fbpx
ಸಮಾಚಾರ

ಬಿಗ್​ಬಾಸ್​ ಸೀಸನ್ 08: ಈ ವಾರ ಮನೆಯಿಂದ ಹೊರಹೋಗಲು ಬರೋಬ್ಬರಿ 6 ಜನ ಸದಸ್ಯರು ನಾಮಿನೇಟ್​

ಯಶಸ್ವಿ ಐದು ವಾರಗಳನ್ನು ಮುಗಿಸಿ ಮುನ್ನುಗ್ಗುತ್ತಿರುವ ಕನ್ನಡದ ಅತಿದೊಡ್ಡ ರಿಯಾಲಿಟಿ ಷೋ ಬಿಗ್ ಬಾಸ್ ನ 6ನೇ ವಾರದ ಚಟುವಟಿಕೆಗಳು ಆರಂಭಗೊಂಡಿವೆ. ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದ ಹದಿನೇಳು ಜನರ ಪೈಕಿ ಈಗಾಗಲೇ 5 ಮಂದಿ ಸ್ಪರ್ಧಿಗಳು ಮನೆಯಿಂದ ಹೊರನಡೆದಿದ್ದು ಒಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ.. ಈ ಮೂಲಕ ಸದ್ಯ ಮನೆಯಲ್ಲಿ ಹದಿಮೂರು ಜನರು ಉಳಿದುಕೊಂಡಿದ್ದಾರೆ.

 

 

ಬಿಗ್ ಬಾಸ್ ಮನೆಯಲ್ಲಿ 6ನೇ ವಾರ ಮತ್ತೆ 6 ಸದಸ್ಯರು ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ. ಅರವಿಂದ್, ಪ್ರಶಾಂತ್ ಸಂಬರಗಿ, ಶಮಂತ್, ನಿಧಿ ಸುಬ್ಬಯ್ಯ, ಶುಭಾ ಪೂಂಜಾ ಮತ್ತು ರಾಜೀವ್ ಈ ಪಟ್ಟಿಯಲ್ಲಿದ್ದಾರೆ. ಉಳಿದಂತೆ ವೈಷ್ಣವಿ, ದಿವ್ಯಾ ಸುರೇಶ್, ವಿಶ್ವನಾಥ್, ಚಕ್ರವರ್ತಿ ಚಂದ್ರಚೂಡ್, ದಿವ್ಯಾ ಉರುಡುಗ ಮತ್ತು ನಾಯಕ ಮಂಜು ಪಾವಗಡ ಅವರು ಎಲಿಮಿನೇಶನ್ ಭಯವಿಲ್ಲದೆ ಈ ವಾರ ಮನೆಯಲ್ಲಿ ಮುಂದುವರಿದಿದ್ದಾರೆ.

ಇಷ್ಟು ವಾರಗಳ ಕಾಲ ನಾಮಿನೇಷನ್​ ಪ್ರಕ್ರಿಯೆ ಬೇರೆ ರೀತಿ ನಡೆಯುತ್ತಿತ್ತು. ಸ್ಪರ್ಧಿಗಳೆಲ್ಲರೂ ಒಬ್ಬೊಬ್ಬರಾಗಿಯೇ ಕನ್​ಫೆಷನ್​ ರೂಮ್​ಗೆ ಬಂದು, ಯಾವ ವ್ಯಕ್ತಿ ನಾಮಿನೇಟ್​ ಆಗಬೇಕು ಎಂಬುದನ್ನು ತಿಳಿಸಬೇಕಿತ್ತು. ಈ ಬಾರಿ ಕನ್ಫೇಶನ್ ಕೊಠಡಿಗೆ ಕರೆಯದೆ ಇದ್ದಲ್ಲಿಯೇ ನಾಮಿನೇಟ್ ಮಾಡಲು ಬಿಗ್ ಬಾಸ್ ಸ್ಪರ್ಧಿಗಳಿಗೆ ಸೂಚಿಸಿದ್ದರು. ಅದರಂತೆ ಮನೆಯ ಸದಸ್ಯರ ಆಯ್ಕೆಗಳ ಅನುಸಾರ “ದಿವ್ಯ ಸುರೇಶ್, ಶಮಂತ್, ನಿಧಿ ಸುಬ್ಬಯ್ಯ, ಶುಭ ಪುಂಜ ಮತ್ತು ಪ್ರಶಾಂತ್ ಸಂಬರಗಿ” ನಾಮಿನೇಟ್ ಆಗಿದ್ದರು.

ಮನೆಯ ಸದಸ್ಯರ ಆಯ್ಕೆಯ ನಂತರ, ಬಿಗ್ ಬಾಸ್, ಮಂಜು ಪಾವಗಡ ಅವರಿಗೆ ‘ನಾಯಕನಾಗಿರುವ ನೀವು ಒಬ್ಬ ಸದಸ್ಯನನ್ನು ನಾಮಿನೇಟ್ ಮಾಡಬೇಕು’ ಎಂದು ಸೂಚಿಸಿದರು. ಇದರನ್ವಯ, ತಮಗೆ ಅತ್ಯಂತ ಟಫ್ ಕಾಂಪಿಟೇಟರ್ ಎಂಬ ಕಾರಣಕ್ಕೆ ರಾಜೀವ್ ಹೆಸರನ್ನು ಮಂಜು ಸೂಚಿಸಿದರು. ಈ ಮೂಲಕ 6 ಸದಸ್ಯರು ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top