fbpx
ಸಮಾಚಾರ

ಮಾರ್ಚ್ 29: ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ

ಮಾರ್ಚ್ 30, 2021 ಮಂಗಳವಾರ
ವರ್ಷ : 1942 ಶಾರ್ವರಿ
ತಿಂಗಳು : ಫಾಲ್ಗುಣ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ದ್ವಿತೀಯಾ 5:26 pm
ನಕ್ಷತ್ರ : ಚಿತ್ತ 12:21 pm
ಯೋಗ : ವ್ಯಾಘಾತ 1:54 pm
ಕರಣ : ತೈತುಲ 7:10 am ಗರಿಜ 5:26 pm

Time to be Avoided
ರಾಹುಕಾಲ : 3:25 pm – 4:56 pm
ಯಮಗಂಡ : 9:22 am – 10:53 am
ದುರ್ಮುಹುರ್ತ : 8:45 am – 9:34 am, 11:12 pm – 12:00 am
ವಿಷ : 5:21 pm – 6:46 pm
ಗುಳಿಕ : 12:24 pm – 1:54 pm

Good Time to be Used
ಅಮೃತಕಾಲ : 6:40 am – 8:05 am
ಅಭಿಜಿತ್ : 11:59 am – 12:48 pm

Other Data
ಸೂರ್ಯೋದಯ : 6:17 am
ಸುರ್ಯಾಸ್ತಮಯ : 6:31 pm
ರವಿರಾಶಿ : ಮೀನ
ಚಂದ್ರರಾಶಿ : ತುಲ

 

 

ಮೇಷ (Mesha)

 

ನಿಮ್ಮ ಮೇಲೆ ಶತ್ರುತ್ವ ಮಾಡುತ್ತಿದ್ದವರು ತಣ್ಣಗಾಗಿ ನಿಮಗೆ ಶರಣಾಗತರಾಗುವರು ಮತ್ತು ನಿಮ್ಮ ಸ್ನೇಹಹಸ್ತಕ್ಕಾಗಿ ಕಾತರ ವ್ಯಕ್ತಪಡಿಸುವರು. ಮಕ್ಕಳ ಆರೋಗ್ಯದಲ್ಲಿ ಸ್ವಲ್ಪ ಎಚ್ಚರಿಕೆ ಅಗತ್ಯ.

ವೃಷಭ (Vrushabh)


ಸರಕಾರಿ ಉನ್ನತ ಅಧಿಕಾರಿಗಳ ದರ್ಶನದಿಂದ ಲಾಭ. ಹಿರಿಯ ಅಧಿಕಾರಿಗಳು ಮತ್ತು ಹಿತೈಷಿಗಳ ಕೃಪಾ ದೃಷ್ಟಿಯಿಂದ ಕಾರ್ಯಾನುಕೂಲವಾಗುವುದು. ಎಲ್ಲ ಕಾರ್ಯಗಳಲ್ಲೂ ಜಯ ನಿಮ್ಮದಾಗುವುದು.

ಮಿಥುನ (Mithuna)


ನಿಮ್ಮ ಭಾವನೆಗಳಿಗೆ ಹೆಚ್ಚಿನ ಮನ್ನಣೆ ದೊರೆಯುವುದು. ಹಮ್ಮಿಕೊಂಡ ಕಾರ್ಯಗಳಲ್ಲಿ ಜಯ ನಿಮ್ಮದಾಗುವುದು. ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಹಿಡಿದ ಕೆಲಸ ಬಿಡದಿರಿ

ಕರ್ಕ (Karka)


ನಡೆಯುವ ವ್ಯಕ್ತಿ ಎಡವುವಂತೆ ಈ ದಿನ ಕೆಲಸ ಕಾರ್ಯಗಳಲ್ಲಿ ಹಿನ್ನಡೆ. ಅಧಿಕ ಖರ್ಚು ಎದುರಾಗುವುದು. ಸಕಾರಾತ್ಮಕ ಚಿಂತನೆಯಿಂದ ಮಾಡುವ ಕೆಲಸಗಳು ನಿಮಗೆ ಗೌರವ ತೋರುವುದು.

ಸಿಂಹ (Simha)


ಬಹಳ ದಿನಗಳಿಂದ ಎದುರು ನೋಡುತ್ತಿದ್ದ ಯಾತ್ರಾ ಸಂಕಲ್ಪ ಈಡೇರುವ ಸಂಭವವಿದೆ. ಹೊಸ ಸಮಸ್ಯೆಗಳು ಸೃಷ್ಟಿಯಾಗದಂತೆ ಎಚ್ಚರ ವಹಿಸಿರಿ. ವ್ಯಾಪಾರ-ವ್ಯವಹಾರಗಳಲ್ಲಿ ಉತ್ತಮ ಫಲ ನಿರೀಕ್ಷಿಸುವಿರಿ. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುವುದು.

ಕನ್ಯಾರಾಶಿ (Kanya)


ಹಳೆಯ ವೈಭವಗಳನ್ನು ನೆನೆಯುತ್ತ ಕೂತರೆ ಭವಿಷ್ಯ ಉಜ್ವಲವಾಗದು. ಭವಿಷ್ಯದ ಬಗ್ಗೆ ನೀವೀಗ ದಿಟ್ಟ ನಿರ್ಧಾರಗಳನ್ನು ಕೈಕೊಳ್ಳಬೇಕು. ಮುಖ್ಯವಾಗಿ ಆಲಸ್ಯದಿಂದ ಈ ದಿನ ಹೊರ ಬರಬೇಕು. ಗಟ್ಟಿ ನಿರ್ಧಾರ ಮಾಡಿ ಮುಂದಡಿ ಇಡಿ. ಸ್ಥಾನಮಾನಗಳು ನಿಮ್ಮನ್ನು ಹುಡುಕಿಕೊಂಡು ಬರುವುದು.

ತುಲಾ (Tula)


ವ್ಯಾಪಾರ ವ್ಯವಹಾರದಲ್ಲಿ ಆಕಸ್ಮಿಕ ಲಾಭವುಂಟಾಗಿ ಜೀವನಮಟ್ಟ ಸುಧಾರಿಸುವ ಸಂಭವವಿದೆ. ನಿಮ್ಮ ವಿರೋಧಿಗಳ ಯೋಜನೆಗಳು ತಲೆಕೆಳಗಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಸ್ಥಿರಾಸ್ಥಿ ಖರೀದಿ ಉತ್ತಮವಾಗಿರುವುದು.

ವೃಶ್ಚಿಕ (Vrushchika)


ಬಂಧುಮಿತ್ರರ ಆಗಮನದಿಂದ ಮನೋಲ್ಲಾಸ. ನಿಮ್ಮ ಸಾಧನೆಯನ್ನು ಎಲ್ಲರೂ ಕೊಂಡಾಡುವರು. ನೂತನ ಪರಿಸರದಲ್ಲಿ ಕಾರ್ಯ ನಿರ್ವಹಿಸಬೇಕಾಗುವುದು. ಕೋರ್ಟು ಕಚೇರಿಯಲ್ಲಿನ ವ್ಯಾಜ್ಯಗಳು ನಿಮ್ಮ ಪರವಾಗಿ ನಿಲ್ಲುವವು. ಆರ್ಥಿಕ ಸ್ಥಿತಿ ಸಮಾಧಾನಕರ.

ಧನು ರಾಶಿ (Dhanu)


ಈದಿನ ನಿಮ್ಮ ಮಡದಿಯ ಮಾತು ಕೇಳುವುದರಿಂದ ಅಧಿಕ ಲಾಭಾಂಶವನ್ನೇ ಹೊಂದುವಿರಿ. ಪತ್ನಿ-ಪುತ್ರರಲ್ಲಿಯ ಅಸಮಾಧಾನ ತಿಳಿಗೊಳ್ಳುವುದು. ಆರೋಗ್ಯ ಉತ್ತಮ.ಬೇಡದ ವಿಚಾರಗಳು ನಿಮಗೆ ಘಾಸಿ ಮಾಡುವುದು. ಪ್ರಯಾಣದಲ್ಲಿ ಎಚ್ಚರ.

ಮಕರ (Makara)


ಹೊಸ ರೀತಿಯ ಕಾರ್ಯ ಮಾಡುವಂತೆ ಗ್ರಹಗಳು ಪ್ರೇರೇಪಿಸುತ್ತವೆ. ಅದರಲ್ಲಿ ಯಶಸ್ಸನ್ನು ಕಾಣುವ ಸೌಭಾಗ್ಯ ನಿಮ್ಮದಾಗುವುದು. ದೈವದತ್ತವಾಗಿ ಬಂದ ಜಾಣ್ಮೆಯನ್ನು ಉಪಯೋಗಿಸಿಕೊಳ್ಳಿ. ಮಾತಿನಲ್ಲಿ ಮೃದುತ್ವ ರೂಢಿಸಿಕೊಳ್ಳಿ.

ಕುಂಭರಾಶಿ (Kumbha)


ವ್ಯಾಪಾರ ವ್ಯವಹಾರದಲ್ಲಿ ಅಧಿಕ ಲಾಭಾಂಶ ಬರುವುದು. ಸಂತೋಷದಿಂದ ಕೆಲಸ ಕಾರ್ಯಗಳನ್ನು ಮುಗಿಸುವಿರಿ. ಆಂಜನೇಯ ಸ್ತೋತ್ರವನ್ನು ಪಠಿಸಿ. ಆಂಜನೇಯ ನಿಮಗೆ ಉತ್ತಮ ಶಿಕ್ಷ ಣವನ್ನು ನೀಡುವರು ಮತ್ತು ಜನರ ನಿಜವಾದ ಬಣ್ಣವನ್ನು ಬಯಲು ಮಾಡಿಸುವರು

ಮೀನರಾಶಿ (Meena)


ಅತ್ಯಂತ ಭಾವುಕರಾಗುವ ನೀವು ಕೆಲವೊಮ್ಮೆ ನಿಮ್ಮ ಮನಸ್ಸಿನ ಎಲ್ಲ ವಿಚಾರವನ್ನು ಪರರ ಮುಂದೆ ಹೇಳಿಕೊಳ್ಳುವಿರಿ. ಇದರಿಂದ ಬೇರೊಂದು ಅರ್ಥವೇ ಪ್ರಚಾರಕ್ಕೆ ದೊರೆಯುವುದು. ಆದ್ದರಿಂದ ದುರ್ಗಾ ಜಪ ಮಾಡಿ. ಹಣಕಾಸಿನ ತೊಂದರೆ ಇರುವುದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top