿಚ್ಚ ಕಪ್ಪು ಬಟ್ಟೆ ಧರಿಸುವ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ಬಹಿರಂಗಪಡಿಸಿದರು. ‘ಕಪ್ಪು ಬಟ್ಟೆ ಧರಿಸಲು ಕಾರಣ ರವಿ ಸರ್’ ಎಂದು ಹೇಳಿದ್ದಾರೆ. ಚಿಕ್ಕವನಾಗಿದ್ದಾಗಿಂದ ರವಿಚಂದ್ರನ್ ಅವರ ಸಿನಿಮಾಗಳನ್ನು ನೋಡಿ ಬೆಳೆದವನು. ಅವರ ಸಿನಿಮಾಗಳನ್ನು ನೋಡಿ ನಾನು ಕೂಡ ಕಪ್ಪು ಬಟ್ಟೆ ಹಾಕುತ್ತಿದ್ದೆ ಎಂದರು.

ಒಮ್ಮೆ ರವಿ ಸರ್ ಅವರನ್ನೆ ನಾನು ಕೇಳಿದ್ದೆ, ಯಾಕೆ ನೀವು ಯಾವಾಗಲು ಕಪ್ಪು ಬಟ್ಟೆ ಧರಿಸುತ್ತೀರಿ ಅಂತ. ಆಗ ಅವರು ಎರಡು ಕಾರಣ ಇದೆ ಎಂದು ಹೇಳಿದ್ದರು. ಒಂದು ನಾವು ಬೆಳ್ಳಗೆ ಕಾಣುತ್ತೇವೆ, ಎರಡನೇಯದು ತೆಳ್ಳಗೆ ಕಾಣುತ್ತೇವೆ ಎಂದಿದ್ದರು ಎಂಬ ರವಿಚಂದ್ರನ್ ಮಾತುಗಳನ್ನು ಕಿಚ್ಚ ಮೆಲುಕು ಹಾಕಿಕೊಂಡರು. ಅಲ್ಲದೆ ನಿಮ್ಮಂತಹ ಹಿರಿಯರು ನಮ್ಮನ್ನು ತಿದ್ದಲು ಇರಬೇಕು ಎನ್ನುತ್ತಾ ಧನ್ಯವಾದ ಅರ್ಪಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top